ರಾಜಕೀಯ ಸುದ್ದಿಗಳು

ಸಂಸದ ರಾಘವೇಂದ್ರ ಒಬ್ಬ ಸುಳ್ಳುಗಾರ-ಮಧು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಹಠ ಛಲದಿಂದ ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಚಾರ ಭರದಿಂದ ಸಾಗುತ್ತಿದೆ ಎಂದು‌ ಸಚಿವ ಮಧು‌ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಮಾತ್ರ ಕಾಣಿಸಿಕೊಳ್ಳದೆ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು ಮತ್ತು ನಾಳೆ ಹಳ್ಳಿ ಪಚಾರ ಪಡಿಸಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗೆ ವಿಶ್ವಾಸದಿಂದ ಭರ್ಜರಿ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.

ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಇತರೆಡೆಗಳಲ್ಲಿ ಪ್ರಕಟವಾಗುವುದನ್ನ ಗಮನಿಸಿದರೆ ಕಾಂಗ್ರೆಸ್ ಗೆ ಹೆಚ್ಚು ಒಲವಿದೆ. ಗ್ಯಾರೆಂಟಿಗಳು ಈ ಬಾರಿ ಕಾಂಗ್ರೆಸ್ ಕೈ ಹಿಡಿಯಲಿದೆ ಎಂದರು.

ಸಂಸದರಿಗೆ ಜನರ ಎದುರು ಬಂದು ದೂರು ನೀಡಲು ಸಾಧ್ಯವಾಗಿಲ್ಲ. ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಶರಾವತಿ ಮುಳುಗಡೆ ಸಂಸ್ತ್ರಸ್ತರ ಬಗ್ಗೆ ಕಾಂಗ್ರೆಸ್ ಪಕ್ಷ‌ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಸುಳ್ಳಿನ ಸರ್ದಾರ‌ ಎಂದು ಉಲ್ಲೇಖಿಸಿದ‌ ಮಧು ಬಂಗಾರಪ್ಪ, ಬಿಜೆಪಿಯ ಸಮಾವೇಶ ನಡೆಸಲಿ, ಪಂಪ್ ಸೆಟ್ ಗೆ ಉಚಿತ ವಿದ್ಯುತ್‌ ಕೊಟ್ಟಿದ್ದು ಎಂದು ಸ್ಪಷ್ಟಪಡಿಸಲಿ.

ಅದನ್ನ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಲಿ ಬಿಎಸ್ ವೈ ಕೊಟ್ಟಿದ್ದ? ಬಂಗಾರಪ್ಪನವರು ಕೊಟ್ಟಿದ್ದ ಅಂತ ಹೇಳಲಿ ಎಂದು ಸವಾಲು ಎಸೆದರು.

ಬ್ರಿಟಿಶ್ ಸಂಪ್ರದಾಯವನ್ನ ಜಾರಿಗೊಳಿಸುತ್ತಿರುವ ಬಿಜೆಪಿಗರು, ಅಮಿತ್ ಶಾ ಮತ್ತು ಮೋದಿ ಬಗ್ಗೆ ವಿಶ್ವಮಾನವ ಆಗಬೇಕು ಎನ್ನುತ್ತಾರೆ. ಆದರೆ ಬರದ ಬಗ್ಗೆ ಮೌನವಾಗಿರುತ್ತಾರೆ. ಫೋಟೊ ತೋರಿಸಿ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ 2010 ರಲ್ಲಿ ಶರಾವತಿ ಹಕ್ಕುಪತ್ರವನ್ನ ಕಾಗೋಡು ತಿಮ್ಮಪ್ಪನ ಜೊತೆ ಹಂಚಿ, ಈಗ ನ್ಯಾಯಾಲಯದ‌ಲ್ಲಿ ಪ್ರಕರಣ ಬೀಳುವಂತೆ ಮಾಡಿದ್ದು ನಿಮ್ಮ ಸರ್ಕಾರ ಎಂದರು.

ಎನ್ ಡಿಆರ್ ಎಪ್ 15 ನೇ ಹಣಕಾಸಿನಲ್ಲಿ ಮೋಸಮಾಡಲಾಗಿದೆ. 1.5 ಲಕ್ಷಹಣ ಕಡಿಮೆ ಬಂದಿದೆ. ಯಾವ ಪಕ್ಷವನ್ನ‌ ಬೆಳೆಸಿದ್ರಿ ಅರೇ ನಿಮಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಈಶ್ವರಪ್ಪನವರು ಹೇಳುತ್ತಿದ್ದಾರೆ ಅದು ಸತ್ಯ, ನೀವು ಡಮ್ಮಿನೋ ಅಥವಾ ಈಶ್ವರಪ್ಪ ಡಮ್ಮಿನೋ ತೀರ್ಮಾನ ಮಾಡಿ ಎಂದು ಸವಾಲು ಎಸೆದರು.

ಏ.15 ರಂದು ನಾಮಪತ್ರ ಸಲ್ಲಿಸಲಾಗುತ್ತಿದೆ. ಗೀತಾಶಿವರಾಜ್ ಕುಮಾರ್ ಏ.15 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಮದ ಮೆರವಣಿಗೆಯಲ್ಲಿ ಬಂದು ನಾಮ ಪತ್ರ ಸಲ್ಲಿಸುತ್ತಿದ್ದಾರೆ. ಡಿಪಾಸಿಟ್ ಹಣವನ್ನ ಮಹಿಳೆಯರು ನೀಡಲಿದ್ದಾರೆ. ಗ್ಯಾರೆಂಟಿ ಹಣದಮೂಲಕ ಡಿಪಾಸಿಟ್ ಮಾಡಲಾಗುತ್ತಿದೆ. 8 ವಿಧಾನ ಸಭೆ ಚುನಾವಣೆಯಲ್ಲಿ ಲೀಡ್ ಪಡೆದೆ ಪಡೆಯುತ್ತೇವೆ. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ 420 ಗ್ಯಾರೆಂಟಿ ಎಂದು ಹೆಸರಿಟ್ಟಿದ್ದಾರೆ.

420 ಆರಗ ಜ್ಞಾನೇಂದ್ರನೇ ಆಗಿದ್ದಾರೆ. ನೀವೇ ಗ್ಯಾರೆಂಟಿ ಸಮಾವೇಶದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಡಿಜೆ ಸಂಶೋಧನ ಕೇಂದ್ರ ತೆರೆಯುವುದಾಗಿ ಹೇಳಿ ಹೋದವರು 420. ಶಿಕಾರಿಪುರದಲ್ಲಿ ನಾನು ಬಿಜೆಪಿ ಕಾರ್ಯಕರ್ತರನ್ನ ಚೇಲಾ ಎಂದು ಹೇಳಿದ್ದಾರೆ. ನಾನು ಹಾಗೆ ಹೇಳಿಲ್ಲ. ವಾಗ್ದಾಳಿ ನಡೆಸಿದ್ದಾರೆ.

ಈ ಚುನಾವಣೆಯಲ್ಲಿ ಈ ಜಿಲೆಯ ಮಗಳು ರಾಘವೇಂದ್ರರನ್ನ ಸೋಲಿಸುತ್ತಾರೆ. ಗೀತರನ್ನ ಈಶ್ವರಪ್ಪ ಡಮ್ಮಿ ಎಂದು ಕರೆದಿದ್ದಾರೆ. ಬಿಎಸ್ ವೈ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮೂಲಕ ರಾಜಕಾರಣ ನಡೆಯುತ್ತಿದೆ ಎಂದರು.

ಗೀತರವರ ಬಗ್ಗೆ ಹಗೂರವಾಗಿ ಮಾತನಾಡಿದರೆ ಈಶ್ವರಪ್ಪನವರು ಅನುಭವಿಸುತ್ತಾರೆ ಸಂಸದ ರಾಘವೇಂದ್ರರೂ ಅನುಭವಿಸುತ್ತಾರೆ. ಇದನ್ನ ಹೃದಯಪೂರಕವಾಗಿ ಹೇಳ್ತಾ ಇದ್ದೀನಿ. ಅದು ಈಶ್ವರಪ್ಪನವರಿಗೆ ಅನ್ವಯಿಸುತ್ತದೆ. ಆದರೆ ರಾಘವೇಂದ್ರರಿಗೆ ಅಲ್ಲ ಎಂದು‌ ನೇರ ಎಚ್ಚರಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12075

Related Articles

Leave a Reply

Your email address will not be published. Required fields are marked *

Back to top button