ಕ್ರೈಂ ನ್ಯೂಸ್

ಟೂತ್ ಪೇಸ್ಟ್ ನಲ್ಲಿ ಗಾಂಜಾ-ಜೈಲಿನಲ್ಲಿ ಮದಕ ವಸ್ತುಗಳ ಹಾವಳಿ

ಜೈಲಿನಲ್ಲಿ ಟೂತ್ ಏಸ್ಟ್ ನಲ್ಲಿ ಗಾಂಜಾ ಕಡ್ಡಿಗಳನ್ನಿಟ್ಟು ಶಿವಮೊಗ್ಗ ಕಾರಾಗೃಹದ ವಿಚಾರಣ ಖೈದಿಗೆ ಸಾಗಿಸಲು ಯತ್ನಿಸಿದ್ದ ಸಂದರ್ಶಕನ ವಿರುದ್ಧ ತುಂಗನಗರದಲ್ಲಿ ಎಫ್ಐಆರ್ ದಾಖಲಾಗಿದೆ. ಇದು ಕಾರಾಗೃಹದಲ್ಲಿ ನಡೆದಿರುವ ವರ್ಷದ ಮೊದಲನೇ ಕೇಸ್!

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಸಂಜೆ 5.00 ಗಂಟೆ ಸುಮಾರಿಗೆ ವಿಚಾರಣಾ ಬಂದಿ ಗಣೇಶ ಬಿನ್ ವೆಂಕಟೇಶನಾಯ್ಕ ಈತನನ್ನು ಬೇಟಿಯಾಗಲು ಸಂದರ್ಶಕನಾಗಿ  ಭದ್ರಾವತಿಯ ಆಟೋಡ್ರೈವರ್ ಮೊಹ್ಮದ್ ತಯೀಬ್ ತಂದೆ ಔರಂಗಜೇಬ್(22) ಎಂಬುವವನು ಜೈಲಿಗೆ ಬಂದಿದ್ದಾನೆ.‌

ಜೈಲಿನಲ್ಲಿ ಆತಹಿಡಿದುಕೊಂಡು ಬಂದಿದ್ದ ಪ್ಲಾಸ್ಟಿಕ್ ಕವ‌ರ್ ಗಳನ್ನ  ಕೆ ಎಸ್ ಐ ಎಸ್ ಎಫ್ ಅಧಿಕಾರಿ ಮತ್ತು ಸಿಬ್ಬಂದಿಗಳು X-Ray ಬ್ಯಾಗೇಜ್ ಸ್ಕ್ಯಾನರ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಕವರ್ ನಲ್ಲಿದ್ದ ಟೂತ್ ಪೇಸ್ಟ್ ಒಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.‌

ಟೂತ್ ಪೆಟ್ಟು ತೆರೆದು ಪರಿಶೀಲಿಸಿದಾಗ ಅದರಲ್ಲಿ 7 ಉದ್ದನೆಯ ಸ್ಟ್ರಾಗಳನ್ನ ಇಡಲಾಗಿತ್ತು. ಆ ಸ್ಟ್ರಾಗಳಲ್ಲಿ ಒಂದನ್ನ ಕತ್ತರಿಸಿ ನೋಡಿದಾಗ ಗಾಂಜಾ ಇರುವುದು ಕಂಡು ಬಂದಿದೆ. ಸಂದರ್ಶಕನು ಅಕ್ರಮವಾಗಿ ಕಾರಾಗೃಹದೊಳಗೆ ಟೂತ್ ಪೆಸ್ಟ್ ಮೂಲಕ ಗಾಂಜಾವನ್ನು ಸಾಗಿಸಲು ಪ್ರಯತ್ನಿಸಿದ್ದಾನೆ.

ಕಾರಾಗೃಹದಲ್ಲಿ ಟೂತ್ ಪೇಸ್ಟ್ ಮೂಲಕ ಖೈದಿಗೆ ಗಾಂಜಾ ಸಾಗಿಸಲು ಬಂದಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳೆದ ವರ್ಷವೂ ಜೈಲಿನಲ್ಲಿ ಗಾಂಜಾ ಹಾವಳಿ ವಿರುದ್ಧ ಅನೇಕ ದೂರುಗಳಾಗಿದ್ದವು. ಈ ಬಾರಿ ಜೈಲಿನಲ್ಲಿ ಗಾಂಜಾ ಹಾವಳಿಯ ಮೊದಲ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/6664

Related Articles

Leave a Reply

Your email address will not be published. Required fields are marked *

Back to top button