ರಾಷ್ಟ್ರೀಯ ಸುದ್ದಿಗಳುಸ್ಥಳೀಯ ಸುದ್ದಿಗಳು

ಶ್ರೀರಾಮನಿಗಾಗಿ ಬಗಡಲಬಂಡೆಯಿಂದ ಬಂತು ಗದ್ದಿಗೆ ಕಂಬಳಿ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯದಲ್ಲಿನ ರಾಮಮಂದಿರ ಲೋಕಾರ್ಪಣೆಗೆ ಇಡೀ ವಿಶ್ವವೇ ಸಜ್ಜಾಗಿದೆ. ವಿಶ್ವಾದಾದ್ಯಂತ ಅಯೋಧ್ಯದ ರಾಮಮಂದಿರಕ್ಕೆ ಉಡುಗರೆಯ ಮಹಾಪೂರವೇ ಹರದು ಬರುತ್ತಿದೆ. ಅದರಂತೆಯೇ ಚಿತ್ರದುರ್ಗದ ಚಳ್ಳಕೆರೆ ಗ್ರಾಮದ ಬಡಗಲಬಂಡೆಯಿಂದ ವಿಶೇಷ ಉಡುಗರೆ ಅಯೋಧ್ಯಗೆ ತೆರಳಲು ಶಿವಮೊಗ್ಗಕ್ಕೆ ಬಂದಿದೆ.

ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ  ಕರಿ ಕಂಬಳಿ ಕಳಿಸಲು  ಚಳ್ಳಕೆರೆ ಗ್ರಾಮಸ್ಥರು ಮುಂದಾಗಿದ್ದಾರೆ.‌ ಚಿತ್ರದುರ್ಗಕ್ಕೂ ಶಿವಮೊಗ್ಗಕ್ಕೂ ಹಾಗೂ ಅಯೋಧ್ಯೆಗೂ ಎತ್ತಣ ಎತ್ತಣ ಸಂಬಂಧ ಎಂದು ಓದುಗರು ವಿಚಾರಿಸುತ್ತಿರಬಹುದು.

ಆದರೆ ಗ್ರಾಮದ ಹಾಲುಮತಸ್ಥರು ಮಾಜಿ ಡಿಸಿಎಂ ಈಶ್ವರಪ್ಪ ನವರ ಮೂಲಕ ಅಯೋಧ್ಯೆಗೆ ಕರಿ ಕಂಬಳಿ ಕಳಿಸಲು ಶಿವಮೊಗ್ಗಕ್ಕೆ ಬಂದಿದ್ದಾರೆ. ಶ್ರೀರಾಮನಿಗೆ ಕೈಯಿಂದ ನೈದಿರುವ ಕರಿ ಕಂಬಳಿಯನ್ನ  ಚಳ್ಳಕೆರೆಯ ಬಗಡಲಬಂಡೆಯಿಂದ ಶಿವಮೊಗ್ಗಕ್ಕೆ ಹಿಡಿದು ತಂದಿದ್ದಾರೆ.

ರಾಮ ಮಂದಿರದ ಗದ್ದಿಗೆಯ ಮೇಲೆ ಇಡಲು  ಬಗಡಲಬಂಡೆ ಗ್ರಾಮಸ್ಥರು ಕಳುಹಿಸಿಕೊಡುತ್ತಿದ್ದಾರೆ. ನಲವತ್ತು ಮನೆಗಳಿಂದ ಕುರಿ ಉಣ್ಣೆ ಸಂಗ್ರಹಿಸಿ  ಕರಿ ಕಂಬಳಿ ತಯಾರಿಸಿ ಶ್ರೀರಾಮನಿಗೆ ಕಳುಹಿಸಲಾಗುತ್ತಿದೆ. ಹೀಗೆ ಇಡೀ ದೇಶವೇ ಅಯೋಧ್ಯ ರಾಮ ಮಂದಿರಕ್ಕೆ ಸಡಗರ, ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ.

ಜ.22 ರಂದು ಲೋಕಾರ್ಪಣೆಯಾಗುತ್ತಿರುವ ರಾಂಮಂದಿರಕ್ಕೆ ಜನ ತಾ ಮುಂದು ನಾ ಮುಂದು ಎಂದು ಉಡುಗರೆಯನ್ನ ನೀಡಲು ಮುಂದಾಗಿದ್ದಾರೆ.

ಇದನ್ನು ಓದಿ-https://suddilive.in/archives/6955

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373