ಶಾಲೆಯ ಬಳಿ ಕಾಣಿಸಿಕೊಂಡ ಚಿರತೆ-ಆತಂಕದಲ್ಲಿ ಗ್ರಾಮಸ್ಥರು

ಸುದ್ದಿಲೈವ್/ಶಿವಮೊಗ್ಗ

ಲಯನ್ ಸಫಾರಿಯಿಂದ 800 ಮೀಟರ್ ಅಂತರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಲೆಯ ಬಳಿ ಚಿರತೆ ಕಾಣಿಸಿಕೊಂಡಿರುವುದಕ್ಕೆ ಗ್ರಾಮಸ್ಥರು ದಿಗಿಲಾಗಿದ್ದಾರೆ.
ಲಯನ್ ಸಫಾರಿಯಿಂದಲೇ ಚಿರತೆ ಮಿಸ್ಸಿಂಗ್ ಆಗಿ ಕಾಣಿಸಿಕೊಂಡಿದೆ ಎಂಬ ಆತಂಕ ಗ್ರಾಮಸ್ಥರು ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು 14 ಚಿರತೆಗಳು ಈಗಲೂ ನಮ್ಮ ಬಳಿ ಇದೆ. ಯಾವುದೇ ಚಿರತೆ ಮಿಸ್ಸಿಂಗ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಕೊಮ್ಮನಾಳು, ಬೀರನಕೆರೆ ಈ ಭಾಗದಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಚಿರತೆ ಕಾಣಿಸಿಕೊಂಡು ಓರ್ವ ಮಹಿಳೆಯನ್ನಬಲಿ ಪಡೆದಿತ್ತು. ಅದರಂತೆ ಮತ್ತೊಂದು ಪ್ರಕರಣಗಳು ಮರುಕಳಿಸದಿರಲಿ ಎಂಬ ಆತಂಕವನ್ನ ಗ್ರಾಮಸ್ಥ ಹೊರಹಾಕಿದ್ದಾರೆ. ಶಾಲೆ ಸಾಗರ ರಸ್ತೆಗೆ ಹೊಂದಿಕೊಂಡಿದೆ.
ಸದಾ ಶಾಲೆಯ ಮಕ್ಕಳು ಇರುವ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಹಾಗಂತ ಚಿರತೆ ಬರಲೇ ಬಾರದು ಎಂಬ ನಿಯಮವಿಲ್ಲ. ಆದರೆ ಮಕ್ಕಳು ಮರಿಗಳು ಓಡಾಡುವ ಜಾಗದಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ-https://suddilive.in/archives/673
