ರಾಜಕೀಯ ಸುದ್ದಿಗಳು

ಸ್ವನಿಧಿ ಬಳಸಿಕೊಳ್ಳಲು ಮಾಜಿ ಸಚಿವ ರಾಮ್ ದಾಸ್ ಕರೆ

ಸುದ್ದಿಲೈವ್/ಶಿವಮೊಗ್ಗ

ಸ್ವನಿಧಿ ಯೋಜನೆ ಕೋವಿಡ್ ಸಂದರ್ಭದಲ್ಲಿ ಆರಂಭವಾಯಿತು. ಸುನಿಧಿಯಿಂದ ಸಂಮೃದ್ಧಿಯ ವರೆಗೆ ಜಾರಿಗೊಂಡಿತ್ತು. ಕಟ್ಟಡೆಯ ವ್ಯಕ್ತಿಗೆ ಈ ಯೋಜನೆ ತಲುಪವ ಉದ್ದೇಶದಿಂದ ಪ್ರವಾಸ ಕೈಗೊಳ್ಳಲಾಗಿದೆ ಎಧು ಮಾಜಿ ಸಚಿವ ರಾಮ್ ದಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ಸಾವಿರ ಜನಕ್ಕೆ 11 ಲಕ್ಷ ಕೋಟಿ ಹಣ ನೀಡಲಾಗಿದೆ 4256026 ಜನಲ್ಕೆ 765 ಕೋಟಿ ಸಹಾಯಹಸ್ತ ನೀಡಲಾಗಿದೆ. ಬಂಡವಾಳವಾಗಿ ಪ್ರಾರಂಭದಲ್ಲಿ 10 ಸಾವಿರ 7% ಬಡ್ಡಿ ಸರ್ಕಾರ ಕಟ್ಟುತ್ತಿತ್ತು. ಸಾಲ ತೀರಿಸಿದ ನಂತರ ಮುಂದೆ 20 ಸಾವಿರ ಹಣ ಸಾಲ ನೀಡುವ ಯೋಜನೆ ಇದಾಗಿದೆ ಎಂದರು.

ಜೀವನ್ ಭೀಮ ಯೋಜನೆ ಅಪಘಾತವಾದರೆ ಹಣ ನೀಡುವ ಯೋಜಬೆ. ಸುರಕ್ಷ ಯೋಜನೆ, ಮನ್ ಧನ್ ಯೋಜನೆ ಸಹ‌ಲಾಗೂ ಮಾಡಲಾಗಿದೆ. ಸುನಿಧಿಯೋಜನೆ ಅಡಿ ಮಹಿಳೆ ಗರ್ಭಿಣಿ ಆದರೆ 5 ಸಾವಿರ ಹೆರಿಗೆ ಆದರೆ 6 ಸಾವಿರ ರೂ. ಹಣ ನೀಡಲಾಗುತ್ತಿದೆ ಎಂದರು.

ಸಂಚಾರಿಗಳಿಗೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ನೀಡಲಾಗಿದೆ. ಬೀದಿ ವ್ಯಾಪಾರಿ, ಪೇಪ್ ಹಂಚುವ, ಅಡಿಗೆ, ಸ್ವಚ್ಛತೆ, ವಿಡಿಯೋಗ್ರಾಫರ್, ಕೇಬಲ್ ಆಪರೇಟರ್ ಗಳು, ಡಿಲವರಿ ಬಾಯ್ ಹೂವು ಕಟ್ಟುವರು ಸೇರಿ 25 ವರ್ಗವನ್ನ ಸುನಿಧಿ ಅಡಿ ತರಲಾಗಿ ಪೈಲಟ್ ಪ್ರೋಜೆಕ್ಟ್ ಯಶಸ್ವಿ ಮಾಡಲಾಗಿದೆ ಎಂದು ತಿಳಿಸಿದರು.

37 ಸಾವಿರ ಜನರಿಗೆ ನಗರದಲ್ಲಿ ಸ್ವನಿಧಿ ಅಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 382 ಜನ ಅರ್ಹರಿಗೆ 50 ಸಾವಿರ ಸಾಲ ಪಡೆಯಲುಯೋಗ್ಯವಾಗಿದ್ದು 550 ಜನಕ್ಕೆ ಸಾಲ ನೀಡಲಾಗಿದೆ. 70% ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ವಿದ್ಯಾಭ್ಯಾಸ ಮುಗಿಸಿದವರು ಉದ್ಯೋಗ ಮಾಡಲಾಗುತ್ತದೆಯಾ, ಆರೋಗ್ಯದ ಬಗ್ಗೆ ಯೋಜನೆಗೆ ಪ್ರೊಫೈಲಿಂಗ್ ಮಾಡಲಾಗುತ್ತಿದೆ ಎಂದರು.

ಇದಕ್ಕಾಗಿ ಹೆಲ್ತ್ ಕ್ಯಾಂಪ್, ಸಮ್ಮೇಳನ ಮಾಡಲು ಯೋಜಿಸಲಾಗಿದೆ. ಕಟ್ಟಕಡೆಯ ಜನರನ್ನ ಮುಖ್ಯವಾಣಿಗೆ ತರುವ ಪ್ರಯತ್ನವಾಗಿದೆ. ಕುಂಬಾರ್, ಮರಗೆಲಸ, ವಿಶ್ವಕರ್ಮ, ಸಲೂನ್ ಇಟ್ಟುಕೊಂಡವರು ಸೇರಿದಂತೆ 18 ವರ್ಗದವರನ್ನ ವಿಶ್ವಕರ್ಮ ಯೋಜನೆಯನ್ನ ಫೆ.18 ರಂದು 2023 ರಲ್ಲಿ ಆರಂಭಿಸಲಾಗುತ್ತಿದೆ. ಈಗ ತರಬೇತಿ ನೀಡಲು ಯೋಜಿಸಲಾಗಿದೆ. ಆನ್ ಲೈನ್ ಮಾರ್ಕೆಟಿಂಗ್, ಯೋಜನೆ ಬಗ್ಗೆ ಓಳುದಿನ ತರಬೇತಿ ನೀಡಲಾಗುತ್ತಿದೆ ಎಂದರು.

500 ರೂ ಸ್ಟೈಪನ್ಡ್ ನೀಡಲಗುವುದು. 15 ಸಾವಿರ ಟೂಲ್ ಗಳನ್ನ ಹಾಗೂ 1 ಲಕ್ಷ ರೂ‌ಬಂಡವಾಳ ನೀಡಲಾಗುತ್ತದೆ. 18 ತಿಂಗಳಲ್ಲಿ ತೀರಿಸಿದ್ದಲ್ಲಿ ಹೆಚ್ಚಿನ ಯೋಜನೆ ನೀಡುವ ವ್ಯವಸ್ಥೆ ಮಾಡಲಾಗಿದೆ.‌ ದೇಶದಲ್ಲಿ 59 ಲಕ್ಷ ಜನ ಆನ್ ಲೈನ್ ನಲ್ಲಿ ಪಿಎಂ ವಿಶ್ವಕರ್ಮ‌ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ನಂಬರ್‌1 ಸ್ಥಾನದಲ್ಲಿದೆ.

ಜಿಲ್ಲಾಧಿಕಾರಿ, ಜನರ್ ಮ್ಯಾನಜರ್, ಲೀಡ್ ಮ್ಯಾನೇಜರ್ ಒಳಗೊಂಡ 8 ಜನರ ಸಮಿತಿಯ‌ಮೂಲಕ ಸ್ಕ್ರೂಟಿನಿ ಆಗಲಿದೆ. ನಂತರ ತರಬೇತಿ ನೀಡಲಾಗುವುದು. ಕರ್ನಾಟಕದ ನಾಲ್ಕು ಫುಟ್ ಪಾತ್ ಜನರಿಗೆ ಮತ್ತು ವಿಶ್ವಕರ್ಮದ ಯೋಜನೆಯ‌ವರನ್ನ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ-https://suddilive.in/archives/6425

Related Articles

Leave a Reply

Your email address will not be published. Required fields are marked *

Back to top button