ರಾಜಕೀಯ ಸುದ್ದಿಗಳು

ತಾಕತ್ತಿದ್ದರೆ ಮೋದಿ ಫೋಟೊ ಬಿಟ್ಟು ಬಿಎಸ್ ವೈ ಕುಟುಂಬ ಚುನಾವಣೆ ನಡೆಸಲಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ‌ ಲೋಕಸಭಾ ಕ್ಷೇತ್ರದ 8 ವಿಧಾನ ಸಭೆಯನ್ನ ಸುತ್ತಾಡಿ ಬಂದಿದ್ದೇವೆ. 60 ಸಾವಿರ ಜನ ಬಿಜೆಪಿಯ ಕಾರ್ಯಕರ್ತರು ನನಗೆ ಬೆಂಬಲಿಸಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸುದರು.

ಬಿಜೆಪಿಯ ಹಿಂದುತ್ವವಾದಿಗಳು ಬಿಜೆಪಿಯಿಂದ ಕರೆ ಬಂದರೆ ನಮಗೆ ಈ ಬಾರಿ ಬಿಟ್ಟುಬಿಡಿ. ಅನ್ಯಾಯವಾಗಿರುವ ಹಿಂದೂ ಹುಲಿ ಈಶ್ವರಪ್ಪನವರಿಗೆ ಎನ್ನುತ್ತಿದ್ದಾರೆ. ಅದರಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಜನ‌ ನನ್ನ ಕಡೆ ಬರ್ತಾ ಇದ್ದಾರೆ. ಕಾಂಗ್ರೆಸ್ ನ ವೀಕ್ ಕ್ಯಾಡಿಂಡೇಟ್ ಹಾಕಿರುವುದರಿಂದ ನನಗೆ ಬೆಂಬಲಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಓಡಾಡುತ್ತಿಲ್ಲ. ಬಿಜೆಪಿ 8 ವಿಧಾನ ಸಭೆ ಕ್ಷೆತ್ರದಲ್ಲಿ ಕೆಲಸ ಮಾಡ್ತಾ ಇಲ್ಲ. ಈ ಬಾರಿ ಚುನಾವಣೆ ಗೆದ್ದೇ ಗೆಲ್ಲುತ್ತೆನೆ. ಜನ ಬೆಂಬಲಿಸುತ್ತಿರುವಾಗ ನನ್ನ ವಿರುದ್ಧ ಸ್ಪರ್ಧೆಯಿಂದ ವಾಪಾಸಾಗುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾರ ಮಾತನ್ನೂ ನಂಬಬೇಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡರು.

ನಾಮಪತ್ರ ಸಲ್ಲಿಯ ನಂತರ ಡಬ್ವಲ್ ಬೆಂಬಲ ದೊರೆಯುವ ವಿಶ್ವಾಸವಿದೆ. ನಾನು ಕೆಲ ಕಾರ್ಯರ್ತರ ಮುಖಗಳನ್ನೇ ನೋಡಿಲ್ಲ. ಅವರೆಲ್ಲ ಮುಂದು ಬರ್ತಾ ಇದ್ದಾರೆ.ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯಿತರು ಸಹ ನಿಮಗೆ ಬೆಂಬಲ ಎನ್ನುತ್ತಿದ್ದಾರೆ. ಪ್ರತಾಪ್ ಸಿಂಹ, ಸದಾನಂದ ಗೌಡ, ಸಿಟಿ ರವಿಗೆ ಟಿಕೇಟ್ ಕೊಟ್ಟಿಲ್ಲ. ಎಂದು ಒಕ್ಕಲಿಗರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಈಶ್ವರಪ್ಪ ಜಾತಿ ಟ್ರಂಪ್ ಕಾರ್ಡ್ ಎಸೆದಿದ್ದಾರೆ.

ಶಿಕಾರಿಪುರದಲ್ಲಿ ನಾಗರಾಜ್ ಗೌಡನ್ನ ಬದಿಗೊತ್ತುವಂತೆ ಮಾಡಿ ಚುನಾವಣೆ ಗೆದ್ದಿದ್ದಾರೆ. ಈ ಬಾರಿ ನಿಮಗೆ ಬೆಂಬಲ ಎಂದ ಈಶ್ವರಪ್ಪ, ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲಾ ಸಮುದಾಯದವರು ನನ್ನ ಸ್ಟಾರ್ ಪ್ರಚಾರಕರಾಗಿ ಬರ್ತಾ ಇದ್ದಾರೆ ಎಂದರು.

ಸಿ.ಟಿ.ರವಿ ಬಿಎಸ್ ವೈ ಕುಟುಂಬದ ಬಗ್ಗೆ ಈಶ್ವರಪ್ಪನವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಲ್ಲ ಎಂದಿದ್ದಾರೆ.  ಅವರಿಗೆ ಟಿಕೇಟ್ ತಪ್ಪಿಸಿದ್ದೇಕೆ ಎಂಬುದು ಪ್ರಶ್ನೆ. ಅವರು ಅಸಮಾಧಾನ ವ್ಯಕ್ತಪಡಿಸಿರುವಬಗ್ಗೆ ಸಮಯ ಬಂದಾಗ ಹೇಳುವೆ. ನಾನು ಧೈರ್ಯವಾಗಿ ಶುದ್ದೀಕರಣದ ವಿಷಯದ ಬಗ್ಗೆ ಹೊರಬಂದು ಹೋರಾಡುತ್ತಿರುವೆ. ಸಿಟಿ ರವಿ ಮತ್ತು ಇತರರು ಪಕ್ಷದ ಒಳಗಡೆನೆ ಹೋರಾಡುತ್ತಿರುವೆ.

ನಾನು ವಾಪಾಸ್ ಆಗುವ ಪ್ರಶ್ನೆಯೇ ಇಲ್ಲ. ಮೋದಿ‌ ಪೋಟೊ ಬಳಸಬೇಡಿ ಎಂದು ಕೆಲವರು  ಹೇಳುತ್ತಿದ್ದಾರೆ. ಬಿಎಸ್ ವೈಗೆ ತಾಕತ್ತಿದ್ದರೆ ಮೋದಿ ಫೋಟೊ ಬಿಟ್ಟು ಚುನಾವಣೆ ಎದುರಿಸಲಿ. ಎಷ್ಟು ಓಟು ಪಡೆಯುತ್ತಾರೆ ನೋಡೋಣ. ನಾನು ನಾಮಿನೇಷನ್ ಹಾಕ್ತೀನಿ. ನಂತರವೂ ಮೋದಿ ಬಳಸುತ್ತೇನೆ. ಉಚ್ಚಾಟಿಸಿದರೂ ಬಳಸುವೆ. ಆದರೆ ಚುನಾವಣೆ ಆಯೋಗ ಮತ್ತು ನ್ಯಾಯಾಲಯ ಹೇಳಿದಂತೆ ಕೇಳುವೆ. ಆದರೆ ಉಳಿದವರ ಮಾತು ಕೇಳಲ್ಲ ಎಂದು ಹೇಳಿದರು.

ಈಶ್ವರಪ್ಪ ಮುಸ್ಲೀಂರಿಗೆ ಸುಮ್ಮನೆ ತೊಂದರೆ ಕೊಡುವ ಮನುಷ್ಯ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಮತಗಳು ನನಗೆ ಬೀಳಲಿದೆ‌. ಈ ಬಾರಿ ಚುನಾವಣೆಯನ್ನ‌ ನಾನೇ ಗೆಲ್ಲುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಗೂ ಮುನ್ನ ಪೇಸ್ ಕಾಲೇಜಿನಲ್ಲಿ ಓದುತ್ತಿರುವ ಸಾತ್ವಿಕ್ ಕೆವೈ ಕೋಡೂರಿನವನು. ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಆತನಿಗೆ ಮಾಜಿ ಡಿಸಿಎಂ ಈಶ್ವರಪ್ಪ ಸಿಹಿ ತಿನ್ನಿಸಿ ಸನ್ಮಾನಿಸಿದರು.

ಇದನ್ನೂ ಓದಿ-https://suddilive.in/archives/12518

Related Articles

Leave a Reply

Your email address will not be published. Required fields are marked *

Back to top button