ರಾಷ್ಟ್ರೀಯ ಸುದ್ದಿಗಳು

ಹೈದ್ರಾಬಾದ್ ವಿಮಾನ ಹಾರಾಟ ರದ್ದು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಏರ್ ಪೋರ್ಟ್ ಆರಂಭಗೊಂಡು ಜನರಲ್ಲಿ  ಸಙತಸ ತಂದರೂ ಪ್ರಕೃತಿ ಮಾತ್ರ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂಬುದು ಬಹಿರಂಗಗೊಳ್ಳುತ್ತಿದೆ. ಹವಮಾನ ವೈಪರೀತ್ಯದಿಂದ ವಿಮಾನ ಹಾರಟಕ್ಕೆ ತೊಂದರೆ ಆಗುತ್ತಿದೆ.

ಶಿವಮೊಗ್ಗ-ಹೈದರಾಬಾದ್ ನಡುವಿನ ವಿಮಾನ ಹಾರಾಟ ಇಂದು ರದ್ದುಗೊಂಡಿದೆ. ಕಾರಣ ಹವಮಾನ ವೈಪರೀತ್ಯ ಕಾರಣ ತಿಳಿದು ಬಂದಿದೆ. ಈ ಹವಮಾನ ವೈಪರೀತ್ಯದಿಂದ ಬೆಂಗಳೂರಿನಿಂದ ಶಿವಮೊಗ್ಗ‌ಕ್ಕೆ ಬಂದಿದ್ದ ಇಂಡಿಗೋ ವಿಮಾನ ವಾಪಾಸ್ ಆಗಿದೆ. ಮೊನ್ಬೆ ಸ್ವದೇಶಿ‌ಮೇಳಕ್ಕೆ ಬರುತ್ತಿದ್ದ ಮಾಜಿ ಸಿಎಂ ವಿಮಾನಕ್ಕೂ ಹವಮಾನ ವೈಪರೀತ್ಯದಿಂದ ವಿಳಂಬವಾಗಿ ಲ್ಯಾಂಡ್ ಆಗಿತ್ತು.

ಇಂದು ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್  ವಿಮಾನ ರದ್ದಾದ ಪರಿಣಾಮ ಹೈದರಾಬಾದ್ ಗೆ ಹೋಗಲು ಆಗದೆ 65 ಪ್ರಯಾಣಿಕರು  ಪರದಾಡುವಂತಾಗಿದೆ.

ಮೂರು ಘಂಟೆಯಿಂದ ಏರಪೋರ್ಟ್ ನಲ್ಲಿ  ಪ್ರಯಾಣಿಕರು ಕಾದು ಸುಸ್ತಾಗಿದ್ದಾರೆ. ಸ್ಟಾರ್ ಏರ್ ಲೈನ್ಷ್ ಗೆ ಸೇರಿದ ವಿಮಾನ ಸಂಸ್ಥೆ.ಯನ್ನ ವಿಸಿಬಿಲಿಟಿ ಕಾರಣ ತೊಂದರೆ ಆಗಿದೆ. ವಿಮಾನದಲ್ಲಿ ಕುಳಿತು ಹಾರಾಟ ಆಗದೆ  ಪ್ರಯಾಣಿಕರು ವಾಪಾಸ್ ಆಗಿದ್ದಾರೆ.ಸ್ಟಾರ್ ಏರ್ ಲೈನ್ಷ್ ನಿಂದ ಸಿಗದ ಸ್ಪಂಧನೆ ಹಿನ್ನಲೆಯಲ್ಲಿ ಪ್ರಯಾಣಿಕರಲ್ಲಿ ನಿರಾಸೆ ಮೂಡಿದೆ.

ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಮಾಡದ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಸ್ಥೆ ವಿರುದ್ದ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 65 ಪ್ರಯಾಣಿಕರು ವಾಪಾಸಾಗಿದ್ದಾರೆ.

ಇದನ್ನೂ ಓದಿ-https://suddilive.in/archives/4539

Related Articles

Leave a Reply

Your email address will not be published. Required fields are marked *

Back to top button