ಸ್ಥಳೀಯ ಸುದ್ದಿಗಳು

ಸಿಇಒ ಬಂಧನಕ್ಕೆ ಆದೇಶ

ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರಕರಣಕ್ಕೆ ಸಂಬಂಸಿ ಜಿಲ್ಲಾ ಪಂಚಾಯತ್ ಸಿಇಒ ಅವರನ್ನೇ ಬಂಧಿಸಿ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯ ಆದೇಶ ಹೊರಡಿಸಿರುವುದು ತಡವಾಗಿ ಬಹಿರಂಗವಾಗಿದೆ.

ಫೆಬ್ರವರಿ 16 ರಂದು ಜಿಪಂ ಸಿಇಒ ನ್ಯಾಯಾಲಯದ ಮುಂದೆ ಹಾಜರಾಗಿ ವರದಿಯನ್ನು ತಪ್ಪದೇ ಸಲ್ಲಿಸಬೇಕು. ಹಾಜರಾಗಲು 25,000 ರೂ. ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಹಾಗೂ ವಾರಂಟ್ ಹಿಂದಿರುಗಿಸಬಹುದು ಎಂದು ಆದೇಶದಲ್ಲಿ ಶಿವಮೊಗ್ಗ ಪೊಲೀಸರಿಗೆ ನಿರ್ದೇಶಿಸಲಾಗಿದೆ.

ಏನಿದು ಮಣ್ಣು ಪ್ರಕರಣ…?

ತಾಲೂಕಿನ ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಿಂದ 500 ಲೋಡು ಮಣ್ಣು ತೆಗೆಯಲು ಅನುಮತಿ ಪಡೆಯಲಾಗಿತ್ತು. ಆದರೆ ಕಾನೂನು ಬಾಹಿರವಾಗಿ 15,004 ಲೋಡ್ ಮಣ್ಣು ತೆಗೆದು ಅಕ್ರಮವಾಗಿ ಸಾಗಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟ ಉಂಟು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ದಿನಪತ್ರಿಕೆ ಒಂದರಲ್ಲಿ ವರದಿ ಪ್ರಕಟವಾಗಿತ್ತು. ದಿನಪತ್ರಿಕೆ ವರದಿ ಆ‘ರಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ‘ ನ್ಯಾಯಾಲಯದ ನ್ಯಾಯಿಕ ಸದಸ್ಯರು ಕರ್ನಾಟಕ ಭೂ ಕಬಳಿಕೆ ನಿಷೇಧ ಅನಿಯಮ 2011ರ ಕಲಂ 09ರ ಅಡಿ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ಕೈಗೊಳ್ಳಬಹುದಾಗಿದೆ ಎಂದು 2023ರ ಆಗಸ್ಟ್‌ 19 ರಂದು ವಿಷಯ ಮಂಡಿಸಿದ್ದರು.

ನಂತರ ಅಕ್ಟೋಬರ್ 09 ರಂದು ನ್ಯಾಯಾಲಯ ಆದೇಶ ಹೊರಡಿಸಿ, ನವೆಂಬರ್ 24 ರಂದು ವಿವರವಾದ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯಕ್ಕೆ ಸಿಇಒ ಹಾಜರಾಗದ ಹಿನ್ನೆಲೆಯಲ್ಲಿ ಬಂಧನದ ಆದೇಶ ಹೊರಬಿದ್ದಿದೆ.

ಸಿಇಒ ಸ್ಪಷ್ಟನೆ

ಕರ್ನಾಟಕ ಭೂ ಕಬಳಿಕೆ ನಿಷೇ‘ ನ್ಯಾಯಾಲಯದ ಆದೇಶ ಗಮನಕ್ಕೆ ಬಂದಿದೆ. ಈಗಾಗಲೇ 71.45 ಲಕ್ಷ ರೂ. ನಷ್ಟದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂ‘ ನಿಗದಿತ ದಿನದಂದು ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು. ಎಂದು ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಸಿಇಒ, ಜಿಲ್ಲಾ ಪಂಚಾಯತ್

ಇದನ್ನೂ ಓದಿ-https://suddilive.in/archives/6305

Related Articles

Leave a Reply

Your email address will not be published. Required fields are marked *

Back to top button