ರಾಷ್ಟ್ರೀಯ ಸುದ್ದಿಗಳು

ಪರಿಸರ ರಕ್ಷಣಾ ದಿನಾಚರಣೆ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಾಗಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಔಷಧ ವನದಲ್ಲಿ “ಪರಿಸರ ರಕ್ಷಣಾ ದಿನ”ವನ್ನು ಆಚರಿಸಲಾಯಿತು. ಈ ಕಾರ್ಯವದ ಅಧ್ಯಕ್ಷತೆ ಯನ್ನು ಡಾ. ಎಂ.ಎಸ್.ದೊಡ್ಡಮನಿಯವರು ವಹಿಸಿದರು.

‘ಬಕುಲ’ವೆಂಬ ಗಿಡವನ್ನು ನೆಡುವ ಮುಖಾoತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೆಯೇ ಇಂದಿನ ಪರಿಸರ ರಕ್ಷಣೆ ಯಲ್ಲಿ ನಮ್ಮ ಪಾತ್ರಗಳೇನು ಆಯುರ್ವೇದದ ಕೊಡುಗೆಗಳೇನು ವೈವಿಧ್ಯಮಯ ಈ ಜಗತ್ತಿನಲ್ಲಿ ಗಿಡಮೂಲಿಕೆಗಳ ಮಹತ್ವವೇನು ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಪರಿಸರ ಪ್ರೇಮದೊಂದಿಗೆ ಆಯುರ್ವೇದದ ಗಿಡಮೂಲಿಕೆಗಳನ್ನು ಸಂರಕ್ಷಿಸಿ ಅವುಗಳ ಸಂರಕ್ಷಣೆ ಮತ್ತು ಬಳಕೆಗಳ ಬಗ್ಗೆ ಮುಂಬರುವ ಪೀಳಿಗೆಗೆ ನೀವು ಮಾರ್ಗದರ್ಶಕರಾಗಬೇಕೆಂದರು.

ಇಂತಹ ಕಾರ್ಯಕ್ರಮಗಳನ್ನು ನೀವುಗಳು ಮುಂದುವರಿಸಿಕೊಂಡು ಹೋಗಬೇಕೆಂದು ಮತ್ತು ವೈದ್ಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಾರoಪರಿಕ ವೈದ್ಯರು ಮತ್ತು ಪರಿಸರ ಪ್ರೇಮಿ ಮೈಕಲ್ ಕೆನಿತ್ ಶಿವಮೊಗ್ಗ ಇವರು ಭಾಗವಹಿಸಿದ್ದು ಅವರು ಪರಿಸರ ರಕ್ಷಣೆಯಲ್ಲಿ ಯುವಕರ ಪಾತ್ರ ಹಿರಿಯದ್ದಾಗಿದೆ ಇಂದು ಮಾನವ ಆಸೆಬುರುಕನಾಗಿ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.

ಇದರ ಫಲವಾಗಿ ಇಂದು ಮಾನವ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. 84 ಲಕ್ಷ ಜೀವ ರಾಶಿಗಳಿಗೆ ಇರುವುದು ಒಂದೇ ಭೂಮಿ ಮತ್ತು ಪ್ರಕೃತಿ. ಯಾವ ಜೀವಿಯಿಂದಲೂ ಭೂಮಿಯನ್ನು ಹಾಳು ಮಾಡುವುದಿಲ್ಲ ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತನ್ನ ಪ್ರತಿಷ್ಠೆಗಾಗಿ ಹಾಳು ಮಾಡುತ್ತಿದ್ದಾನೆ. ಆಯುರ್ವೇದ ಎಂದರೆ ವೇದದಲ್ಲಿ ಅಡಗಿದ ಒಂದು ವಿಜ್ಞಾನ. ಅಂತಹ ಒಂದು ಅದ್ಭುತವಾದ ಗಿಡಮೂಲಿಕೆಯ ವಿಜ್ಞಾನವನ್ನು ಪ್ರಪಂಚಕ್ಕೆ ಸಾರುವ ಗುರುತರವಾದ ಜವಾಬ್ದಾರಿಗಳು ನಮ್ಮ ಮೇಲಿದೆ ಎಂದು ನೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ.ನಾಗೇಂದ್ರ ರವರು ಮಾತನಾಡಿ ಪರಿಸರ ರಕ್ಷಣೆಯಲ್ಲಿ ಆಯುರ್ವೇದ ಪಾತ್ರ ಪ್ರಮುಖವಾಗಿದೆ. ಪ್ರಕೃತಿ ಯನ್ನು ನಂಬಿ ಅದರೊಂದಿಗೆ ಬದುಕುವ ಕಲೆಯನ್ನು ಆಯುರ್ವೇದ ಕಲಿಸುತ್ತದೆ. ಆದುದರಿಂದ ಆಯುರ್ವೇದ ವಿದ್ಯಾರ್ಥಿಗಳು ಔಷಧಿ ಸಸ್ಯಗಳ ಜ್ಞಾನ ವನ್ನು ಪಡೆದು ಮತ್ತು ಸಸ್ಯ ಸಂಪತ್ತನ್ನು ರಕ್ಷಣೆಯಲ್ಲಿ ಮುಂದಾಗಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಣೆ ಮಾಡಬೇಕು ಮುಂಬರುವ ಪೀಳಿಗೆಗೆ ಇನ್ನಷ್ಟು ಮತ್ತಷ್ಟು ಆಯುರ್ವೇದದ ಚಿಕಿತ್ಸೆ ಮತ್ತು ಬಳಕೆಯ ಮಾಹಿತಿಯನ್ನು ಒದಗಿಸಲು ಮತ್ತು ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕೆಲವು ಮಾಹಿತಿಗಳನ್ನು ನೀಡಿದರು.

ಈ ಕಾರ್ಯಕ್ರಮವನ್ನು ವೈದ್ಯಕೀಯ ವಿದ್ಯಾರ್ಥಿನಿಯಾದ ತನ್ಮಯಿ ನಡೆಸಿಕೊಟ್ಟರು. ಡಾ.ಸುಮನ್ ಪ್ರಾಧ್ಯಾಪಕರು ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್. ಡಾ.ನಂದ ಹಂಪಣ್ಣ. ಡಾ. ಮಮತ. ಮತ್ತು ವೈದ್ಯಾಧಿಕಾರಿಗಳಾದ ಡಾ.ಕುಮಾರ್ ಸಾಗರ್. ಡಾ.ಸತೀಶ್ ರವರು. ಅಬ್ದುಲ್ ರಜಾಕ್ ರವರು (ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರು) ಮತ್ತು ಕಾಲೇಜಿನ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/3743

Related Articles

Leave a Reply

Your email address will not be published. Required fields are marked *

Back to top button