ಹಳೇ ಸ್ಪರ್ಧೆ ಹೊಸ ರೂಲ್ಸ್-ಗ್ರಾಮೀಣ ಸ್ಪರ್ಧೆಗೆ ಹೊಸ ಉತ್ಸಾಹ

ಸುದ್ದಿಲೈವ್/ಶಿವಮೊಗ್ಗ

ದೀಪಾವಳಿಯ ನಂತರ ಮಲೆನಾಡಿನ ಮೂರು ತಾಲೂಕಿನಲ್ಲಿ ಹೋರಿ ಹಬ್ಬದ ಕಲರವ ಆರಂಭಗೊಂಡಿದೆ. ಹೋರಿ ಹಬ್ಬವನ್ನ ಮಲೆನಾಡಿನ ರೈತರಲ್ಲಿ ಉತ್ಸಹ ಮತ್ತು ಹೋರಿಯ ಕುತ್ತಿಗೆ ಕಟ್ಟುವ ಕೊಬ್ಬರಿಯನ್ನ ಕೀಳುವುದೇ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗೆ ಹೊಸ ರೂಲ್ಸ್ ಸಹ ರೈತರಲ್ಲಿ ಉತ್ಸಹ ಮೂಡಿಸಿದೆ.
ಈ ಸ್ಪರ್ಧೆಗೆ ಒಂದೊಂದು ಹೋರಿಯನ್ನೂ ಅಲಂಕರಿಸಿ ಅಖಾಡಕ್ಕೆ ಬಿಡಲಾಗುತ್ತದೆ. ಅಖಾಡದಲ್ಲಿ ಓಡುವ ಹೋರಿಗೆ ಸೆಲೆಬ್ರೆಟಿಗಳ ಮತ್ತು ರೌಡಿಗಳ ಹೆಸರನ್ನಿಡುವುದೇ ಒಂದು ರೋಚಕತೆ. ಈ ರೋಚಕತೆಯಲ್ಲಿ ಹೋರಿಯನ್ನ ಹಿಡಿದು ಕೊಬ್ಬರಿ ಕೀಳುವವನೇ ರಿಯಲ್ ಹೀರೋ ಆಗಿರುತ್ತಾನೆ.
ಇದು ಅಪ್ಪಟ ಗ್ರಾಮೀಣ ಕ್ರೀಡೆಯಾಗಿದೆ. ಶಿಕಾರಿಪುರ, ಸೊರಬ, ಆನವಟ್ಟಿ ಭಾಗದಲ್ಲಿ ಹೋರಿಯನ್ನ ಬಲೂನು, ಬಣ್ಣಗಳನ್ನ ಹಚ್ಚಿ ಶೃಂಗಾರ ಮಾಡಲಾಗುತ್ತದೆ. ಈ ಕ್ರೀಡೆಯಲ್ಲಿ ಅಅಯನೂ ಇದೆ. ಕಳೆದ ವರ್ಷ ದೀಪಾವಳಿ ಆರಂಭದಲ್ಲೇ ಸಾವು ನೋವು ಉಂಟಾಗಿದ್ದವು. ಆಯೋಜಕರ ವಿರುದ್ಧವೂ ಎಫ್ಐಆರ್ ಆಗಿತ್ತು.
ನ್ಯಾಯಾಲಯ ಈ ಹೋರಿ ಬೆದರಿಸುವುದನ್ನ ನಿಷೇಧಿಸಿದೆ. ಕಾರಣ ಪ್ರಾಣಿ ಹಿಂಸೆ ಆಗಬಾರದು ಎಂದು. ಈ ಬಾರಿ ಅದೇ ಆದೇಶ ಮಾಡಿಫೈ ಆಗಿ ಬಿಡುಗಡೆಯಾಗಿದೆ. ಇಂದು ಸೊರಬ ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಹೊಸ ಆದೇಶವನ್ನ ಹೊರಡಿಸಿದೆ.
ಪ್ರಾಣಿ ಹಿಂಸೆಯನ್ನ ಸ್ಪರ್ಧೆಯಲ್ಲಿ ಮಾಡುವ ಹಾಗಿಲ್ಲ. ಪ್ರಾಣಿಗಳ ಯಾವುದೇ ಭಾಗಕ್ಕೆ ಖಾರದ ಪುಡಿ ಹಚ್ಚುವ ಹಾಗಿಲ್ಲ. ಹೋರಿ ಓಡಲು ಹೊಸ ಟ್ರ್ಯಾಕ್ ನಿರ್ಮಿಸಬೇಕು. 38 ಡಿಗ್ರಿ ಸೆಲ್ಸಿಯಸ್ ನಲ್ಲಿ ಸ್ಪರ್ಧೆ ಆಯೋಜಿಸಬೇಕು. 12 ರಿಂದ 3 ಗಂಟೆಯ ಒಳಗೆ ಸ್ಪರ್ಧೆ ಮುಗಿಸಬೇಕು. ಕ್ರೀಡೆ ನಡೆಯುವ ದಿನಾಂಕದಂದು ಎಚ್ಚರಿಕೆ ಫಲಕಗಳು, ಬ್ಯಾರಿಕೇಡ್ ಮೊದಲಾದವುಗಳು ಎಚ್ಚರಿಕೆಗಳನ್ನ ಹಾಕಿಕೊಳ್ಳಲು ಸೂಚಿಸಲಾಗಿದೆ.
ದೀಪಾವಳಿಯ ದಿನದಂದೇ ದ್ವಾರಹಳ್ಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 42ಹೋರಿಗಳು ಭಾಗಿಯಾಗಿದ್ದವು. ಎಲ್ಲಾ ಹೋರಿಗಳಿಗೆ ಸಮಾಧಾನಕರ ಬಹುಮಾನ ಹಂಚಲಾಗಿತ್ತು.
ಇದನ್ನೂ ಓದಿ-https://suddilive.in/archives/3182
