ಬಿಜೆಪಿಯ ಯುವಮೋರ್ಚಾದಿಂದ ಅಣಕು ಪ್ರದರ್ಶನ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರ ಮುಂಬರುವ ಪಂಚರಾಜ್ಯಗಳ ಚುನಾವಣೆಗಾಗಿ ಹಣ ರವಾನಿಸುವ ಎಟಿಎಂ ಆಗಿದೆ ಎಂದು ಆರೋಪಿಸಿ ಇಂದು ಬಿಜೆಪಿ ಯುವಮೋರ್ಚಾ ಗೋಪಿ ವೃತ್ತದಲ್ಲಿ ಅಣಕು ಪ್ರದರ್ಶನ ನಡೆಸಿತು.
ರಾಜಸ್ಥಾನ್ ಮಿಜೋರಾಮ್ ಸೇರಿದಂತೆ ಐದು ರಾಜ್ಯಗಳ ವಿಧಾನ ಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರಎಟಿಎಂ ಆಗಿ ಪರಿವರ್ತನೆ ಗೊಂಡಿದೆ.ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಲಂಚವನ್ನ ಸಂಗ್ರಹಿಸಿ ಕಾಂಗ್ರೆಸ್ ಹೈಕಮ್ಯಾಂಡ್ ಗೆ ಕೋಟಿಗಟ್ಟಲೆ ಹಣ ರವಾನಿಸುತ್ತಿದ್ದಾರೆ ಎಂದು ಸಂಘಟನೆ ಅರೋಪಿಸಿದೆ.
ಈ ವೇಳೆ ರಾಹುಲ್ ಗಾಂಧಿ ಮತ್ತು ಎಐಸಿಸಿಯ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲ ಕರ್ನಾಟಕಕ್ಕೆ ಬಂದು ಎಟಿಎಂನಲ್ಲಿ ಚೀಲಗಟ್ಟಲೆ ಹಣ ತುಂಬಿಸಿಕೊಳ್ಳುವ ದೃಶ್ಯದ ಅಣಕು ಪ್ರದರ್ಶನ ನಡೆಯಲಾಯಿತು.
ಬಿಜೆಪಿಯ ಜಿಲ್ಲಾಧ್ಯಕ್ಷ ಮೇಘರಾಜ್ ಮಾತನಾಡಿ, ಸರ್ಕಾರ ಘೋಷಿಸಿದ ಭಾಗ್ಯಗಳನ್ನಏ ಈಡೇರಿಸಲಾಗುತ್ತಿಲ್ಲ. ಶೇ.30 ರಷ್ಟು ಮಾತ್ರ ಮಹಿಳೆಯರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮೀ ಜಾರಿಯಾಗಿದೆ. ಉಳಿದ 70% ಹಣ ನೀಡಲಾಗುತ್ತಿಲ್ಲ. ಶಕ್ತಿಯೋಜನೆಯಿಂದ ಕೆಎಸ್ ಆರ್ ಟಿಸಿಯನ್ನ ದಿವಾಳಿ ಮಾಡಲಾಗುತ್ತಿದೆ. ಎಲ್ಲಾ ವಿಭಾಗದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ.
ಏಜೆಂಟರ ಮನೆಗಳಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ ವರ್ಗಾವಣೆಯಲ್ಲಿ ಹಣ ದೋಚಲಾಗುತ್ತಿದೆ. ಹಳೆ ಸರ್ಕಾರದ ಯೋಜನೆಗಳು ಸಂಪೂರ್ಣ ನೆಲಕಚ್ಚಿದೆ. ಆಡಳಿತದ ಮೇಲೆ ಹಿಡಿತವಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ವ್ಯತ್ಯಾಸವಿದೆ. ಇದನ್ನ ಖಂಡಿಸಿ ಬಿಜೆಪಿ ಯುವಮೋರ್ಚಾ ಅಣಕು ಪ್ರದರ್ಶನ ನಡೆಸಲಾಗುತ್ತಿದೆ ಎಂದರು.
ಇದು ಕೇವಲ ಮನರಂಜನೆಯಾಗಿಲ್ಲ. ಶ್ರೀಸಾಮಾನ್ಯನ ಮನಸ್ಸಿಗೆ ಮುಟ್ಟಿಸಲಾಗುತ್ತಿದೆ. ಜಿಲ್ಲಾ ಮಟ್ಟದಿಂದ ಮಂಡಲದ ವರೆಗೆ ಈ ಅಣಕು ಪ್ರದರ್ಶನ ನಡೆಸಲು ಯೋಜಿಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಅಂಕುಶ್, ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/1900
