ಸ್ಥಳೀಯ ಸುದ್ದಿಗಳು

ಕೆಎಫ್ ಡಿ ಕಾಯಿಲೆ ಕುರಿತು ತನಿಖೆಗೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಲ್ಲಿ 1956 ರಲ್ಲಿ ಸಾಗರ-ತೀರ್ಥಹಳ್ಳಿಯ ಕ್ಯಾಸನೂರಿನಲ್ಪಿ ಕಂಡ ಬಂದ ಮಂಗನಕಾಯಿಲೆಗೆ ಅನೇಕರು ಪ್ರಾಣ ಬಿಟ್ಟಿದ್ದಾರೆ. ಈ ಸಾವು ನೋವಿನ ಬಗ್ಗೆ ಸರ್ಕಾರದಲ್ಲಿ ದಾಖಲೆ ಇರಲಿಲ್ಲ. ಕಳೆದ ಮೂರು ದಶಕಗಳಿಂದ ದಾಖಲೆ ಸಂಗ್ರಹಿಸಲಾಗಿದೆ. ಆದರೆ ಇಲ್ಲಿನ ಡಿಹೆಚ್ ಒ ಜಿಲ್ಲೆಯಲ್ಲಿ ಕೆಎಫ್ ಡಿ ಇಲ್ಲ ಎಂದು ಬಿಂಬಿಸಲು ಹೊರಟಿರುವುದಾಗಿ ಕೆಎಫ್ ಡಿ ಜನಜಾಗೃತಿ ಒಕ್ಕೂಟ ಆರೋಪಿಸಿದೆ.

ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ  ಶ್ರೀಪಾಲ್, ಶಶಿ ಸಂಪಳ್ಳಿ  2019ರಲ್ಲಿ ಮಂಗನ ಕಾಯಿಲೆ ಸಾಗರ ಭಾಗದಲ್ಲಿ ತೀವ್ರವಾಗಿ ಕಾಡಿದೆ 26 ಜನ ಸಾವನ್ನಪ್ಪಿದ್ದಾರೆ. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ನಡೆದರೂ ಅಧಿಕಾರಿಗಳು ತಪ್ಪುದಾರಿ ಎಳೆದಿದ್ದಾರೆ.  ಸರ್ಕಾರ ಜಾಗೃತಿ ಮೂಡಿಸುವುದಾಗಿ ನ್ಯಾಯಾಲಯದ ಮುಂದೆ ಹೇಳಿತು. ಆಗ  ಅರ್ಜಿ ವಾಪಾಸ್ ಪಡೆಯಲಾಗಿದೆ. ಆದರೆ ಅಧಿಜಾರಿಗಳು ಕಾಯಿಲೆಯೇ ಇಲ್ಲ ಎಂದು ಬಿಂಬಿಸಲು ಹೊರಟಿರುವ ಅನುಮಾನವಿದೆ. ಹಾಗಾಗಿ ಕಳೆದು ಎರಡು ವರ್ಷದಿಂದ ನೀಡಲಸಗುತ್ತಿದ್ದ  ವ್ಯಕ್ಸಿನೇಷನ್ ರದ್ದಾಗಿದೆ ಎಂದು ಆರೋಪಿಸಿದರು.

ಯಾವ ವ್ಯಕ್ಸಿನೇಷನ್ ತಯಾರಿಕೆ ಇಲ್ಲವಾಗಿದೆ.  ಮೊನ್ನೆ ಹೊಸನಗರದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಅದೇ ಕುಟುಂಬದ ಇನ್ನೊಬ್ಬರಿಗೆ ಕೆಎಫ್ ಡಿ ಬಂದಿದೆ.ಯುವತಿ ಸಾವನ್ನಪ್ಪಿರುವುದಲ್ಲ.  ಇದು ಕೊಲೆ ಎಂದು ಒಕ್ಜೂಟ ಆರೋಪಿಸಿದ್ದಾರೆ ಇದಕ್ಕೆ ಜಿಲ್ಲಾಡಳಿತ ಮತ್ತು ಡಿಹೆಚ್ ಒ ಆಕೆಯ ಸಾವಿಗೆ ಕಾರಣ ಎಂದು ದೂರಿದರು.

ಯುವತಿ ದಾಖಲಾಗುತ್ತಿದ್ದಂತೆ ಕೆಎಫ್ ಡಿ ಪಾಸಿಟಿವ್ ಬಂದಿದೆ. ಡಿಹೆಚ್ ಒ ಇದು ಡೆಂಗ್ಯೂ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ನಂತರ ಕೆಎಫಡಿ ಪಾಸಿಟಿವ್ ಎಂದು ಹೇಳಿದ್ದಾರೆ. ಆದರೆ ಮೆಗ್ಗಾನ್ ಗೆ ದಾಖಲಾದ ವೇಳೆ ನಡೆದ ಪರೀಕ್ಷೆಯಲ್ಲಿ ಕೆಎಫ್ ಡಿ ಪಾಸಿಟಿವ್ ಬಂದಿದೆ. ಈ ಬಗ್ಗೆ ದಾಖಲೆ ಇದೆ. ಇದನ್ನ ಡಿಹೆಚ್ ಒ ತಿರುಚಿದ್ದಾರೆ.

ಇದೊಂದು ಘೋರ ಅಪರಾಧವಾಗಿದೆ. 1956 ರಲ್ಲಿ ಕಾಣಿಸಿಕೊಂಡ ಕಾಯಿಲೆಗೆ  ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಔಷದಿ ಕಂಡು ಹಿಡಿಯಲಾಗಿಲ್ಲ ಇದು ಸರ್ಕಾರದ ನಿರ್ಲಕ್ಷವೂ ಕೂಡಿದೆ. ಕಾಯಿಲೆ ಇಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಯಿತ್ತಿದೆ. ಇದರ ಮೂಲಕ ರಾಜ್ಯದಲ್ಲಿ ಕೆಎಫ್ ಡಿ ಇಲ್ಲ ಎಂದು ಹೇಳುವ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂಶಯವಿದೆ.ಯುವತಿಯ ಸಾವಿನ ಬಗ್ಗೆ ತನಿಖೆಯಾಗಬೇಕಿದೆ. ಡಿಸಿಗೂ ಡಿಹೆಚ್ ಒ ತಪ್ಪುಮಾಹಿತಿ ನೀಡಿದ್ದಾರೆ ಎಂದು ದೂರಿದರು.

ಶಶಿ ಸಂಪಳ್ಳಿ ಮಾತನಾಡಿ, ನಣಿಪಾಲ್ ಆಸ್ಪತ್ರೆಗೆ ಹಣ ಭರಿಸಿಲ್ಲ.ಈ ಪ್ರಕರಣದಲ್ಲಿ ತನಿಖೆಯಾಗಿ ಕ್ರಿಮಿನಲ್ ಆಕ್ಟಿವಿಟಿ ಎಂದು ಪರಿಗಣಿಸಬೇಕು.ಮೋಹನ್ ದಾಸ್ ಪ್ರಕರಣವನ್ನ ನಿರ್ಲಕ್ಷವಹಿಸಲಾಗಿತ್ತು. ಈಗ ಯುವತಿಯ ಸಾವಿನಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ತನಿಖೆಯಾಗಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/6588

Related Articles

Leave a Reply

Your email address will not be published. Required fields are marked *

Back to top button