ಸ್ಥಳೀಯ ಸುದ್ದಿಗಳು

ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಶೀಘ್ರದಲ್ಲಿಯೇ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಮುಂದಿನ ಬಜೆಟ್ ನಲ್ಲಿ 400 ವಂದೇ ಭಾರತ್ ರೈಲುಗಳನ್ನ ಆರಂಭಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ಸಂಸದ ರಾಘವೇಂದ್ರ ಭರವಸೆ ನೀಡಿದ್ದಾರೆ.

ಅವರು ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಪ್ರಧಾನಿ ಅವರು ದೆಹಲಿಯಲ್ಲಿ ವರ್ಚ್ಯೂವಲ್ ಮೂಲಕ ಉದ್ಘಾಟಿಸುವುದಕ್ಕಿಂತ ಮೊದಲು ವೇದಿಕೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ದೇಶದಾದ್ಯಂತ 553 ರೈಲು ನಿಲ್ದಾಣಗಳು ಅಪ್ ಗ್ರೇಡ್ ಆಗಲಿದೆ. ರಾಜ್ಯದಲ್ಲಿ 15 ರೈಲು ನಿಲ್ದಾಣಗಳು 373 ಕೋಟಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ತಾಳಗುಪ್ಪ, ಸಾಗರ ಮತ್ತು ಶಿವಮೊಗ್ಗ ರೈಲು ನಿಲ್ದಾಣಗಳು 79 ಕೋಟಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಲಿಫ್ಟ್, ಅಕ್ಸೆಲೇಟರ್ ಮೊದಲಾದ ಸೌಕರ್ಯಗಳನ್ನ ಕಲ್ಪಿಸಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಈ ಮೊದಲು 67 ವರ್ಷಗಳಲ್ಲಿ ನಡೆದ ಸಾಧನೆಗಳು ಒಂದಾದರೆ 10 ವರ್ಷಗಳಲ್ಲಿ ಆದ ಸಾಧನೆ ಮತ್ತೊಂದೆಡೆ ಆಗಿದೆ. ದೇಶದ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಆಚರಣೆಯಲ್ಲಿರುವ ನಮಗೆ ದೇಶದಾದ್ಯಂತ ಮೇಲ್ದರ್ಜೆಗೆ ಏರಿಸುವ ರೈಲು ನಿಲ್ದಾಣವನ್ನ ಅಮೃತ ಭಾರತ್ ಯೋಜನೆ ಅಡಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.

ಇದುವರೆಗೂ ಐದು ನಗರದಲ್ಲಿರುವ‌ ಮೆಟ್ರೋ‌ರೈಲು ಮಾರ್ಗ‌ ಇದ್ದಿದ್ದು 243 ಕಿಮಿಗಳು ಮಾತ್ರ, ಇತ್ತು. ಈಗ ಈ ಮೆಟ್ರೋ ಮಾರ್ಗವನ್ನ 15 ನಗರಗಳಿ ವಿಸ್ತರಿಸಿ 873 ಕಿಮಿ ಮಾರ್ಗ ನಿರ್ಮಿಸಲಾಗಿದೆ. ಇದೆಲ್ಲ ಸಾಧ್ಯವಾಗಿರುವುದು ಮೋದಿಯವರು ಪ್ರಧಾನಿ ಆದ ನಂತರ ಎಂದು ತಿಳಿಸಿದರು.

ವೇದಿಕೆಯ ಮೆಲೆ ಉಪಸ್ಥಿತರಿದ್ದ ದಕ್ಷಿಣ ಪಶ್ಚಿಮ ರೈಲ್ವೆಯ ಮ್ಯಾನೇಜರ್ ಅವರಿಗೆ ತಿರುಪತಿ-ಶಿವಮೊಗ್ಗದ ನಡುವೆ ಮತ್ತೆ ಮರು ಸಂಚಾರಕ್ಕೆ ಅವಕಾಶ ನೀಡುವಂತೆ ಕೋರಿದರು. ಅರಸಾಳುವಿನಲ್ಲಿ 2.17 ಕೋಟಿಯ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.

ಇದನ್ನೂ ಓದಿ-https://suddilive.in/archives/9609

Related Articles

Leave a Reply

Your email address will not be published. Required fields are marked *

Back to top button