ಸ್ಥಳೀಯ ಸುದ್ದಿಗಳು

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಘೋಷಿಸಿದ ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಜೀವನದಲ್ಲಿ ಈ ರೀತಿಯ ದಿನ ಬರುತ್ತೆ ಎಂದು ಕೊಂಡಿರಲಿಲ್ಲ. ನರೇಂದ್ರ ಮೋದಿ ವಿರುದ್ಧ ಹೋಗಲು ನಾನು ಸಾಧ್ಯವಿಲ್ಲ. ಆದರೆ ಶಿವಮೊಗ್ಗ ಲೋಕಸಭಾ‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. ಇದರಿಙದ ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಅವರು ನಗರದ ಬಂಜಾರದ ಕನ್ವೆಷನಲ್ ಹಾಲ್ ನಲ್ಲಿ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿ, ಮೋದಿ ಪ್ರಧಾನಿಯಾದಾಗ ಎಲ್ಲಾ ರಾಷ್ಟ್ರಗಳು ಪಾಕ್ ಪರವಿದ್ದರು. ಮೋದಿ ಏಕಾಂಗಿಯಾಗಿದ್ದರು. ಎಲ್ಲಾ ದೇಶದವರು ನಮ್ಮ ದೇಶಕ್ಕೆ ಬನ್ನಿ ಎಂದು ರೆಡ್ ಕಾರ್ಪರೇಟ್ ಹಾಕಿದ್ದರು ಎಂದರು.

ವಂಶ ಪರಂಪರೆಯ ವಿರುದ್ಧ ಮಾತನಾಡೊಲ್ಲ. ರಾಜ್ಯದ ಬಿಜೆಪಿಯಲ್ಲಿಯೂ ಕಾಂಗ್ರೆಸ್ ಸಂಸ್ಕೃತಿ ಬೆಳೆದು ಬಂದಿದೆಯಾ ಎಂಬ ಅನುಮಾನವಿದೆ. ನೊಂದ ಕಾರ್ಯಕರ್ತರು ನಮ್ಮ ತೀರ್ಮಾನಕ್ಕೆ ಕಾಯ್ತಾ ಇದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಎಂಪಿ ಶೋಭಾ ಕರದ್ಲಾಂಜೆಗೆ ಮತ್ತು ಹಾವೇರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಟಿಕೇಟ್ ಎಂದು ಹಠಹಿಡಿದಿದ್ದರು. ನಾವು ಯಡಿಯೂರಪ್ಪನವರ ಮನೆಗೆ ಹೋದಾಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನೀವು ಒಪ್ಪಿಗೆ ಕೊಟ್ಟರೆ ಸ್ಪರ್ಧಿಸುವುದಾಗಿ ಹೇಳಿದ್ದನು.

ಆದರೆ ಯಡಿಯೂರಪ್ಪ ಕ್ಷೇತ್ರದಲ್ಲಿ ಓಡಾಡು ನಿನಗೆ ಟಿಕೇಟು ಎಂದಿದ್ದರು. ಟಿಕೇಟ್ ಹಂಚುವ ವೇಳೆ ಬಸವರಾಜ್ ಬೊಮ್ಮಾಯಿಗೆ ಮತ್ತು ಶೋಭಾಕರಂದ್ಲಾಜೆಗೆ ಟಿಕೇಟ್ ಗೆ ಹಠಹಿಡಿದಿದ್ದರು. ಶೋಭನಿಗೆ ಹಠಹಿಡಿದು ಟಿಕೇಟ್ ಕೊಡಿಸಿದ ಯಡಿಯೂರಪ್ಪ ನನ್ನ ಮಗನಿಗೆ ಬೆನ್ನುತಟ್ಟಿದವರು ಯಾಕೆ ಟಿಕೇಟ್ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಸಹ ಕಾಂತೇಶ್ ಗೆ ಟಿಕೇಟ್ ಕೊಡಿ ಎಂದಿದ್ದರು. ಪಕ್ಷದ ಸರ್ವೆ ನಡೆದಾಗ ಕಾಂತೇಶ್ , ಬೊಮ್ನಾಯಿ ಸೇರಿ ಮೂರು ಜನರ ಹೆಸರು ಶಿಫಾರಸು ಮಾಡಲಾಯಿತು. ಆದರೆ ಬಸವರಾಜ್ ಬೊಮ್ಮಾಯಿ ಹೆಸರು ಪ್ರಕಟವಾಯಿತು. ಇದರ ಹಿಂದೆ ಕೆಟ್ಟ ರಾಜಾರಣವಿದೆ ಎಂದರು.

ಸಿಟಿ ರವಿ ನಳೀನ್ ಕುಮಾರ್, ಪ್ರತಾಪ್ ಸಹ, ಸದಾನಂದ ಗೌಡರಿಗೆ ಟಿಕೇಟ್ ಕೈತಪ್ಪಿದ್ದು ಯಾವ ನ್ಯಾಯ? ಇವರೆಲ್ಲಾ ಹಿಂದುತ್ವವಾದಿ ಆಗಿದ್ದರು. ಆದರೆ ಇವರಿಗೆ ಟಿಕೇಟ್ ನೀಡಲಿಲ್ಲ. ಶೊಭಾ ಕರದ್ಲಾಂಜೆ ಗೆ ಟಿಕೇಟ್ ನೀಡಲಾಯಿತು. ಹಠಹಿಡಿದ ಯಡಿಯೂರಪ್ಪ ಕೇಂದ್ರ ನಾಯಕರ ಮುಂದೆ ತಮಗೆ ಆಗುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದರು.

ಹೃದಯ ಬಗೆದರೆ ಒಂದು ಕಡೆ ಶ್ರೀರಾಮ, ಇನ್ಮೋಂದು ಕಡೆ ಮೋದಿ. ಯಡಿಯೂರಪ್ಪನವರ ಎದೆ ಬಗೆದರೆ ಒಂದು ಕಡೆ ಮಕ್ಕಳು, ಇನ್ನೊಂದು ಕಡೆ ಶೋಭಾಕ್ಕ ಎಂದು ಕಾರ್ಯಕರ್ತರು ತಿಳಿಸಿದ್ದಾರೆ ಎಂದು ನಗೆ ಚಟಾಕಿ ಹಾರಿಸಿದರು. ಜಗದೀಶ್ ಶೆಟ್ಟರ್ ಗೆ ಯಡಿಯೂರಪ್ಪತೀರ್ಮಾನಿಸಿದ್ದರು. ಯಾವ‌ಕೇಂದ್ರ ನಾಯಕರು ನಿರ್ಧರಿಸಿಲ್ಲ. ಹಿಂದಿನ‌ ಕಾಂಗ್ರೆಸ್ ನ ವ್ಯವಸ್ಥೆ ಇಂದಿನ‌ ಬಿಜೆಪಿಗೆ ಬಂದಿದೆ ಎಂದರು.

ನಿಮ್ಮ ಅಭಿಪ್ರಾಯ ಯೆಗೆದುಕೊಂಡಿದ್ದೇನೆ. ಙ್ನ ತೀರ್ಮಾನಕ್ಕೆ ಬಂದಿದ್ದಾರೆ. ನೊಂದ ಕಾರ್ಯಕರ್ತರ ಅಭಿಪ್ರಾಯವೂ ನನ್ನ ನಿರ್ಧಾರದ ಮೇಲೆ ಅವಲಂಭಿತವಾಗಿದೆ. ನನಗೆ ಸಿಟ್ಟು ಬಂದಿದೆ ಯಾಕೆಂದರೆ 40 ವರ್ಷ ಕೆಲಸ ಮಾಡಿಕೊಂಡವರು ನನ್ನ ಜೊತೆ ಇದ್ದಾರೆ. ಅವರಿಗೆ ಅನ್ಯಾಯವಾಗಬಾರದು. ನಾನು ಪಕ್ಷ ಬಿಡಲ್ಲ ಎಂದಿದ್ದಾರೆ.

ಯಡಿಯೂರಪ್ಪನವರು ಬೆಂಬಲಕ್ಕೆ ನಿಲ್ಲಿಸಿ ಟಿಕೇಟ್ ನೀಡಿದವರಲ್ಲಿ ಎಷ್ಟು ಜನ ಗೆಲ್ಲುತ್ತಾರೋ, ಗೊತ್ತಿಲ್ಲ ಸೋಲಿಗೆ ಬಿಎಸ್ ವೈ ಕಾರಣ, ನಾನು ಬಂಡಾಯವಾಗಿ ಸ್ಪರ್ಧಿಸಿದರೆ ನೋಟೀಸ್ ಮತ್ತು ಉಚ್ಚಾಟನೆ ಮಾಡಬಹುದು ಮತ್ತು ಎರಡೇ ತಿಂಗಳಲ್ಲಿ ಮತ್ತೆ ಪಕ್ಷ ಸೇರಿಸಲಾಗುತ್ತದೆ. ಕುಟುಂಬ ರಾಜಕಾರಣದಿಂದ ಪಕ್ಷವನ್ನ ತಪ್ಪಿದಬೇಕು ಹಾಗಾಗಿ ಸ್ಪರ್ಧೆ ನಿಶ್ವಿತ ಎಂದು‌ತಿಳಿಸಿದರು

ಇದ್ನೂ ಓದಿ-https://suddilive.in/archives/10786

Related Articles

Leave a Reply

Your email address will not be published. Required fields are marked *

Back to top button