ಸ್ಥಳೀಯ ಸುದ್ದಿಗಳು

“ಕಲಾಜಾಥಾ” “ಸಾಂಸ್ಕೃತಿಕ ಕಾರ್ಯಕ್ರಮ”, “ಜ್ಞಾನದ ಸರಾ” ದೊಂದಿಗೆ ಸಂಪನ್ನಗೊಂಡ ಸಾಂಸ್ಕೃತಿಕ ಕಲಾದಸರಾ

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆ – ಶಿವಮೊಗ್ಗ ದಸರಾ ಅಡಿಯಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಲಾ ದ ಸರಾದ ಕಾರ್ಯಕ್ರಮಗಳು ದಿನಾಂಕ 18-10-23ರ ಬೆಳಿಗ್ಗೆ, ಚಿತ್ರಕಲೆ ಹಾಗೂ ಛಾಯಾಚಿತ್ರದ ಪ್ರದರ್ಶಿನಿಯು ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಮಿಥುನ್ ಕುಮಾರ್ ರವರು ಉದ್ಘಾಟಿಸುವುದರ ಮೂಲಕ ಕಲಾದಸರಾಕ್ಕೆ ಚಾಲನೆ ದೊರೆಯಿತು.

18ರ ಸಂಜೆ ಕಲಾಜಾಥ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾತಂಡದೊಂದಿಗೆ, ನೂರಾರು ನಾಗರೀಕರೊಂದಿಗೆ ಶಿವಪ್ಪ ನಾಯಕ ವೃತದಿಂದ ಆರಂಭಗೊಂಡು, ಗಾಂಧಿಬಜಾರ್ ಮೂಲಕ ಶಿವಪ್ಪ ನಾಯಕ ಅರಮನೆಯನ್ನು ತಲುಪಿತು.

ಶಿವಪ್ಪ ನಾಯಕ ಅರಮನೆಯಲ್ಲಿ ನಗರದ ಖ್ಯಾತ ಗಾಯಕಿ ಶ್ರೀಮತಿ ಸುರೇಖಾ ಹೆಗಡೆ ಅವರಿಂದ ಉದ್ಘಾಟನೆಗೊಂಡ ಕಲಾದಸರಾ ಸಮಾರಂಭದಲ್ಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀಯುತ ಕೆ. ಎಸ್. ಈಶ್ವರಪ್ಪ ರವರು, ಶಾಸಕರಾದ ಚನ್ನಬಸಪ್ಪ ರವರು, ಕಲಾದಸರಾ ಅಧ್ಯಕ್ಷೆ ಶ್ರೀಮತಿ ಸುರೇಖ ಮುರಳೀಧರ್, ಸಮಿತಿ ಸದಸ್ಯರು, ಪಾಲಿಕೆಯ ಸದಸ್ಯರುಗಳು, ಕಲಾವಿದರಗಳು, ನಾಗರೀಕರು ಉಪಸ್ಥಿತರಿದ್ದರು.

ಶಿವಪ್ಪ ನಾಯಕ ಅರಮನೆಯಲ್ಲಿ ಈ ವರ್ಷದಿಂದ ಆರಂಭವಾದ ದಸರಾಗೊಂಬೆ ಪ್ರದರ್ಶಿನಿಯನ್ನು ಆಡಳಿತ ಪಕ್ಷದ ನಾಯಕರಾದ ಶ್ರೀ ಜ್ಞಾನೇಶ್ವರ್ ದಂಪತಿಗಳು ನೆರವೇರಿಸಿದರು. ಸುಗಮ ಸಂಗೀತ, ಕೊಳಲು ವಾದನ, ಅನೇಕ ಕಲಾಪ್ರಕಾರಗಳ ಪ್ರದರ್ಶನ, ರಾಮನ್ ಸಹೋದರಿಯರಿಂದ “ವೀಣಾ ವೈವಿಧ್ಯ” ಕಾರ್ಯಕ್ರಮಗಳು

ಆಯೋಜನೆಗೊಂಡಿತ್ತು

ದಿನಾಂಕ 19 ರಂದು “ಭಜನಾಮೃತ” ಒಂದು ಭಜನೆ 100 ಕಂಠ ಕಾರ್ಯಕ್ರಮದಲ್ಲಿ 120 ಮಹಿಳೆಯರು ಏಕಕಾಲದಲ್ಲಿ ಭಜನೆಯನ್ನು ಮಾಡುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು‌. ಕೋಡೂರಿನ ಪ್ರತಿ ಮಾರವರಿಂದ “ತಾಟಾ ಕಾಸುರ ವಧೆ” ಹರಿಕಥೆ, ಸುಮಾ ರಾಜಕುಮಾರ್ ರವರಿಂದ “ಮಾತನಾಡುವ ಗೊಂಬೆ” ಪ್ರದರ್ಶನ, ಜಾನಪದ ತಂಡಗಳಿಂದ ನೃತ್ಯ ಪ್ರದರ್ಶನ, ಹಾಗೂ ಆನಂದ ರಾಮ್ ಭಟ್, ಶ್ರೀಧರ್ ಮತ್ತು ತಂಡದಿಂದ “ವೇಣುವಾದನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ವೇದಿಕೆಯಲ್ಲಿ “ಗೊಂಬೆ ಸ್ಪರ್ಧೆ” ಯಲ್ಲಿ ಬಹುಮಾನ ಪಡೆದಂತಹ ಶ್ರೀಮತಿ ಸೀತಾ ಲಕ್ಷ್ಮಿ ಪ್ರಸನ್ನ (ಪ್ರಥಮ), ನಾಗರತ್ನ (ದ್ವಿತೀಯ) ಸುಜಾತ ಮುರಳಿ(ತೃತೀಯ)
ಉಮಾ (ಚತುರ್ಥ) ಉಷಾರಾವ್ (ಪಂಚಮ) ಸ್ಥಾನಗಳನ್ನೂ ನೇತ್ರಾವತಿ, ರಂಜಿನಿ, ಬಿಂದು ಮಾಲಿನಿ, ಸುವರ್ಣ, ಸುಮಗುರುನಾಥ್ ರವರು ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಗಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಹುಮಾನ ವಿತರಣಾ ಸಮಾರಂಭದೊಂದಿಗೆ ದ್ವಿತೀಯ ದಿನದ ಕಾರ್ಯಕ್ರಮ ಸಂಪನ್ನಗೊಂಡಿತು.

ದಿನಾಂಕ 20ರಂದು ಸಾಂಸ್ಕೃತಿಕ ಕಲಾ ದಸರಾದಲ್ಲಿ ಈ ಬಾರಿ ರಾಜ್ಯದಲ್ಲಿ ಪ್ರಥಮ ಬಾರಿಗೆ, ಪಾಲಿಕೆ ವತಿಯಿಂದ ಏರ್ಪಡಿಸಲಾಗಿದ್ದ “ಜ್ಞಾನದಸರಾ”, ಪದವಿ ವಿದ್ಯಾರ್ಥಿಗಳಿಗೆ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಸಸ್ವೀಯಾಗುವುದು ಹೇಗೆ?” ಒಂದು ದಿನದ ಕಾರ್ಯಾಗಾರವು ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಸೆಲ್ವಮಣಿ ರವರಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜುಗಳ ಒಂದು ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಲಾ ದಸರಾದ ಯಶಸ್ಸಿಗೆ ಸಹಕರಿಸಿದ, ಪೂಜ್ಯ ಮಹಾಪೌರರು, ಉಪ ಮಹಾಪೌರರು, ಶಾಸಕರು, ಆಯುಕ್ತರು, ಕಲಾವಿದರು, ನಾಗರಿಕರು, ವಿದ್ಯಾರ್ಥಿಗಳು, ಸಮನ್ವಯ ಟ್ರಸ್ಟ್, ಪಾಲಿಕೆಯ ಅಧಿಕಾರಿಗಳು, ಕಲಾ ದಸರಾ ಸಮಿತಿ ಸದಸ್ಯರುಗಳು ಹಾಗೂ ಮಾಧ್ಯಮ ಬಂಧುಗಳಿಗೆ ಸಾಂಸ್ಕೃತಿಕ ಕಲಾದಸರಾದ ಅಧ್ಯಕ್ಷರಾದ ಶ್ರೀಮತಿ ಸುರೇಖಾ ಮುರಳೀಧರ್ ರವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/1629

Related Articles

Leave a Reply

Your email address will not be published. Required fields are marked *

Back to top button