ರಾಷ್ಟ್ರೀಯ ಸುದ್ದಿಗಳು

ಮೂರು ದಿನ ತೇರಾಕೋಟಿ ಶ್ರೀರಾಮ ತಾರಕ ಜಪ ಸಾಂಗತ ಯಜ್ಞ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಜ.26 ರಿಂದ 28 ರ ವರೆಗೆ ವಿಪ್ರ ಯುವ ಪರಿಷತ್ ವತಿಯಿಂದ ತೇರಾ ಕೋಟಿ ಶ್ರೀರಾಮ ತಾರಕ ಜಪ ಸಾಂಗತ ಯಜ್ಞ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪರಿಷತ್ ನ ಅಧ್ಯಕ್ಷ ರಾಘವೇಂದ್ರ ಉಡುಪ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆಯುವ ಈ ಯಜ್ಞ ಒಂದು ದಿನ 13 ಯಜ್ಞ ನಡೆಯಲಿದೆ. ಈ ಯಜ್ಞ  ಎರಡು ದಿನ ನಡೆಯಲಿದೆ.  ಜ.26 ರಂದು ಗಣಪತಿ  ಪೂಜೆ, ಪುಣ್ಯಾಹ, ಪ್ರಾಕಾರ ಶುದ್ಧಿ, ವಾಸ್ತು ಹೋಮ, ದೇವಾನಂದಿ, ಅಂಕುರಾರ್ಪಣೆ ನಡೆಯಲಿದ್ದು

ರಾತ್ರಿ ಹೆಬ್ಬಳ್ಳಿಯ ದತ್ತಾವಧೂತ ಮಹಾರಾಜರು ಪುರ ಪ್ರವೇಶ ನಡೆಯಲಿದೆ. ಕೂಡಲಿಯ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜ.27 ರಂದು ಕೋಟೆಗಂಗೂರಿನ ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಅರಸೀಕೆರೆಯ ಪರಂಪರಾ ಅವಧೂತ ಸತೀಶ ಶರ್ಮಾಜಿ ಮಹಾರಾಜರು,

ಭೀಮನಕಟ್ಟೆಯ ರಘುವರೇಂದ್ರ ಸ್ವಾಮೀಜಿ, ಮಂಗಳೂರು ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಗಳು, ಮೈಸೂರಿನ ಅರ್ಜುನ ಮಹಾರಾಜರು ಜ.27 ಮತ್ತು 28 ರಂದು ನಡೆಯುವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಸಂಸದ ರಾಘವೇಂದ್ರ, ಮಾಜಿ ಸಚಿವ ಈಶ್ವರಪ್ಪ, ಶಾಸಕ ಚೆನ್ನಬಸಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮೊದಲಾದವರು ಉಪಸ್ಥಿತರಿರುವರು ಎಂದರು.

ಜ.27 ರಂದು ಸೀತಾರಾಮ ಕಲ್ಯಾಣ, ಮಧ್ಯಾಹ್ನ ಅನ್ನಸಂತರ್ಪಣ, ಸಂಜೆ 6-30 ಲವ ಕುಶ ಎಂಬ ಯಕ್ಷರಸಸಂಜೆ,ರಾತ್ರಿ ಶೇಜಾರತಿ ಪ್ರಸಾದ ವಿನಿಯೋಗ ಜ.28 ಶ್ರೀರಾಮ ಪಟ್ಟಾಭಿಷೇಕ ವಿಶೇಷ ಸೇವೆ ನಡೆಯಲಿದೆ ಎಂದು ವಿವರಿಸಿದರು.

ಇದನ್ನೂ ಓದಿ –https://suddilive.in/archives/7556

Related Articles

Leave a Reply

Your email address will not be published. Required fields are marked *

Back to top button