ಎರಡು ದಿನ ನಗರದಲ್ಲಿ ನೀರು ವ್ಯತ್ಯಯ

ಸುದ್ದಿಲೈವ್/ಶಿವಮೊಗ್ಗ

ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ದಿ: 07/10/2023 ಮತ್ತು ದಿ: 08/10/2023 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದೇ ಒಂದು ವಾರದ ಹಿಂದೆ, ಸೆ. 27 ಮತ್ತು 28 ರಂದು ನಗರದ ಬಸವೇಶ್ವರನಗರ, ನವುಲೆ, ಕುವೆಂಪು ಬಡಾವಣೆ, ಅಶ್ವಥ್‍ನಗರ, ಎಲ್.ಬಿ.ಎಸ್.ನಗರ, ಕೃಷಿನಗರ, ಶಾಂತಿನಗರ, ತ್ಯಾವರೆಚಟ್ನಳ್ಳಿ, ಬೊಮ್ಮನಕಟ್ಟೆ, ದೇವರಾಜ್‍ಅರಸ್ ಬಡಾವಣೆ, ಸಹ್ಯಾದ್ರಿನಗರ, ಜೆ.ಹೆಚ್.ಪಟೇಲ್ ಬಡಾವಣೆ, ಶಾರದಮ್ಮ ಬಡಾವಣೆ, ಸಹಕಾರಿನಗರ, ಖಾಜಿ ಖಾನ್ ಬಡಾವಣೆ, ಸೋಮಿನಕೊಪ್ಪ ಹಾಗೂ ಈ ಬಡಾವಣೆಗಳಿಗೆ ಹೊಂದಿಕೊಂಡಂತಹ ಬಡಾವಣೆಗಳಲ್ಲಿ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ನಾಳೆ ಮತ್ತು ನಾಡಿದ್ದು ಇಡೀ ನಗರದಲ್ಲಿವಿದ್ಯುತ್ ವ್ಯತ್ಯಯವಾಗುತ್ತಿದೆ.
ಇದನ್ನೂ ಓದಿ-https://suddilive.in/archives/666
