ಸ್ಥಳೀಯ ಸುದ್ದಿಗಳು

ಸಿಎಂ ಅಯೋಧ್ಯಗೆ ಹೋಗುವ ವಿಚಾರ ಸ್ವಾಗತಾರ್ಹ-ಬಿ.ವೈ.ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ಸಿಎಂ ಸಿದ್ದರಾಮಯ್ಯ ಅವರು ಅಯೋಧ್ಯಗೆ ಹೋಗಿ ಬರುವುದಾಗಿ ಹೇಳಿರುವುದು ತುಂಬ ಒಳ್ಳೆಯ ಬದಲಾವಣೆ. ತುಷ್ಠೀಕಾರ ರಾಜಕಾರಣದಿಂದ ಹೊರಬರುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಸಂಸದ ರಾಘವೇಂದ್ರ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ಸಾಕಷ್ಟು ಬದಲಾವಣೆಯನ್ನ ತರುವ ಮುನ್ಸೂಚನೆ ಯಾಗಿದೆ. ಈಗಲಾದರೂ ಒಳ್ಳೆಯ ಬುದ್ದಿ ಬಂದಿದೆ ಎಂದು ಟೀಕಿಸಿದರು.

ಹಿಂದೂಗಳು ಬಹುಸಂಖ್ಯಾತವಾಗಿ ಇರುವ ವರೆಗೂ ಅಯೋಧ್ಯ ರಾಮಮಂದಿರದಲ್ಲಿ ರಾಮ ಇರುತ್ತಾನೆ ಎಂಬ ಪೇಜಾವರ ಶ್ರೀಗಳ ಹೇಳಿಕೆ ಸರಿಯಿದೆ. ಈ ಬಾರಿ ಸಂಸದರಿಗೆ ನಲಪಾಡ್ ಗೆಲ್ಲಿದ್ದಾರಾ ಎಂಬ ಸವಾಲು ಎಸೆದಿದ್ದಾರೆ. ಸ್ವೀಕರಿಸುವೆ ಎಂದರು. ಈ ಹಿಂದೆಯೂ ಜಮೀರ್ ಸವಾಲನ್ನ ಸ್ವೀಕರಿಸಿದ್ದೀವಿ ಗೆದ್ದಿದ್ದೇವೆ ಈ ಬಾರಿಯೂ ಅದೇ ಆಗಲಿದೆ ಎಂದರು.

ಮೇಲುಸೇತುವೆ ಮತ್ತಿತರೆ ಕಾಮಗಾರಿಯ ಬಳಕೆಗೆ ಕಾಯಲು ಹೋಗೊಲ್ಲ. ತೀರ್ಥಹಳ್ಳಿಯಲ್ಲಿ 60 ಕೋಟಿ ಬೈಪಾಸ್ ಉದ್ಘಾಟನೆಗೆ ಕಾಯೊಲ್ಲ ಈಗಾಗಲೇ ಸಾರ್ವಜನಿಕ ಬಳಕೆಗೆ ಬಿಡಲಾಗಿದೆ. ಹಾಗೆ ವಿದ್ಯಾನಗರದ ಮೇಲ್ಸೇತುವೆ ಇವತ್ತು ಕಾಂಕ್ರೀಟ್ ಹಾಕಲಾಗಿದೆ  ಜ.26 ರಂದು ಸಿದ್ದವಾದರೆ ಬಳಕೆಗೆ ಬಿಡಲಾಗುತ್ತದೆ. ಕೇಂದ್ರಸಚಿವ ನಿತಿನ್ ಗಡ್ಕರಿ ಅವರು ಬಂದ ನಂತರ ಉದ್ಘಾಟಿಸಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/6733

Related Articles

Leave a Reply

Your email address will not be published. Required fields are marked *

Back to top button