ಇಂಡಿಯಾ-ಭಾರತ ಹೆಸರಿನಲ್ಲಿ ತಿಪ್ಪೇ ಸಾರುದ್ರಾ ಮಧು ಬಂಗಾರಪ್ಪ?

ಸುದ್ದಿಲೈವ್/ಶಿವಮೊಗ್ಗ

ಮಾಜಿ ಸಿಎಂ ದಿ ಎಸ್.ಬಂಗಾರಪ್ಪ ಜನ್ಮ ದಿನ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಅವರ ಹುಟ್ಟುಹಬ್ಬವನ್ನ ಸಚಿವ ಮಧು ಬಂಗಾರಪ್ಪ ಆಚರಿಸಿದ್ದಾರೆ. ತಂದೆಯ ಜನ್ಮದಿನವನ್ನು ಅರ್ಥಗರ್ಭಿತವಾಗಿ ಆಚರಿಸಿರುವುದಾಗಿ ಹೇಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಹುಟ್ಟು ಆಚರಿಸಲಾಗಿದೆ. ಕೇಕ್ ಕಟ್ ಮಾಡಿಸಿ ಸಚಿವರು ಸಂಭ್ರಮಾಚರಿಸಿದ್ದಾರೆ.ಸರ್ಕಾರಿ ಶಾಲೆಗೆ ಸರ್ಪ್ರೈಸ್ ವಿಸಿಟ್ ನೀಡಿ, ಬಂಗಾರಪ್ಪ ಜನ್ಮದಿನ ಆಚರಣೆನಡೆಸಲಾಗಿದೆ.
ಕೇಕ್ ಕಟ್ ಮಾಡಿಸಿ, ಮಕ್ಕಳಿಗೆ ಸಚಿವರಿಂದ ಪುಸ್ತಕ ವಿತರಿಸಲಾಯಿತು. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ತಂದೆ ಸಿಎಂ ಆಗಿದ್ದಾಗ ಶಾಲೆಗೆ ಬರೋ ಮಕ್ಕಳಿಗೆ ಒಂದು ರೂ. ಕೊಡುವ ಯೋಜನೆ ಮಾಡಿದ್ರು. ಇವತ್ತು ನಾನು ಕೂಡ ಶಿಕ್ಷಣ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಬದಲಾವಣೆ ತರುವ ಕೆಲಸ ಆರಂಭಿಸಿದ್ದೇನೆ ಎಂದರು.
ಇದೇ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ತಂದೆಯ ಬರ್ತಡೆ ಮಾಡಿದ್ದೇವೆ. ಮಕ್ಕಳ ಜೊತೆಗೆ ಊಟ ಮಾಡಿ, ಕಾಲ ಕಳೆದಿದ್ದೇವೆ ಎಂದರು.
ಇಂಡಿಯಾ- ಭಾರತ ಹೆಸರಿನಲ್ಲಿ ಮಧು ಬಂಗಾರಪ್ಪ ತಿಪ್ಪೇ ಸಾರುದ್ರಾ?
ಕೇಂದ್ರ ಎಲ್ಲಾವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಲು ಈ ರೀತಿ ಲಗಾಮು ಹಾಕಲು ಯತ್ನಿಸುತ್ತಿದೆ.ಇದು ಸರಿಯಲ್ಲ. ಆಯಾ ರಾಜ್ಯಕ್ಕೆ ತಕ್ಕಂತೆ ಇರುವ ಸಂಪ್ರದಾಯವನ್ನು ಹಾಗೆ ಇರುವಂತೆ ಬಿಡಬೇಕು ಆದರೆ ಬಹುತೇಕ ಕನ್ನಡಿಗರು ಭಾರತವೆಂದೇ ಹೆಸರಿಟ್ಟು ಕರೆದರೂ ಸಚಿವರ ಹೇಳಿಕೆ ಕುತೂಹಲ ಮೂಡಿಸಿದೆ.
ಭಾರತ, ಇಂಡಿಯಾ ಎಂದು ಸುಮ್ಮನೆ ಗೊಂದಲವನ್ನುಂಟು ಮಾಡುವುದು ಸರಿಯಲ್ಲ. ಮಕ್ಕಳನ್ನು ಶುದ್ದವಾಗಿ ಬೆಳೆಸಲು ಅವಕಾಶ ನೀಡಬೇಕು ಎಂದು ತಿಪ್ಪೆ ಸಾರಿದ್ದಾರೆ.
ರಾಜ್ಯದಲ್ಲಿ ಹುಲಿ ಉಗುರು ಗೊಂದಲ ವಿಚಾರ.
ಹುಲಿ ಉಗುರು ವಿಚಾರದಲ್ಲಿ ಎಲ್ಲರೂ ಸಹ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಜೀವನದಲ್ಲಿ ಬಹಳ ಎಚ್ಚರಿಕೆ ಅಗತ್ಯ.ಕಾನೂನು ಎಲ್ಲರಿಗೂ ಒಂದೇ ಎಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.
ಡಿಸಿಎಂ ಕಚೇರಿ ನವೀಕರಣ ವಿಚಾರ
ಡಿಸಿಎಂ ಕಚೇರಿ ನವೀಕರಣವನ್ನ ವಿರೋಧ ಪಕ್ಷದವರು ಕಾಂಗ್ರೆಸಿಗರನ್ನ ಟೀಕೆ ಮಾಡುತ್ತಿದ್ದಾರೆ. ಈ ಮುಂಚೆ ಅವರು ನಮ್ಮಂತೆಯೇ ಆಡಳಿತ ನಡೆಸಿದ್ದರು ಎಂಬುದನ್ನು ಮರೆಯಬಾರದು. ವಿರೋಧ ಪಕ್ಷದಲ್ಲಿರುವವರು ಕಾವೇರಿ, ಜಿ ಎಸ್ ಟಿ, ಶರಾವತಿ ಸೇರಿದಂತೆ ಯಾವುದರ ಬಗ್ಗೆಯು ಕೇಂದ್ರದೊಂದಿಗೆ ಮಾತನಾಡಿಲ್ಲ. ಈಗ ನಮ್ಮ ವಿರುದ್ಧ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು.
ಕೇಂದ್ರವು ಶಿಕ್ಷಣ ವಿಚಾರದಲ್ಲಿ ನಮ್ಮ ರಾಜ್ಯದ ಮಕ್ಕಳಿಗೆ 2.800 ರೂ ನೀಡುತ್ತಿದ್ದಾರೆ. ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ಮಕ್ಕಳಿಗೆ 5.200 ರೂ. ನೀಡ್ತಿದ್ದಾರೆ.ಈ ಬಗ್ಗೆ ಒಮ್ಮೆಯೂ ರಾಜ್ಯದೊಂದಿಗೆ ಮಾತನಾಡಿಲ್ಲ ಎಂದ ಮಧು ಬಂಗಾರಪ್ಪ ಆರೋಪಿಸಿದರು.
ಇದನ್ನೂ ಓದಿ-https://suddilive.in/archives/1862
