ರಾಜಕೀಯ ಸುದ್ದಿಗಳು

ಆರೋಪ ಮಾಡಲು ಬಂದವರೆಲ್ಲಾ ಆಲಿ ಬಾಬಾ ಮತ್ತು ಚಾಲಿಸ್ ಚೋರ್ ಗಳು-ಸಂಗಮೇಶ್ವರ್

ಸುದ್ದಿಲೈವ್/ಶಿವಮೊಗ್ಗ

ಮೋದಿ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಕೇವಲ ಕೋಮು ಭಾವನೆಗಳನ್ನು ಕೆರಳಿಸಿ ಅಧಿಕಾರದಲ್ಲಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಆರೋಪಿಸಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ ಉತ್ತಮ ಆಡಳಿತ ನೀಡಿದೆ. ಕಾಂಗ್ರೆಸ್‌ ಗೆ ಅಹ್ವಾನ ನೀಡಿದರು ಅಯೋಧ್ಯೆಗೆ ಹೋಗಲ್ಲ.ಅದು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕ್ರಮ ಆ ಹಿನ್ನೆಲೆಯಲ್ಲಿ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಆತ್ಮದಲ್ಲಿ ಶ್ರೀ ರಾಮನಿದ್ದಾನೆ ಇಲ್ಲಿಂದಲೇ ಕೈ ಮುಗಿಯುತ್ತೇವೆ. ಭದ್ರಾವತಿಯ ಜೆಡಿಎಸ್, ಬಿಜೆಪಿ ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸಂಗಮೇಶ್ವರ್ ಚಂದ್ರೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸದರು.

ನನ್ನ ವಿರುದ್ಧ ಆರೋಪ ಮಾಡಲಿಕ್ಕೆ ಬಂದಿರುವವರೆಲ್ಲ ಕಳ್ಳರು. ಆಲಿ ಬಾಬ ಮತ್ತು ಚಾಲೀಸ್ ಚೋರ್ ಎಂದಿರುವ ಶಾಸಕರು,  ಆ ವಿಚಾರ ಪ್ರಸ್ತಾಪಿಸಬೇಡಿ ಅವರ್ಯಾರು ದೊಡ್ಡ ಮನುಷ್ಯರಲ್ಲ. ಜಾತ್ಯತೀತ ಪ್ರಸ್ತಾಪ ಮಾಡುತ್ತಿದ್ದ ಜೆಡಿಎಸ್ ನವರು ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್ ನವರು ದೊಡ್ಡ ಕೋಮುವಾದಿಗಳು ಎಂದು ಆರೋಪಿಸಿದರು.‌

ಇದನ್ನೂ ಓದಿ-https://suddilive.in/archives/6602

Related Articles

Leave a Reply

Your email address will not be published. Required fields are marked *

Back to top button