ಕ್ರೈಂ ನ್ಯೂಸ್

ಸಮ್ಥಿಂಗ್ ಇಸ್ ಮಿಸ್ಸಿಂಗ್ ಇನ್ ಸಕ್ರೆಬೈಲು….!?

ಸುದ್ದಿಲೈವ್/ಶಿವಮೊಗ್ಗ

ಇಲ್ಲಿನ  ಸಕ್ರೆಬೈಲಿನಲ್ಲಿ ಒಂದಲ್ಲ ಒಂದು ಅವಘಡಗಳು ಸಂಭಿವಿಸುತ್ತಲೇ ಇದೆ. ಈ ಹಿಂದೆ ಮದವೇರಿದ ಆನೆಯೊಂದು ಮಾವುತರಿಗೆ ಹಣ್ಣಗಾಯಿ ನೀರಗಾಯಿ ಮಾಡಿತ್ತು. ಈಗ ಅದೇ ಆನೆ ಬಿಡಾರದಲ್ಲಿ ಮದುವೆಯ ಫ್ರೀವೆಡ್ಡಿಂಗ್ ಶೂಟಿಂಗ್ ನಲ್ಲಿ ಯಡವಟ್ಟಾಗಿ ಮಾವುತ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬಿಡಾರಗಳಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಗಳಿಗೆ ಅವಕಾಶ ಇದೆಯಾ? ಎಂಬ ಪ್ರಶ್ನೆ ಯೊಂದಿಗೆ ಈ ಸುದ್ದಿ ಆರಂಭವಾಗಲಿದೆ.  ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರದಲ್ಲಿ ಹಲವು ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಆನೆ ಬಿಡಾರ ಸುದ್ದಿಯಾಗುತ್ತಿದೆ.

ಮಾವುತ ಆನೆ ಮೇಲಿಂದ ಕೆಳಗೆ ಬಿದ್ದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಿನ್ನೆ ಬಿಡಾರದಲ್ಲಿ ನವಜೋಡಿಗಳ ವೆಡ್ಡಿಂಗ್ ಶೂಟಿಂಗ್ ವೇಳೆ ಈ ಅಚಾತುರ್ಯ ನಡೆದಿದೆ.

ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಶ್ಯದ ವೇಳೆ ಘಟನೆ ನಡೆದಿದೆ.ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಓಡಿ ಬಂದಿದೆ.ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಸಂಶುದ್ದೀನ್ ಮತ್ತೆ ಏಳಲೇ ಇಲ್ಲ.

ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಮಾವುತನಿಗೆ ಜ್ಞಾನ ತಪ್ಪಿದೆ.ತಕ್ಷಣ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯವನ್ನು ಬಿಡಾರಕ್ಕೆ ಸಂಪೂರ್ಣ ಚಿತ್ರೀಕರಿಸಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ.

ಈ ಘಟನೆಗೂ ಕೆಲ ತಿಂಗಳ ಹಿಂದೆ ನಡೆದ ಘಟನೆಗಳು ಸಂಬಂಧವಿಲ್ಲ, ಆದರೂ ಇಲ್ಲಿ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿವೆ. ಸುಮಾರು ಒಂದು ವರೆ ತಿಂಗಳ ಹಿಂದೆ ಭಾನುಮತಿ ಆನೆಯ ಬಾಲಕ್ಕೆ ಆಯುಧದಿಂದ ಹೊಡೆಯಲಾಗಿದೆ. ಚಿಕ್ಕಮಗಳೂರಿನಿಂದ ಕರೆತರಲಾದ ಆನೆಗೆ ಗಾಯ ಮಾಡಿರುವ ಪ್ರಕರಣಗಳು ಇನ್ಬೂ ಹಸಿವಾಗಿರುವಾಗಲೇ ಮತ್ತೊಂದು ಯಡವಟ್ಟು ಸಂಭವಿಸಿದೆ. ಸಮಥಿಂಗ್ ಇಸ್ ಮಿಸ್ಸಿಂಗ್ ಇನ್ ಸಕ್ರೆಬೈಲು ಎಂಬ ಅನುಮಾನ ಹೆಚ್ಚಾಗಿದೆ.

ಇದನ್ನೂ ಓದಿ-https://suddilive.in/archives/4110

Related Articles

Leave a Reply

Your email address will not be published. Required fields are marked *

Back to top button