ಕ್ರೈಂ ನ್ಯೂಸ್

ನಾಪತ್ತೆಯಾದ ಮಗಳು ಹೋಗಿದ್ದೆಲ್ಲಿಗೆ? ಆಗಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಬಹಳ ಕುತೂಹಲ, ಕಾತುರ ಮತ್ತು ಭಯಂಕರ ಎನಿಸುವಂತಹ ಎಫ್ಐಆರ್ ದೊರೆತಿದೆ. ಈಕುತೂಹಲ ಕಾತುರ ಮಾಮೂಲಿ ಆದರೂ ಭಯಂಕರ ಯಾಕೆ ಎಂಬ ಪ್ರಶ್ನೆ ಓದುಗರಲ್ಲಿ ಕಾಡಲಿದೆ.

ಹಾಗಾದರೆ ಈ ಸ್ಟೋರಿ ಓದಿ, 22 ವರ್ಷದ ಯುವತಿ ದಿಡೀರ್ ಎಂದು ಮನೆ‌ಬಿಟ್ಟು ಹೋಗಿ ನನ್ನನ್ನ ಹುಡಕಬೇಡಿ ಎಂದು ಪೋಷಕರಿಗೆ ತಿಳಿಸಿ ಟ್ರಾನ್ಸ್ ಜೆಂಡರ್ ಆಗಿ ಪರಿಪವರ್ತನೆ ಆದಳಾ‌ ಎಂಬ ಅನುಮಾನಕ್ಕೆ ಈ ಮಿಸ್ಸಿಂಗ್ ಕಂಪ್ಲೇಟ್ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯೋರ್ವರಿಗೆ ಮೂರು ಜನ ಮಕ್ಕಳಿದ್ದು, ಮೊದಲಯವನು ಮತ್ತು ಎರಡನೇಯವನು ಗಂಡುಮಕ್ಕಳಾಗಿದ್ದು, ಮೂರನೇಯವಳು ಮಗಳು ಆಗಿರುತ್ತಾಳೆ. ಮಗಳು ಪ್ರಥಮ ಪಿ.ಯು.ಸಿಯಿಂದ ಶಿವಮೊಗ್ಗ ಹೊಳೆ ಬಸ್ ನಿಲ್ದಾಣದ ಹತ್ತಿರವಿರುವ ಬಿ.ಸಿ.ಎಂ.
ಹಾಸ್ಟೆಲ್ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿರುತ್ತಾಳೆ.

ಪಿಯುಸಿ ನಂತರ ಬಿ.ಕಾಂ ವಿದ್ಯಾಭ್ಯಾಸವನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮುಗಿಸಿರುತ್ತಾಳೆ. ಮಾ.21 ರಂದು ಹಾಸ್ಟೆಲ್ ನಿಂದ ಮನೆಗೆ ಬಂದಿರುತ್ತಾಳೆ. ನಂತರ ಮಾ.25 ರಂದು ಮಧ್ಯಾಹ್ನ 12-30 ಗಂಟೆಗೆ ಹಾಸ್ಟೆಲ್ ನಿಂದ ಅರ್ಧ ಲಗೇಜ್ ಮಾತ್ರ ತಂದಿರುತ್ತೇನೆ ಬಾಕಿ ಲಗೇಜ್ ಅನ್ನು ತರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ಬಂದಿರದೆ ಇರುವುದು ಪೊಷಕರಿಗೆ ಆತಂಕ ಹುಟ್ಟಿಸಿದೆ.

ಮಾ. 26 ರಂದು ಬಿ.ಸಿ.ಎಂ. ಹಾಸ್ಟೆಲ್ ಹೋಗಿ ಮಗಳ ಬಗ್ಗೆ ವಿಚಾರಿಸಿದಾಗ ಪೋಷಕರು ಹಾಸ್ಟೆಲ್ನಲ್ಲಿ ಅಡುಗೆ ಸಹಾಯಕರು ಹಾಸ್ಟೆಲ್ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಕಾಲೇಜಿಗೆ ಹೋಗಿ ವಿಚಾರಿಸಲಾಗಿ ಕಾಲೇಜಿಗೆ ಬಂದಿರುವುದಿಲ್ಲ ಎಂದು ತಿಳಿಸಲಾಗಿರುತ್ತದೆ.

ವಾಪಾಸ್ ಮನೆಗೆ ಬಂದ ಪೋಷಕರು, ಅದೇ ದಿನ ಮಧ್ಯಾಹ್ನ 3-00 ಗಂಟೆಗೆ ಒಂದು ನಂಬರ್ನಿಂದ ತಾಯಿ ಮೊಬೈಲ್ ನಂಬರ್ ಗೆ ಕರೆ ಬಂದು ಯುವತಿ ಮಾತನಾಡಿ ಅಮ್ಮಾ ನನ್ನನ್ನು ಹುಡುಕಬೇಡಿ, ನಾನು ಬೆಂಗಳೂರಿನಲ್ಲಿದ್ದೀನಿ ಅಂತಾ ಹೇಳಿ ಕರೆ ಕಟ್ ಮಾಡಿದ್ದಾಳೆ. ನಂತರ ಪೋಷಕರು ಪುನಃ ಅದೇ ನಂಬರ್ಗೆ ಕರೆ ಮಾಡಿದಾಗ ನಾವು ಬೆಂಗಳೂರಿನ ರಾಹಿ ಸಂಸ್ಥೆಯವರು ನೀವು ಪದೇ-ಪದೇ ಫೋನ್ ಮಾಡಬೇಡಿ ನೀವು ಫೋನ್ ಮಾಡಿದರೆ ನಾವು ನಿಮ್ಮ ಮೇಲೆ ದೂರು ನೀಡುತ್ತೇವೆ ಎಂದು ಹೇಳಿರುತ್ತಾರೆ.

ನಂತರ ಪೋಷಕರು ಫೋನ್ ಮಾಡಿರುವುದಿಲ್ಲ. ನಂತರ ರಾಹಿ ಸಂಸ್ಥೆಯವರು ಹೆಬ್ಬಾಳ ಪೊಲೀಸ್ ಠಾಣೆಗೆ ಬರಲು ತಿಳಿಸಿದ್ದು ಅದರಂತೆ ಪೊಷಕರು ಮಾ.28 ರಂದು ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಗೆ ಹೋಗಿರುತ್ತಾರೆ.

ರಾಹಿ ಸಂಸ್ಥೆಯವರೊಂದಿಗೆ ಪೋಷಕರು ಹೆಬ್ಬಾಳ ಠಾಣೆಗೆ ಬಂದು ಮಗಳನ್ನು ವಿಡೀಯೋ ಕಾಲ್ ಮುಖಾಂತರ ಮಾತನಾಡಿಸಿದ್ದಾರೆ. ವಿಡಿಯೋ ಕಾಲ್ ನಲ್ಲಿ ನನ್ನನ್ನ ಮಾತನಾಡಿಸಬೇಡಿ, ನೋಡಲು ಬರಬೇಡಿ, ನಾನು ನನ್ನ ಜೀವನವನ್ನು ರೂಪಿಸಿಕೊಳ್ಳುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿರುತ್ತಾಳೆ.

ಇದರಿಂದ ಪೋಷಕರಿಗೆ ಸಂಸ್ಥೆಯ ಮೇಲೆ ಅನುಮಾನವಿದ್ದು ಅವಳ ಭದ್ರತೆಯ ಬಗ್ಗೆ ಕಳವಳ ಆರಂಭವಾಗಿದೆ, ಅವಳಿಗೆ ಮುಂದೆ ಏನಾದರೂ ತೊಂದರೆಯಾಗಬಹುದೆಂಬ ಭಯದಿಂದ ಹೆಬ್ಬಾಳ ಠಾಣೆಯ ಅಧಿಕಾರಿಗಳಿಗೆ ಪೋಷಕರು ಮನವಿ ಮಾಡಿದ್ದಾರೆ.

ಮನವಿ ಮೇರೆಗೆ ಬೆಂಗಳೂರು ಪೊಲೀಸರು ಫೋನ್ ಮಾಡಿ ಮಗಳನ್ನ ಠಾಣೆಗೆ ಕರೆಸಿದ್ದಾರೆ. ಆಗ ಮಗಳು ಪೋಷಕರೊಂದಿಗೆ ಏನೂ ಮಾತನಾಡಿರುವುದಿಲ್ಲ. ರಾತ್ರಿ 8-00 ಗಂಟೆಗೆ ರಾಹಿ ಸಂಸ್ಥೆಯವರು ಮಗಳನ್ನ ವಾಪಾಸ್ ಕರೆದುಕೊಂಡು ಹೋಗಿರುತ್ತಾರೆ, ಹೋದ ದಾರಿಗೆ ಸುಂಕವಿಲ್ಲ ಎಂದು ಪೋಷಕರು ಶಿವಮೊಗ್ಗಕ್ಕೆ ವಾಪಾಸಾಗಿರುತ್ತದೆ‌.

ಮಗಳು ಹೈಸ್ಕೂಲ್ ಸ್ನೇಹಿತೆಯಳೊಬ್ಬಳು ಹುಡುಗಿಯು ಇತ್ತಿಚಿಗೆ ದೈಹಿಕವಾಗಿ ಹುಡುಗನಾಗಿ ಬದಲಾಗಿದ್ದು ದೃವನ್ ಎಂಬ ಹೆಸರು ಇಟ್ಟುಕೊಂಡಿರುತ್ತಾಳೆ. ಮಗಳನ್ನ ಈ ಸ್ನೇಹಿತೆಯೇ ಶಿವಮೊಗ್ಗದಿಂದ ಕರೆದುಕೊಂಡು ಹೋಗಿರಬಹುದು ಎಂಬ ಅನುಮಾನವನ್ನ‌ ಯುವತಿಯ ಪೋಷಕರು ಎಫ್ಐಆರ್ ನಲ್ಲಿ ತಿಳಿಸಿದ್ದಾರೆ. ರಾಹಿ ಸಂಸ್ಥೆಯವರ ಮೇಲೆ ಸೂಕ್ತ ತನಿಖೆ ನಡೆಸಿ ಕಾಣೆಯಾದ ಮಗಳನ್ನ ಪತ್ತೆ ಮಾಡಿಕೊಡಿ ಎಂದು ಪೊಷಕರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/11924

Related Articles

Leave a Reply

Your email address will not be published. Required fields are marked *

Back to top button