ಸ್ಥಳೀಯ ಸುದ್ದಿಗಳು

ಅಭಿಮಾನ ಮೆರೆದ ಅಭಿಮಾನಿಗಳು-ಧ್ವಜ ತಿರುಗಿಸಿದ ಸಂಸದರು

ಸುದ್ದಿಲೈವ್/ಶಿವಮೊಗ್ಗ

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಎಎ ವೃತ್ತ ತಲುಪಿದ ಸರಿಯಾಗಿ 6-55 ಕ್ಕೆ ಎಎ ವತ್ತ ತಲುಪಿದ ಗಣಪತಿಗೆ ಜನ ಸಾಗರವೇ  ಜಮಾವಣೆಯಾಗಿದೆ. ಶಾಸಕ ಚೆನ್ನಬಸಪ್ಪ ಹಾಗೂ ಧೀನ್ ದಯಾಲನ್ನ ಭುಜನದ ಮೇಲೆ ಹೊತ್ತ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಈ ವೇಳೆ ಬೋವಿ ಸಮಾಜ, ನ್ಯೂ ಮಂಡ್ಲಿಯ ಯುವಕರ ಸಂಘ ಗಣಪನಿಗೆ ಹೂವಿನ ಹಾರ ಹಾಕಿವೆ. ಜನ ಸಾಗರದಲ್ಲಿ ಎಎ ಸರ್ಕಲ್ ಮುಳುಗಿದೆ. ಪಟಾಕಿ ಸಿಡಿಸಲಾಗಿದೆ.

ಗಣಪತಿ ರಾಜಬೀದಿ ಉತ್ಸವ ಅಮೀರ್ ಅಹ್ಮದ್ ವೃತ್ತಕ್ಕೆ ಬರುವ ಮುಂಚೆ ಸಂಸದ ರಾಘವೇಂದ್ರ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. ಸಂಸದರನ್ನ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷ ವಾಗಿದೆ.

ಸಂಸದರು ಎಎ ವೃತ್ತದಲ್ಲಿ ಜನರ ಸಾಗರವೇ ಹರಿದು ಬಂದಿದೆ. ನೃತ್ಯ, ಡೊಳ್ಳು ವಾದ್ಯಕ್ಕೆ ಮೆರವಣಿಗೆದಾರರ ಭರ್ಜರಿ ಸ್ಟೆಪ್ಸ್ ಹಾಕಿ ನೃತ್ಯ ಪ್ರದರ್ಶನ ನಡೆದಿದೆ. ವೃತ್ತದ ಒಂದು ಭಾಗ ಓಡಾಡಲು ಅವಕಾಶವಿದ್ದುದ್ದರಿಂದ ಚಂದ್ರಯಾನ ನಿರ್ಮಿಸಿದ ಕಡೆ ಸಂಸದರು ಆಗಮಿಸಿದ್ದಾರೆ.

ಡೊಳ್ಳು ವಾದ್ಯಕ್ಕೆ ಸಂಸದರಿಗೆ ಅಭಿಮಾನಿಗಳು ಕುಣಿಯಲು ಒತ್ತಾಯಿಸಿದ್ದಾರೆ. ಕೈ ಮೇಲೆ ಎತ್ತಿ ಕುಣಿಯುತ್ತಿದ್ದಂತೆ ಅಭಿಮಾನಿಗಳು ಮತ್ತುಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಮುತ್ತಿಕೊಂಡಿದ್ದಾರೆ.

ಅವರನ್ನ ಓರ್ವ ಭುಜನದ ಮೇಲೆ ಹೊತ್ತು ವೃತ್ತದಿಂದ ನೆಹರೂ ರಸ್ತೆಯ ಕಡೆ ಹೋಗುವಾಗ ಕೇಸರಿ ಧ್ವಜ ಹೊತ್ತ ಅಭಿಮಾನಿ ಧ್ವಜ  ನೀಡಿದ್ದಾನೆ. ಧ್ವಜವನ್ನ‌ ಸಂಸದರು ಎರಡು ಸುತ್ತುಹಾಕಿದ್ದಾರೆ. ನಂತರ ಅವರನ್ನ ಇಳಿಸಿದ್ದೇ ನೆಹರೂ ರಸ್ತೆಯಲ್ಲಿ ನಿರ್ಮಿಸಿರುವ ಸನಾತನ ಹಿಂದೂ ಧರ್ಮದ ಮಹಾದ್ವಾರದ ಬಳಿ.

ಇದನ್ನೂ ಓದಿ-https://suddilive.in/2023/09/28/ಬಜಾರನ-ರಾಜಬೀದಿಯಲ್ಲಿ-ಗಣಪ/

Related Articles

Leave a Reply

Your email address will not be published. Required fields are marked *

Back to top button