ರಾಜಕೀಯ ಸುದ್ದಿಗಳು

ಶಿವಮೊಗ್ಗ ಅಭಿವೃದ್ಧಿಗೆ ಕಾಂಗ್ರೆಸ್ 1 ರೂ.ನೂ ನೀಡಿಲ್ಲ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ವಿಚಾರದಲ್ಲಿ ಸರ್ಕಾರದಿಂದ ಬಂಡವಾಳ ಹಿಂತೆಗೆತಕ್ಕೆ ಕರೆಯಲಾಗಿದ್ದ ಟೆಂಡರ್ ನ್ನ ನಿಲ್ಲಿಸಲಾಗಿದೆ ಎಂದು ಸೇಲಂ ಸ್ಟೀಲ್ ಪ್ಲಾಂಟ್ ಗೆ ಆದೇಶ ಬಂದಿದೆ. ಇದೇ ಆದೇಶವನ್ನ 2022 ರಲ್ಲಿ ವಿಐಎಸ್ ಎಲ್ ಕಾರ್ಖಾನೆಗೂ ಮಾಡಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳಿಗೆ 10-15 ದಿನ ಕೆಲಸ ಬೇಡ 26 ದಿನ ಕೆಲಸ ಕೊಡಿ ಎಂದಿದ್ದಾರೆ. ನಾಳೆ ದೆಹಲಿಗೆ ತರಳಿ ಬಿಜೆಪಿ ಹೈಕಮ್ಯಾಂಡ್ ಮತ್ತು ಸಚಿವರಿಗೆ ಬೇಡಿಯಾಗಲಿದ್ದೇನೆ. ಇದು ಸೂಕ್ಷ್ಮ ವಿಚಾರವಾಗಿದೆ. ಕಾರ್ಮಿಕರೊಂದಿಗೆ ನಾನು‌ ನಿಲ್ಲುವೆ ಎಂದರು.

ನಿನ್ನೆ ಉಸ್ತುವಾರಿ ಸಚಿವರು ಬಳ್ಳಿಗಾವಿಗೆ ಭೇಟಿ ನೀಡಿ ಅಲ್ಲಮನ ಜನ್ಮಸ್ಥಳಕ್ಕೆ ಭೇಟಿ ನೀಡಿ‌ ಮನಸ್ಸಿಗೆ ನೋವಾಗಿದೆ ಎಂಬ ವಿಚಾರ ಪ್ರಸ್ತಾಪಿಸಿದ್ದಾರೆ.  ಸೊರಬ ಕ್ಷೇತ್ರದಿಂದ ಎರಡು ಬಾರಿ ಗೆದ್ದಾಗ ಅದೇ ರಸ್ತೆಯಲ್ಲಿ ಹೋಗುವಾಗ ನೋವಾಗಿಲ್ಲ. ಈಗ ನೋವಾಗಿದೆ ಎಂದಿದ್ದಾರೆ. ಆರ್ಕಿಯಾಲಜಿ ಇಲಾಖೆಯಿಂದ ಕೆಲಸ ಆಗಲು ಸಹಕರಿಸಿದ್ದೇನೆ. 3 ಕೋಟಿ‌ ಅನುದಾನವನ್ನ ಕೊಡಿಸಿದ್ದೇನೆ. 50 ಲಕ್ಷ ಮೊದಲ ಕಂತಿನ ಹಣ ಈ ವಿರಕ್ತಮಠಕ್ಕೆ ಜಮವಾಗಿದೆ ಎರಡನೇಹಂತದ ಹಣ ಬಿಡುಗಡೆಯಾಗುವ ವೇಳೆ ಕಾಂಗ್ರೆಸ್ ತಡೆಹಾಕಿ ಕೊಟ್ಟ ಅನುದಾನ ವಾಪಾಸ್ ನೀಡಲು ಸೂಚಿಸಿದೆ ಎಂದರು.

ಚಂದ್ರಗುತ್ತಿಗೆ ಬಿಎಸ್ ವೈ 1 ಕೋಟಿ ರೂ. ನೀಡಿದ್ದರು. ಕಾಂಗ್ರೆಸ್ 2023 ನೇ ಸಾಲಿನಲ್ಲಿ ಗೆದ್ದುಬಂದಾಗ ವಾಪಾಸ್ ಮಾಡಲು ಸೂಚಿಸಿದೆ. ಕದಂಬರ ಜಾಗ ಅಭಿವೃದ್ಧಿ,  ಶಕ್ತಿ ಮಾತಾಂಗ ದೇವಿಯ ದೇವಸ್ಥಾನ, ಸಕ್ರೆಬೈಲಿನ 17 ಕೋಟಿ ರೂ.ಗಳನ್ನ ಕಾಂಗ್ರೆಸ್ ವಾಪಾಸ್ ಪಡೆದುಕೊಂಡಿದೆ.‌ ಫ್ರೀಡಂ ಪಾರ್ಕ್ ನಿರ್ಮಿಸಿರುವ ಬಗ್ಗೆ ಕೆಲವರು ಸಚಿವರಿಗೆ ತಪ್ಪು ಮಾಹಿತಿ ನೀಡಿ ದಿಕ್ಕುತಪ್ಪಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಿಡುಗಡೆಯಾದ 36 ಕೋಟಿ ಹಣ ರಾಜ್ಯ ಸರ್ಕಾರಕ್ಕೆ ವಾಪಾಸ್ ಆಗಿದೆ ಎಂದು ದೂರಿದರು.

ಏರ್ ಪೋರ್ಟ್ ಹಣ ವೆಚ್ಚದ ಬಗ್ಗೆ 6 ತಿಂಗಳಿಂದ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಪ್ರತಿದಿನ ವಿಮಾನದಲ್ಲಿ ಸಚಿವರೇ ಓಡಾಡುತ್ತಿದ್ದಾರೆ. ಪ್ರತಿ ದಿನ‌ಬೆಳಿಗ್ಗೆ ಪ್ರೆಸ್ ಮೀಟ್ ಮಾಡ್ಕೊಂಡು ತನಿಖೆ‌ಮಾಡುವುದಾಗಿ ಸಚಿವರು ಹೇಳಿರುವುದು ಬೇಡ. ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ನ 1 ರೂ. ಹಣದಿಂದ ಶಿವಮೊಗ್ಗ ಅಭಿವೃದ್ಧಿಯಾಗಿಲ್ಲ. ಏರ್ ಪೋರ್ಟ್ ನ 1100 ಮೀಟರ್  ರನ್ ವೇ ಗೆ ಆಯಿತು. ಆಗ 150 ಕೋಟಿ ಹಣ ನೀಡಲಾಗಿತ್ತು.‌ದೊಡ್ಡದಾಗಿ ನಿರ್ಮಿಸುವ ಯೋಚನೆ ಮತ್ತೆ ಬಂದ ಕಾರಣ ರನ್ ವೇ 3600 ಮಿ. ಗೆ  ಹೆಚ್ಚಿಸಲಾಗಿದ್ದರಿಂದ 450 ಕೋಟಿ ರೂ.ಗೆ ಬಂದು ತಲುಪಿದೆ. ಜಿಲ್ಲೆಯಲ್ಲಿ ಬಿಡುಗಡೆಯಾದ 150 ಕೋಟಿ ರೂ. ಹಣ ಸಣ್ಣ ನೀರಾವರಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದನ್ನೂ ಕಾಂಗ್ರೆಸ್  ಬ್ರೇಕ್ ಹಾಕಿದೆ ಎಂದರು.

ಒಬ್ಬ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಮಾಡಲಿ. ಅವರೊಂದಿಗೆ ನಾವು ಇದ್ದೇವೆ ಎಂದ ಸಂಸದರು ಸೇತುವೆ ಉದ್ಘಾಟನೆ ಆಗಿಲ್ಲ. ಗುತ್ತಿಗೆದಾರ ಪೂಜೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಹೋಗಿದ್ದೆ.  ಒಂದು ವಾರದಲ್ಲಿ ವಿದ್ಯಾನಗರ ರೈಲ್ವೆಮೇಸೇತುವೆ ಲೋಕಾರ್ಪಣೆ ಆಗಲಿದೆ.

ತೀರ್ಥಹಳ್ಳಿಯ 60 ಕೋಟಿ ರೂ ಕಾಮಗಾರಿ ಲೋಕಾರ್ಪಣೆ ಮಾಡಿದ್ದೇವೆ. ನಾನು ಶಿಷ್ಠಾಚಾರ ಮೀರಿಲ್ಲ. ಅರಣ್ಯ ಭಾಗದಲ್ಲಿ 40 ಮೊಬೈಲ್ ಟವರ್ ಸ್ಥಾಪನೆಗೆ ಅವಕಾಶ ನೀಡಲಾಗಿದೆ.  ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಹೋಗದಂತೆ ಇದೇ ಕಾಂಗ್ರೆಸ್ ನವರು ತಾಕೀತು ಮಾಡಿದ್ದಾರೆ. ಸಣ್ಣತನದ ರಾಜಕಾರಣ ಮಾಡದಂತೆ ಮಾಡಿಕೊಂಡಿದ್ದಾರೆ.

ಕಾರ್ಮಿಕ‌ಮುಖಂಡ ಬಾಲಕೃಷ್ಣ ಶಾಸಕ ಚೆನ್ನಬಸಪ್ಪ, ದತ್ತಾತ್ರಿ ಧರ್ಮಪ್ರಸಾದ್ ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6896

Related Articles

Leave a Reply

Your email address will not be published. Required fields are marked *

Back to top button