ಸ್ಥಳೀಯ ಸುದ್ದಿಗಳು

ನಿಗೂಢ ಸಾವಿಗೊಳಗಾದ್ರಾ ತಾಳಗುಂದದ ರುದ್ರೇಶ್!

ಸುದ್ದಿಲೈವ್/ಶಿವಮೊಗ್ಗ

ಶಿರಾಳಕೊಪ್ಪದಿಂದ ತಾಳಗುಂದಕ್ಕೆ ದ್ವಿಚಕ್ರವಾಹನದಲ್ಲಿ ಹೊರಟಿದ್ದ ವ್ಯಕ್ತಿ ಜಿಡ್ಡಿಕೆರೆ ಏರಿಯದ ಬಳಿ ಶವವಾಗಿ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ತಾಳಗು ಮನೆಗೆ ಹೋಗಬೇಕಿದ್ದ ಖಾಸಗಿ ಬಸ್ ನ ನಿರ್ವಾಹಕ ನಿಗೂಢ ಸಾವು ಕಂಡಿದ್ದಾನೆ. ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿನ್ನೆ ರಾತ್ರಿ ತಾಳಗುಂದ ಗ್ರಾಮದ ಮಡಿವಾಳರ ಜಯಪ್ಪ ಇವರ ಪುತ್ರ ರುದ್ರೇಶ್ ಬಳ್ಳಿಗಾವಿಯ ಜಿಡ್ಡಿಕೆರೆ ಎರಿಯ ಮೇಲೆ ಹೋಗುವಾಗ ಕೆರೆ ಏರಿಯಾದ ಪೊದೆಯಲ್ಲಿ ಆತನ  ವಾಹನ ಮತ್ತು ಶವವಾಗಿ ಪತ್ತೆಯಾಗಿದ್ದಾನೆ.

ಬಹುತೇಕ ಆತನ ಸಾವು ರಸ್ತೆ ಅಪಘಾತದಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರು, ಮೃತನ ಕುಟುಂಬ ರುದ್ರೇಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದೆ.  ರುದ್ರೇಶ್ ಸಾವಿನಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಯಾವಾಗ ರುದ್ರೇಶ್ ಊರಿಗೆ ಬರಲಿಲ್ಲ ಬೆಳಿಗ್ಗೆಯಿಂದ ಆತನಿಗಾಗಿ ಹುಡುಕಾಟ ಆರಂಭಿಸಿದೆ. ಹುಡುಕುವಾಗ ರುದ್ರೇಶ್ ಬೈಕ್ ಕೆರೆ ಏರಿಯಾದ ಬಳಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ಬಡೆಸಿದ್ದಾರೆ.

ಕೊಳತೆ ಸ್ಥಿತಿಯಲ್ಲಿ ಪತ್ತೆಯಾಯಿತು ವೃದ್ಧನ ಮೃತದೇಹ

ಕುಂಸಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಯಡವಾಲ ಗ್ರಾಮದ ನಿವಾಸಿ ಗೋಪಾಲನಾಯ್ಕ್ ಹಿಟೂರಿನ ಸಹೋದರಿ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತವಾಗಿ ವಾಹನದಿಂದ‌ಬಿದ್ದು ಸಾವನ್ನಪ್ಪಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಗೋಪಾಲ‌ನಾಯ್ಕ ಪತ್ತೆಯಾಗಿರುವುದರಿಂದ ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತರ ಕುಟುಂಬ ಕುಂಸಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಟ್ಟೂರಿಗೆ ಹೋಗುತ್ತಿದ್ದ ಗೋಪಾಲ ನಾಯ್ಕ್ ಅವರ ವಾಹನಕ್ಕೆ ಜಾನುವಾರು ಅಡ್ಡಬಂದ ಪರಿಣಾಮ ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಇದೊಂದು ಸಾವಿನ ಸುದ್ದಿ ಎಂದು ಅಷ್ಟೆ ಬಿಂಬಿತವಾಗಿರಬಹುದು. ಆದರೆ ರಸ್ತೆಯ‌ ಮೇಲೆ ಬರುವ ಜಾನುವಾರುಗಳನ್ನ ತಪ್ಪಿಸಲು ಹೋಗಿ ಅಪಘಾತಕ್ಕೊಳಗಾದವರು ಹೆಚ್ಚಿಗೆ ಇದ್ದಾರೆ. ಸ್ಥಳೀಯ ಸಂಸ್ಥೆಗಳು ನಿದ್ದೆಯಿಂದ ಎದ್ದರೆ ಈ ಅಪಘಾತ ತಪ್ಪಿಸಬಹುದಾಗಿದೆ.

ಇದನ್ನೂ ಓದಿ-https://suddilive.in/archives/7142

Related Articles

Leave a Reply

Your email address will not be published. Required fields are marked *

Back to top button