ರಾಷ್ಟ್ರೀಯ ಸುದ್ದಿಗಳು

ಕೆಎಫ್ ಡಿ ಎರಡನೇ ಪ್ರಕರಣ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಕೆಎಫ್ ಡಿ ಪ್ರಕರಣವೊಂದು ಪತ್ತೆಯಾಗಿದೆ. 6 ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಾಗಿದ್ದ ಯುವತಿಗೆ ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್ ಡಿ ಪಾಸಿಟಿವ್ ಪತ್ತೆಯಾಗಿದೆ.

ಜ.1 ರಂದು ಹೊಸನಗರ ತಾಲೂಕಿನಲ್ಲಿ 19 ವರ್ಷದ ಯುವತಿ ಮನೆಯಲ್ಲೇ ಸುಸ್ಥಾಗಿ ಮಲಗಿದ್ದವರನ್ನ ಕಂಡ ಆಶಾ ಕಾರ್ಯಕರ್ತೆಯರು ಮೆಗ್ಗಾನ್ ಗೆ ದಾಖಲಾಗುವಂತೆ ಸೂಚಿಸಿದ್ದರು. ಆಶಾ ಕಾರ್ಯಕರ್ತೆಯ ಸೂಚನೆಗೆ ಮೇರೆಗೆ ಯುವತಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.

ಜ.1 ರಂದು ಮೆಗ್ಗಾನ್ ಗೆ ದಾಖಲಾದ ವೇಳೆ ಕೆಎಫ್ ಡಿ ನೆಗೆಟಿವ್ ಬಂದಿತ್ತು. ಎರಡು ದಿನ ಬಿಟ್ಟು ಮತ್ತೆ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್ ಡಿ ಪತ್ತೆಯಾಗಿದೆ. ನಿನ್ನೆ ಡಿಹೆಚ್ ಒ  ಅವರ ಮಾರ್ಗದರ್ಶನದಲ್ಲಿ ಮಣಿಪಾಲ್ ಗೆ ಸೇರಿಸಲಾಗಿದೆ. ಮೆದುಳು ಜ್ವರ ಎಂದು ಬಂದಿದ್ದ ಯುವತಿಗೆ ಕೆಎಫ್ ಡಿ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಮೊದಲನೆಯದು ತೀರ್ಥಹಳ್ಳಿ ತಾಲೂಕಿನವರಿಗೆ ಕೆಎಫ್ ಡಿ ಪತ್ತೆಯಾಗಿತ್ತು. ಈಗ ಎರಡನೇ ಪ್ರಕರಣ ಹೊಸನಗರದಲ್ಲಿ ಪತ್ತೆಯಾಗಿದೆ. ತುಂಬ ಅಸ್ವಸ್ಥರಾಗಿದ್ದ ಯುವತಿ ಮಣಿಪಾಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

24 ಗಂಟೆಯಲ್ಲಿ ಜ್ವರ ಕಡಿಮೆಯಾಗದಿದ್ದರೆ ಹತ್ತಿರದ ಅಂಗನವಾಡಿ, ಅಥವಾ ಆರೋಗ್ಯ ಕೇಂದ್ರ, ಅಥವಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುವಂತೆ ಡಿಹೆಚ್ ಒ ಡಾ.ರಾಜೇಶ್ ಸುರಗೀಹಳ್ಳಿ ಸುದ್ದಿಲೈವ್ ಗೆ ಸೂಚಿಸಿದ್ದಾರೆ.

ಇದನ್ನೂ ಓದಿ-https://suddilive.in/archives/6311

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373