ರಾಜಕೀಯ ಸುದ್ದಿಗಳು

ಒಂದು ವೇಳೆ ಆ ಮೂವರು ನಾಯಕರು ಬಾರದಿದ್ದಿದ್ದರೆ…!

ಸುದ್ದಿಲೈವ್/ಶಿವಮೊಗ್ಗ

ಸಂಸದ ಮತ್ತು ಶಾಸಕರಿಬ್ಬರು ಯುವನಿಧಿಯ ಕಾರ್ಯಕ್ರಮಕ್ಕೆ ಕೆಸರಿ ಶಾಲು ಹೊದ್ದು ಭಾಗಿಯಾಗಿದ್ದಾರೆ. ಕೆಲವೊಂದು ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹೊದ್ದು ಭಾಗಿಯಾಗುತ್ತಿದ್ದ ಬಿ.ವೈ ರಾಘವೇಂದ್ರ, ಚೆನ್ನಬಸಪ್ಪ ಮತ್ತು ಡಿ.ಎಸ್. ಅರುಣ್ ಕೆಲವೊಂದು‌ ಕಾರ್ಯಕ್ರಮದಲ್ಲಿ ಶಾಲು ಇಲ್ಲದೆ ಭಾಗಿಯಾಗಿರುವ ಉದಾರಣೆ ಇದೆ.‌ಆದರೆ ಇಂದು ಯುವನಿಧಿ ಸರ್ಕಾರಿ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಧರಿಸಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.

ಕಾಂಗ್ರೆಸ್ ನಾಯಕರ ವೇದಿಕೆಯಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಶಾಲು ಹೊದ್ದು ವಿಭಿನ್ನವಾಗಿ ಭಾಗವಹಿಸಿದ್ದಾರೆ ಎನಿಸಿಕೊಂಡರೂ, ವಿಷಯ ಅದಲ್ಲ! ಒಂದು ವೇಳೆ ಈ ನಾಯಕರು ಭಾಗಿಯಾಗದಿದ್ದರೆ ಬಿಜೆಪಿಯ ವಿರುದ್ಧ ಕಾಂಗ್ರೆಸ್ ನಾಯಕರ ಮಾತುಗಳೇ ಬೇರೆಯಾಗಿರುತ್ತಿತ್ತು. ಆದರೆ ಟೀಕಿಸುವ ಕಡೆಯಲ್ಲೆಲ್ಲಾ ಕಾಂಗ್ರೆಸ್ ನಾಯಕರು ಸಾಫ್ಟ್ ಆದ್ರ ಎಂಬ ಅನುಮಾನ ಸಹ ಕಂಡುಬರುತ್ತಿದೆ.

ಪ್ರೋಟೋಕಾಲ್ ಪ್ರಕಾರ ಎಲ್ಲರನ್ನೂ ಆಹ್ವಾನಿಸಲಾಗುತ್ತೆ. ಅದರಂತೆ ಬಿಜೆಪಿ ನಾಯಕರನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಹಾಗೂ ಡಿ.ಎಸ್.ಅರುಣ್ ಭಾಗಿಯಾಗಿದ್ದಾರೆ. ಒಂದು ವೇಳೆ ಭಾಗಿಯಾಗದಿದ್ದರೆ ಕಾಂಗ್ರೆಸ್ ನ ಸಿಎಂ ಮತ್ತು ಡಿಸಿಎಂ ಭಾಷಣ ಹೀಗೆ ಇರುತ್ತಿತ್ತ ಎಂಬುದೇ ಚರ್ಚಾವಸ್ತುವಾಗಿದೆ.

ವಿಷಯವನ್ನ ಟಚ್ ಮಾಡಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಮುಂದೆ ಸಾಗಿದ್ದಾರೆ.‌ ಬಿಜೆಪಿಯ ವಿರುದ್ಧ ಬೇರೆ ವೇದಿಕೆಗಳಲ್ಲಿ ಅದೇವಿಷಯ ಕುರಿತು ಟೀಕಿಸಿದ್ದ ಈ ಇಬ್ಬರೂ ನಾಯಕರು ಯುವನಿಧಿಯ ಕಾರ್ಯಕ್ರಮದಲ್ಲಿ ಬಿಜೆಪಿಯ ವಿರುದ್ಧ ಅಟ್ಯಾಕ್ ಸ್ವಲ್ಪ ಸಾಫ್ಟ್ ಆಗಿಯೇ ಇತ್ತು.

ಅನ್ನಭಾಗ್ಯ ವಿಚಾರದಲ್ಲಿ ಡಿಸಿಎಂ‌ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯನವರು ಕೇಂದ್ರದ ವಿರುದ್ಧ ಬೇರೆಡೆ ವೇದಿಕೆಗಳಲ್ಲಿ ತೀವ್ರವಾಗಿ ಟೀಕಿಸಿದ್ದರು. ಆದರೆ ಶಿವಮೊಗ್ಗದ ಯುವನಿಧಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಟಚ್ ಮಾಡಿ ನಂತರ ಭಾಷಣವನ್ನೇ ತೇಲಿಸಿ ಬಿಟ್ಟರು.

ಅದೇ ಫ್ರೀಡಂ ಪಾರ್ಕ್ ಗೆ ಚಂದ್ರಶೇಖರ್ ಆಜಾದ್ ಹೆಸರನ್ನ ಪ್ರಸ್ತಾಪಿಸಿದ ಶಾಸಕರ ಭಾಷಣವನ್ನೇ ಟಾರ್ಗೆಟ್ ಮಾಡಬಹುದಾಗಿದ್ದ ಸಿಎಂ ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು ಚೆನ್ನ ಬಸಪ್ಪನವರೇ ಎಂದು ಹೇಳಿ ಮತ್ತೆ ಸಾಫ್ಟ್ ಆಟ್ಯಾಕ್ ಮಾಡಿದರು.‌

ಸ್ವಾಮಿ ವಿವೇಕಾನಂದರ ಸಂದೇಶವನ್ನ ಎತ್ತಿಕೊಂಡಿದ್ದ ಸಿದ್ದರಾಮಯ್ಯ ಹಸಿವನ್ನ ಇಂಗಿಸದ ಧರ್ಮ‌ಧರ್ಮವೇ ಅಲ್ಲ ಎಂದು ಹೇಳಿದರು ಎಂದು ಎರಡು ಮೂರು ಭಾರಿ ಉಚ್ಚರಿಸಿ ಮುಂದೆ ಸಾಗಿದರು.‌ ಈ ವಿಷಯ ಯಾಕೆ ಪ್ರಸ್ತುತ ಎಂಬುದಕ್ಕೆ ಶಿವಮೊಗ್ಗ‌ ಹೋರಾಟದ ನಾಡು ಎಂದು ಹೇಳಿ ಮತ್ತೆ ಸಾಫ್ಟ್ ಆದರು.

ಚುನಾವಣೆಯ ವೇಳೆ ಭರ್ಜರಿ ಪ್ರಚಾರವಾಗುತ್ತಿದ್ದ ಎಂಪಿಎಂ ಕಾರ್ಖಾನೆಯ ವಿಷಯ ಈಗಲೂ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಸಿಎಂ‌ ಮಾತನಾಡದೆ ಇರೋದು ಗಮನಾರ್ಹವಾಗಿದೆ. ಎಂಪಿಎಂ ಅಧ್ಯಕ್ಷರಾಗಿದ್ದ ಮಾಜಿ ಗೃಹಸಚಿವರನ್ನ ಎಳೆದು ತಂದು ಮಾತನಾಡುವ ಅವಕಾಶ ಇದ್ದರೂ ಸಿಎಂ ಹೇಳಲಿಲ್ಲ. ವೇದಿಕೆ ಮೇಲೆ ಕುಳಿತಿದ್ದ ಭದ್ರಾವತಿ ಶಾಸಕ‌ ಸಂಗಮೇಶ್ವರ್ ಎದ್ದು ಬಂದು ಸಿಎಂ ಗಮನಕ್ಕೆ ತಂದರೂ ಮುಂದೊಂದು ದಿನ ಮಾತನಾಡುವುದಾಗಿ ಹೇಳಿ ಭಾಷಣವನ್ನೇ ಮುಗಿಸಿದರು.

ಈ ಎಲ್ಲಾ ಅವಕಾಶವನ್ನ ಕಾಂಗ್ರೆಸ್ ಕೈಚೆಲ್ಲಿದೆ ಅಂತನೇ ಹೇಳಬಹುದು. ಇದೇ ಒಂದು ವೇಳೆ ಮೂವರು ಬಿಜೆಪಿಯ ನಾಯಕರು ವೇದಿಕೆ ಮೇಲೆ ಉಪಸ್ಥಿತರಿರಲಿಲ್ಲವೆಂದಿದ್ದರೆ ಯುವನಿಧಿ ಬಿಜೆಪಿ ಪಕ್ಷದ ವಿರುದ್ಧ ಟೀಕಾಸ್ತ್ರಗಳ ಸುರಿಮಳೆಯೇ ಆಗಿಬಿಡುತ್ತಿತ್ತೋ ಏನೋ.

ಇದನ್ನೂ ಓದಿ-https://suddilive.in/archives/6717

Related Articles

Leave a Reply

Your email address will not be published. Required fields are marked *

Back to top button