ರಾಜಕೀಯ ಸುದ್ದಿಗಳು

ಸಂಸದರೇ, ಇದು ಸಿದ್ದರಾಮಯ್ಯನವರ ಸರ್ಕಾರ ಎಂದು ಸಚಿವ ಮಧು ಬಂಗಾರಪ್ಪ ಗುಡುಗಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ವೇದಿಕೆ ಸಿದ್ದಮಾಡಿಕೊಂಡಿದೆ. ಸಚಿವ ಮಧು ಬಂಗಾರಪ್ಪ ಇಂದು ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ, ನೇರವಾಗಿ ಸಂಸದ ರಾಘವೇಂದ್ರ, ಗೃಹಲಕ್ಷ್ಮಿ ಮತ್ತು ಅಲ್ಲಮ ಪ್ರಭುವಿನ ಜನ್ಮಸ್ಥಳ ಅಭಿವೃದ್ಧಿ ಕುರಿತು ಮತ್ತು ಫ್ರೀಡಂ ಪಾರ್ಕ್ ಗೆ ನಾಮಕರಣ ವಿಚಾರ ಕುರಿತು ಮಾತನಾಡಿ, ಬಿಜೆಪಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ನೋಡಲ್ ಅಧಿಕಾರಿಯನ್ನ‌ನೇಮಿಸಲಾಗುವುದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗುವುದು. ಈ ವರ್ಷ 5 ಲಕ್ಷ ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದಾರೆ. ಮುಂದಿನ ವರ್ಷ 10 ಯುವಕರು ನೋಂದಣಿಯಾಗಲಿದ್ದಾರೆ. ನೋಡಲ್ ಅಧಿಕಾರಿ ಯುವನಿಧಿ ಯೋಜನೆಗೂ ಅನ್ವಯವಾಗಲಿದೆ ಎಂದರು.

ಹಿಂದಿನ ಜನಪ್ರತಿನಿಧಿಗಳು ಯಾಕೆ ಅಭಿವೃದ್ಧಿ ಮಾಡಲಿಲ್ಲ?

ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ನಾಮಕರಣ ಮಾಡುವ ವಿಚಾರದಲ್ಲಿ ಸಿಎಂ ಸಹ ಬೆನ್ನುತಟ್ಟಿದ್ದಾರೆ. ವೇದಿಕೆಯ ಮೇಲೆ ಸಿಎಂ ನಿರ್ಣಯ ತೆಗೆದುಕೊಂಡಿದ್ದಾರೆ.ಸಿಎಂಗೆ ಧನ್ಯವಾದ ಹೇಳುವೆ. ತಕ್ಷಣವೇ ಜನ ಪ್ರತಿಕ್ರಿಯಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪಕ್ಕೆ ಅಧ್ಯಕ್ಷನಾಗಿ 12 ವರ್ಷದ ನಂತರ ಅಲ್ಲಮನನ್ನ  ನೇಮಿಸಲಾಗಿತ್ತು. ಅಂತಹ ದಾರ್ಶನಿಕನ ಹೆಸರು ಇಡುವ ಬಗ್ಗೆ  ಜನಸಹ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಅಲ್ಲಮನ ಹೆಸರಿಡಲು ಸರ್ಕಾರದ ಆದೇಶಕ್ಕೆ ಕಾಯ್ದಿರಿಸಲಾಗಿದೆ. ಕಂದಾಯ ಇಲಾಖೆಗೆ ಸೇರಲಿದೆ. ಅವರ ಜನ್ಮಸ್ಥಳವನ್ನ ಅಭಿವೃದ್ಧಿ ಮಾಡಬೇಕಿದೆ. ಶಿಕಾರಿಪುರದಲ್ಲಿ ಯಾಕೆ ಅಲ್ಲಮನ ಅಭಿವೃದ್ಧಿ ಆಗಿಲ್ಲ ಎಂದು ರಾಜಕೀಯ ಟ್ರಂಪ್ ಕಾರ್ಡ್ ನ್ನ ಹರಿಬುಟ್ಟ ಸಚಿವರು, ಪುರಾತತ್ವ ಇಲಾಖೆ ಅಭಿವೃದ್ಧಿಗೆ ಬಿಡ್ತಾ ಇಲ್ಲವೆಂಬ ಕೂಗಿದೆ. ಆದರೆ ಅಭಿವೃದ್ಧಿಗೆ ಅವಕಾಶವಿದೆ. ಅಭಿವೃದ್ಧಿ ಮಾಡಲು ಮಠದ ಕೆಲವರು ಓಡಾಡುತ್ತಿದ್ದಾರೆ. ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.

ಅಲ್ಲಮನ ಜನ್ಮ ಸ್ಥಳಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ನೋವಾಗಿದೆ. ಯಾಕೆ ಅಭಿವೃದ್ಧಿ ಮಾಡಿಲ್ಲವೆಂದು ಜನಪ್ರತಿನಿಧಿಗಳು ಹೇಳಬೇಕಿದೆ ಎಂದು ಬಿಜೆಪಿಯ ಹೆಸರು ಹೇಳದೆ ಟಾಂಗ್ ನೀಡಿದರೆ. ಅಲ್ಲಮನ ವ್ಯಾಕ್ಯಾನವನ್ನ ತಮ್ಮದೇ ಭಾಷೆಯಲ್ಲಿ ಪ್ರಸ್ತಾಪಿಸಿದ ಅವರು,  ಅಲ್ಲ, ಅಮ್ಮ, ಪ್ರಭು ಎಂದು ವ್ಯಾಕ್ಯಾನಿಸಿದ್ದಾರೆ. ಸಮಾಜವಾದಿಗಳ ಚಿಂತನೆಯವರು ಚಿಂತಿಸಲಿ ಎಂದು ಹೊಸ ವ್ಯಾಕ್ಯಾನ ನೀಡಿದರು.

ಅಲ್ಲ, ಅಮ್ಮ ಪ್ರಭು

ಅಲ್ಲ ಮುಸ್ಲೀಂ ಸಮುದಾಯಕ್ಕೆ, ಅಮ್ಮ ಹಿಂದೂ ಸಮುದಾಯವನ್ನ ಪ್ರತಿನಿಧಿಸಿದರೆ,  ಪ್ರಭು ಎಂಬುವುದು ಕ್ರಿಶ್ಚಿಯನ್ ಸಮಾಜಕ್ಕೆ ಸೇರಿದ್ದಾಗಿದೆ ಎಂದು ನನಗೆ ಅನಿಸಿದೆ. ಇದು ಜಾತ್ಯಾತೀತ ವಾದನ್ನ‌ಪ್ರತಿನಿಧಿಸುತ್ತದೆ   ಎಂದ ಅವರು ಸಂಸದರು ಡಬ್ಬಲ್ ಸ್ಟ್ಯಾಂಡರ್ಡ್ ತೆಗೆದುಕೊಂಡಿದ್ದಾರೆ. ಸಂಸದ ರಾಘವೇಂದ್ರರವರೇ ನಿಮ್ಮ‌ಅವಧಿಯಲ್ಲಿ ಒಂದು ಕಾರ್ಯಕ್ರಮ ಮಾಡಿರುವುದನ್ನ ತಿಳಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಕೈಗಾರಿಕೋದ್ಯಮದವರ ಸಾಲ ಮನ್ನ ಮಾಡುವ ಬಿಜೆಪಿಯವರು ಒಮ್ಮೆಯಾದರೂ ಬಡವರ ಬಗ್ಗೆ ಯೋಚಿಸಬೇಕಿದೆ. ವೇದಿಕೆ ಮೇಲೆ ಯುವನಿಧಿ ಬಗ್ಗೆ ಹೊಗಳಿದ ಸಂಸದರು ಮರುದಿನ ಯುವನಿಧಿ ಕಾರ್ಯಕ್ರಮವನ್ನ ಸುದ್ದಿಗೋಷ್ಠಿ ನಡೆಸಿ ತೆಗಳಿದ್ದಾರೆ. ಅನಂತಕುಮಾರ್ ಹೆಗಡೆಯವರು ವೈಯಕ್ತಿಕ ಅಟ್ಯಾಕ್ ಮಾಡಬಾರದು. ಮೋದಿಗೂ ನಾವು ಮಾಡುತ್ತೇವೆ. ಇಂತಹ ಹುಚ್ಚರು ಬಿಜೆಪಿಯಲ್ಲಿ ಹೆಚ್ಚಿದ್ದಾರೆ ಎಂದು ದೂರಿದರು.

ಹುಚ್ಚುತನದ ಹೇಳಿಕೆಗಳು ಹೊರಬರುತ್ತಿರುವುದು ಚುನಾವಣೆಗಾಗಿ ನಡೆಯುತ್ತಿದೆ. ಸಂಸದರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದರು.  ಕರಾವಳಿ ಭಾಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ಎದುರಿಸುತ್ತೇವೆ. ಕೇವಲ ರಾಮ‌ನ ಹೆಸರು ಹೇಳಲ್ಲ ಎಲ್ಲಾ ಧರ್ಮದ ದೇವರ ಹೆಸರಿನಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

ಎಂಪಿ ಅವರೇ ಈಗ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಇದೆ

ರೈಲ್ವೆ ಮೇಲ್ಸೇತುವೆ ಪರಿಶೀಲನೆಗೆ ತೆರಳುದ್ದ ಸಂಸದರಿಗೆ ಸಚಿವ ಮಧು ಬಂಗಾರಪ್ಪ ನೇರವಾಗಿ ಎಂಪಿ ಕೇಸರಿ ಶಾಲು ಹಾಕಿಕೊಂಡು ಬಂದು ತಪಾಸಣೆಗೆ ಹೋಗುತ್ತಾರೆ. ಉದ್ಘಟನೆಯ ಮಾತನಾಡುತ್ತಾರೆ. ಸರ್ಕಾರ ಬದಲಾಗಿದೆ ರಾಘವೇಂದ್ರರವರೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಮತ್ತು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯಾಗಿ ನಾನಿದ್ದೇನೆ ಅವರಿಗೆ ಮನವಿ ಮಾಡೊಲ್ಲ. ನೀವು ಯಾವುದೇ ಉದ್ಘಾಟನೆಗೆ ನಮ್ಮ ಅನುಮತಿ ಇಲ್ಲದೆ ಮಾಡಿದ್ದು ಹೇಗೆ ಎಂದು ಗರ್ಜಿಸಿದರು.

ಕಾಮಗಾರಿ ಕಳಪೆಯಾಗಿದೆ. ಏರ್ ಪೋರ್ಟ್ 180 ಕೋಟಿ ಇದ್ದಿದ್ದು 450 ಕೋಟಿ ಮಾಡಿದ್ದೀರಿ. ಗುಲ್ಬರ್ಗದ ಏರ್ ಪೋರ್ಟ್ 200 ಕೋಟಿಯಲ್ಲಿ ಆಗಿದೆ. ಶಿವಮೊಗ್ಗದಲ್ಲಿ ಯಾಕೆ ಹೆಚ್ಚಿನ ಹಣ ವ್ಯಯವಾಗಿದೆ ಎಂದು ದೂರಿದರು. ಸ್ಮಾರ್ಟ್ ಸಿಟಿ, ವಿಮಾನ ನಿಲ್ದಾಣದ ತನಿಖೆಯಾಗಲಿದೆ. ಇದರ ಫಾಲೋ ಅಪ್ ನಲ್ಲಿ ನಾನೇ ಇದ್ದೇನೆ ಎಂದು ವಿವರಿಸಿದರು.

ಇದು ಕೇಂದ್ರ ಸರ್ಕಾರದಹಣವಲ್ಲ. ಹಣ ಯಾಕೆ ಹೆಚ್ಚಾಯಿತು.ಹೆದ್ದಾರಿ ಕಾಮಗಾರಿ ಕೇಂದ್ರ ಸರ್ಕಾರದ್ದಾರಾದರೂ ತೆರಿಗೆ ಹಣದ ಪಾಲಿನಲ್ಲಿ ರಾಜ್ಯದ್ದೂ ಇದೆ. ಆರ್ ಅಶೋಕ್ ನಾಟಕ ಮಂಡಳಿ ಅಧ್ಯಕ್ಷರು. ಸರ್ಕಾರ ಬಿದ್ದುಹೋಗುತ್ತೆ ಎಂದು ಹೇಳುತ್ತಾರೆ. ಜನ ಪಾಠ ಕಲಿಸಲಿದ್ದಾರೆ.

ಭಾರತ್ ನ್ಯಾಯ್ ಯಾತ್ರೆಯನ್ನ ರಾಹುಲ್ ಆರಂಭಿಸಿದ್ದಾರೆ. ಶುಭಕೋರುವೆ.‌ ಒಂದೊಂದು ಹೆಜ್ಜೆಯೂ ಒಳ್ಳೆಯ ವಿಚಾರಕ್ಕೆ ಕರೆದೊಯ್ಯಲಿ, ನಾನು ಸಹ ಐತಿಹಾಸಿಕ ನ್ಯಾಯದ ಪರ ಹೆಜ್ಜೆ ಹಾಕಲಿದ್ದೇನೆ ಎಂದರು.

ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಲ್ಗೋಡು ರತ್ನಾಕರ, ಶ್ರೀಕಾಂತ್, ಎ.ನ್ ರಮೇಶ್, ಇಕ್ಕೇರಿ ರಮೇಶ್ ವೈ.ಹೆಚ್ ನಾಗರಾಜ್, ಜಿ.ಡಿ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6867

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373