ಸ್ಥಳೀಯ ಸುದ್ದಿಗಳು

ಏ.07 ರಂದು ಆಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ

ಸುದ್ದಿಲೈವ್/ಶಿವಮೊಗ್ಗ,ಏ.03

ಜಿಲ್ಲಾ ವಿಶ್ವಕರ್ಮ, ವಿಶ್ವ ಬ್ರಾಹ್ಮಣ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏ.7ರಂದು ಬೆಳಿಗ್ಗೆ 11ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಶ್ವಕರ್ಮದ ಮಹಾಸಭಾದ ಅಧ್ಯಕ್ಷ ನಿರಂಜನ ಮೂರ್ತಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಮಂದಿರದಲ್ಲಿ ಶ್ರೀರಾಮ ಲಲ್ಲಾ ವಿಗ್ರಹದ ಶಿಲ್ಪಿ ನಮ್ಮ ಕನ್ನಡದವರು ಅದರಲ್ಲೂ ಮೈಸೂರಿನವರು ಮತ್ತು ವಿಶ್ವಕರ್ಮದವರು ಎಂಬುವುದೇ ನಮಗೆ ದೊಡ್ಡ ಹೆಮ್ಮೆ, ಅವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂಭ್ರಮವಾಗಿದೆ ಎಂದರು.

ಅರುಣ್‌ಯೋಗೀರಾಜ್ ದೇಶದ ಬಹುಬೇಡಿಕೆಯ ಶಿಲ್ಪಿಯಾಗಿದ್ದಾರೆ. ಮೈಸೂರಿನ 5 ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನಲೆ ಹೊಂದಿರುವ ಇವರು ದೇಶದಲ್ಲಿಯೇ ಹೆಸರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಇವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇವರ ಕುಟುಂಬದ ಹಿರಿಯರನ್ನು ಮೈಸೂರು ರಾಜರು ಪೋಷಣೆ ಮಾಡುತ್ತಿದ್ದರು ಎನ್ನುವುದು ಹೆಮ್ಮೆಯಾಗಿದೆ ಎಂದರು.

ಇವರಿಗೆ ಹಲವು ಪ್ರಶಸ್ತಿಗಳು ಬಂದಿವೆ. 2020ರಲ್ಲಿ ನಾಲ್ವಡಿ ಪ್ರಶಸ್ತಿ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಮೆಚ್ಚುಗೆ , ದಿ ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಗೌರವ ಸದಸ್ಯತ್ವ, ರಾಜ್ಯೋತ್ಸವ ಪ್ರಶಸ್ತಿ, ಮುಖ್ಯಮಂತ್ರಿಗಳಿAದ ಸನ್ಮಾನ, ಕ್ರೀಡಾ ಅಕಾಡೆಮಿಯಿಂದ ಅಭಿನಂದನೆ ಹೀಗೆ ಹಲವು ಪ್ರಶಸ್ತಿ ಸನ್ಮಾನಗಳನ್ನು ಇವರು ಪಡೆದಿದ್ದಾರೆ ಎಂದರು.

ಸಮಾಜದ ಪ್ರಮುಖ ರಾಮು (ರಮೇಶ್) ಮಾತನಾಡಿ, ಇಂತಹ ಮಹಾನ್‌ಶಿಲ್ಪಿಯನ್ನು ಸನ್ಮಾನಿಸುತ್ತಿರುವುದು ನಮ್ಮ ಕರ್ತವ್ಯ ಕೂಡ ಏ.7ರಂದು ಸನ್ಮಾನ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9ಕ್ಕೆ ಗಾಂಧಿಬಜಾರಿನ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಾರಕಹೋಮದೊಂದಿಗೆ ರಾಜಬೀದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ರಾಮಣ್ಣಶ್ರೇಷ್ಠಿ ಪಾರ್ಕಿನಿಂದ ಅಂಬೇಡ್ಕರ್ ಭವನದವರೆಗೆ ಈ ಉತ್ಸವ ನಡೆಯಲಿದೆ ಎಂದರು.

ಸನ್ಮಾನ ಸಮಾರಂಭದ ಸಾನಿಧ್ಯವನ್ನು ಹಾಸನ ಜಿಲ್ಲೆ ಅರೇಮಾದನಹಳ್ಳಿಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿ ಹಾಗೂ ಚನ್ನಗಿರಿ ತಾಲ್ಲೂಕು ವಡ್ನಾಳ್ ಮಠದ ಶ್ರೀ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಶ್ರೀನಾಥ್, ಲಿಂಗಪ್ಪಾಚಾರ್, ರೂಪ, ಯಶೋಧ ನಾಗರಾಜ್, ಮಾಲತೇಶ್, ಸತೀಶ್, ಮೌನೇಶ್, ಶ್ರೀನಿವಾಸ, ಜಗನ್ನಾಥ ಮುಂತಾದವರು ಇದ್ದರು.

ಇದನ್ನೂ ಓದಿ-https://suddilive.in/archives/12025

Related Articles

Leave a Reply

Your email address will not be published. Required fields are marked *

Back to top button