ರಾಷ್ಟ್ರೀಯ ಸುದ್ದಿಗಳು

ಗಮನ ಸೆಳೆದ ಬಿಜೆಪಿಯ ಸೋಷಿಯಲ್ ಮೀಡಿಯ ಪೋಸ್ಟರ್ ಗಳು

ಸುದ್ದಿಲೈವ್/ಶಿವಮೊಗ್ಗ

ಸೆಮಿಫೈನಲ್ ಎಂದೇ ಬಿಂಬಿಸಲ್ಪಡುವ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಎಕ್ಸಿಟ್ ಪೋಲ್ ಗಳನ್ನ ಮೀರಿಸಿ ಬಿಜೆಪಿ ಗೆದ್ದುಬೀಗಿದೆ. 6 ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲವು ಅಸಾಧ್ಯ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಲೆಕ್ಕಾಚಾರವನ್ನೇ ಫಲಿತಾಂಶ ಬುಡಮೇಲು ಮಾಡಿದೆ. ಸೋಷಿಯಲ್ ಮೀಡಿಯಾ ಟ್ವಿಟರ್ ನಲ್ಲಿ ಬಿಜೆಪಿ ಪರ ಹರಿ ಬಿಟ್ಟಿರುವ ಪೋಸ್ಟ್ ಗಳು ಚರ್ಚೆಗೆ ಗಮನಸೆಳೆದಿದೆ

ಮಧ್ಯಪ್ರದೇಶದಲ್ಲಿ ಕಳೆದ ಬಾರಿ 109 ಸ್ಥಾನ ಪಡೆದ ಬಿಜೆಪಿ ಕಮಲ್ ನಾಥ್ ರವರ ಕಾಂಗ್ರೆಸ್  ಸರ್ಕಾರವನ್ನ ಕೆಡವಿ ಅಧಿಕಾರಕ್ಕೆ ಬಂದಿತ್ತು. 18 ವರ್ಷದ ನಂತರವೂ ಬಿಜೆಪಿಯ ಸುಧೀರ್ಘ ಸರ್ಕಾರದ ನಂತರವೂ ಅಭೂತ ಪೂರ್ವ ಗೆಲವು ಸಾಧಿಸಿರುವುದು ಇಡೀ ದೇಶವನ್ನೇ ಅಚ್ಚರಿ ಮೂಡಿಸಿದೆ.

ಅನೇಕರು ಹಲವು ರೀತಿ ವಿಶ್ಲೇಷಿಸಿದ್ದಾರೆ. ನಮ್ಮ ವಿಶ್ಲೇಷಣೆಯನ್ನ ಹೀಗೆ ಮಾಡಿದ್ದೇವೆ.  ಕರ್ನಾಟಕದಲ್ಲಿ ವಯಸ್ಸಾದ ಕಾರಣ ಕೈಬಿಡಲಾಗಿದ್ದ ನಾಯಕರನ್ನ ಮಧ್ಯಪ್ರದೇಶದಲ್ಲಿ ಬಿಜೆಪಿ ಹಿಡಿದಿಟ್ಟುಕೊಂಡಿರುವುದು ಕಾಂಗ್ರೆಸ್ ನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಜಾತಿ ವೋಟ್ ಗಳು ಕಾಂಗ್ರೆಸ್ ಗೆ ಕೈಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.

ಲಾಡ್ಲಿ ಬೆಹನಾ ಯೋಜನೆ, ಮಾಮಾನ ಮೇಲೆ ಮಹಿಳೆಯರ ಮತ್ತು ಆದಿವಾಸಿಗಳ ಪ್ರೀತಿ ಬಿಜೆಪಿಗೆ ಬಹುದೊಡ್ಡ ಗೆಲವಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ರಾಜಸ್ಥಾನದಲ್ಲಿ ಹಿಂದುತ್ವ ಬಿಜೆಪಿಗೆ ಮತ್ತೊಮ್ಮೆ ಗೆಲುವಿಗೆ ಸಾಧ್ಯವಾಗಿದೆ.  ಭ್ರಷ್ಠಾಚಾರದ ಆರೋಪ ಕಾಂಗ್ರೆಸ್ ನ ಸೋಲಿಗೆ ಕಾರಣ ಎಂದು ವಿಶಲೇಷಿಸಲಾಗಿದೆ.

ಕಳೆದ ಬಾರಿ ಬಿಜೆಪಿ 73 ಸ್ಥಾನ ಪಡೆದಿತ್ತು. ಈ ಬಾರಿ ಬಿಜೆಪಿ 115 ಸ್ಥಾನ ಪಡೆದಿದೆ. ರಾಜಸ್ಥಾನದಲ್ಲಿ ಕಾವಡಿ ಮತ್ತು ರಾಮನವಮಿ ಆಚರಣೆಗೆ ಕಾಂಗ್ರೆಸ್ ಬ್ರೇಕ್ ಹಾಕಲು ಮುಂದಾಗಿರುವುದು ಬಿಜೆಪಿಗೆ ಬಲವಾದ ಅಸ್ತ್ರ ತಂದುಕೊಟ್ಟಿದೆ. ತೆಲಂಗಾಣದಲ್ಲಿ ಬಿಆರ್ ಎಸ್ ಸರ್ಕಾರದ ವಿರುದ್ಧ ಭ್ರಷ್ಠಾಚಾರದ ಆರೋಪವನ್ನ‌ ಕಾಂಗ್ರೆಸ್ ಯಶಸ್ವಿಯಾಗಿ ಪ್ರಚಾರಪಡಿಸಿರುವುದು ಅದರ ಗೆಲವಿಗೆ  ತಂದುಕೊಟ್ಟಿದೆ. ಛತ್ತೀಸ್ ಘಡ್ ನಲ್ಲಿ ಬಿಜೆಪಿ ವಿಶ್ಲೇಕರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಸರಳ ಬಹುಮತ ಗಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದ ಪೋಸ್ಟರ್ ಗಳು

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಯ ಗೆಲವನ್ನ‌ ಆಯ ಪಕ್ಷದ ಕೆಲ ನಾಯಕರು ಹರಿಬಿಟ್ಟಿರುವುದು ಗಮನ ಸೆಳೆದಿದೆ. ಚಕ್ರವರ್ತಿ ಸೂಲಿಬೆಲಿಯವರ ರಾಜಸ್ಥಾನದಲ್ಲಿ ಅನ್ಯಕೋಮಿನಿಂದ ಹತ್ಯೆಗೊಳಗಾದ ಕನಯ್ಯ ಲಾಲ್ ಅವರು ಟೈಲರಿಂಗ್ ಮಿಷನ್ ಮುಂದೆ ಕುಳಿತ ಪೋಸ್ಟ್ ಗಮನ ಸೆಳೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ  ವಿಜೇಂದ್ರರವರು‌ ಮಧ್ಯಪ್ರದೇಶದಲ್ಲಿ ಬಿನೆಪಿಗೆ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿನ ಗೆಲುವು ರಾಜಗೆರೆ, ಛತ್ತೀಸ್ ಘಡ್ ದಲ್ಲಿ ವಿರೋಚಿತಗೆಲವು ತಂದುಕೊಟ್ಟಿದೆ.  2024 ರಲ್ಲಿ‌ ಮತದಾರ ಬಿಜೆಪಿ ಪರ ಅದ್ಭುತ ಮುನ್ನುಡಿ‌ಬರೆದಿದ್ದಾನೆ ಎಂದು ಬಣ್ಣಿಸಿದ್ದಾರೆ.

ಈಶ್ವರ್ ಸಾಹು ಅವರ ಪೋಸ್ಟರ್

ಮೂರು ರಾಜ್ಯದಲ್ಲಿ ಬಿಜೆಪಿ ಅರಳಿದ ಕಾರಣ ಮಹಿಳೆಯೋರ್ವಳು ಕಮಲದ ರಂಗೋಲಿ ಬಿಡಿಸುತ್ತಿರುವುದು ಗಮನ ಸೆಳೆದಿದೆ. ಬಿಎಲ್ ಸಂತೋಷ್ ರವರು ರಾಜಸ್ಥಾನದಲ್ಲಿ ಸಜಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಾಹು ಗೆದ್ದಿರುವುದನ್ನ ಬಣ್ಣಿಸಿರುವುದು ಗಮನ ಸೆಳೆದಿದೆ.

ಕಾಂಗ್ರೆಸ್ ಬೆಂಬಲಿತ ದಾಳಿಯಲ್ಲಿ ಸಾಹು ಮಗನನ್ನ ಕಳೆದುಕೊಂಡಿದ್ದರು. ಇಂದು ಗೆದ್ದು ಮಗನ ಸಾವಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆ ಸಾಹು ತನ್ನ‌ಮಗನ ಫೊಟೊ ಹಿಡಿದುಕೊಂಡು ಹೋಗುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಕಮ್ನರೆಡ್ಡಿಯಲ್ಲಿ ಕೆಸಿಆರ್ ವಿರುದ್ಧ ಸ್ಪರ್ಧಿಸಿದ್ದ ವೆಂಕಟರಮಣ ರೆಡ್ಡಿಯ ಫೋಟೊ ಸಹ ಇಂದು ಬಿಜೆಪಿಯವತಿಯಿಂದ ಹರಿಬಿಟ್ಟಿರುವುದು ಗಮನ ಸೆಳೆದಿದೆ. ಕೆಲವರು ಸೋತ ಪಕ್ಷಗಳು ಇವಿಎಂ ಕಾರಣ ಹೇಳ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ ಎಂಬ ಪೋಸ್ಟ್ ಸಹ ಗಮನ ಸೆಳೆದಿದೆ.‌

ಇದನ್ನೂ ಓದಿ-https://suddilive.in/archives/4212

Related Articles

Leave a Reply

Your email address will not be published. Required fields are marked *

Back to top button