ಸ್ಥಳೀಯ ಸುದ್ದಿಗಳು

ನಾಲ್ಕು ಹಂತದಲ್ಲಿ ನಾಲೆಗೆ ನೀರುಬಿಡುಗೆ, ಬಲ ನಾಲೆಗೆ ನೀರುಹರಿಸುವ ದಿನಾಂಕ ಫಿಕ್ಸ್ ಆಗಿಲ್ಲ-ಹೊರಗಡೆ ರೈತರ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಭದ್ರ ಜಲಾಶಯದಿಂದ ಎಡ ಮತ್ತು ನಾಲೆಗಳಿಗೆ ನೀರು ಬಿಡುಗಡೆಗೆ ಕಾಡಾ‌ ಸಭೆ ನಿರ್ಧರಿಸಿದ್ದು ಜನವರಿ 10 ನಂತರ ನೀರು ಬಿಡುಗಡೆ ಸಭೆ ನಿರ್ಣಯಿಸಿದೆ.

ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ನಡೆದ ಕಾಡಾ ಸಭೆಯಲ್ಲಿ ಶಾಸಕ ಚೆನ್ನಬಸಪ್ಪ, ಸಂಗಮೇಶ್ವರ್, ಹೊನ್ನಾಳಿ ಶಾಸಕ ಶಾಂತನಗೌಡ, ರೈತ ಮುಖಂಡ ಕೆಟಿ ಗಂಗಾಧರ್ ಭಾಗಿಯಾಗಿದ್ದರು‌. ಭದ್ರಜಲಾಶಯದಲ್ಲಿ ಈಗಾಗಲೇ 34.5 ಟಿಎಂಸಿ ನೀರಿದ್ದು ಇದರಲ್ಲಿ ಕುಡಿಯುವ ನೀರಿಗೆ 7 ಟಿಎಂಸಿ ನೀರು ಮೀಸಲಿಡಬೇಕಿದೆ.

13 ಟಿಎಂಸಿ ನೀರು ಡೆಡ್ ಸ್ಟೋರೇಜ್ ಗೆ ಮೀಡಲಿದ್ದು ಉಳಿದ 14.5 ಟಿಎಂಸಿ ಮಾತ್ರ ಅಡಿಕೆ ಬೆಳೆಗೆ ಮತ್ತು ಕೃಷಿಗೆ ಬಳಕೆಯಾಗಲಿದೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಚಿವರು, 14.5 ಟಿಎಂಸಿ ನೀರಿನಲ್ಲಿ ಎಡ ನಾಲೆಗೆ ಜನವರಿ 10 ರಿಂದ ಬಿಡುಗಡೆಯಾಗಲುದ್ದು, ಬಲದಂಡೆ ನಾಲೆಗೆ ದಿನಾಂಕ ಫಿಕ್ಸ್ ಮಾಡಲು ನನ್ನ ವಿವೇಚನೆಗೆ ಬಿಡಲಾಗಿದೆ ಎಂದರು.

14.5 ಟಿಎಂಸಿ ನೀರನ್ನ ಮೇ ತಿಂಗಳ ಕೊನೆಯವರೆಗೂ ನಾಲ್ಕು ಹಂತದಲ್ಲಿ ನೀರು ಬಿಡುಗಡೆ ಮಾಡಬೇಕಿದೆ. ಬಲದಂಡೆಗ ಮತ್ತು ಎಡ ನಾಲೆಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲೇ ಬಿಡಬೇಕಿದೆ. 10 ದಿನ 14 ದಿನ ನೀರು ಹರಿಸುವ ಮೂಲಕ ನಿರ್ವಹಣೆ ಮಾಡಬೇಕಿದೆ ಎಂದರು.

ಒಳಗೆ ಕಾಡಾ ಸಭೆ ನಡೆಯುತ್ತಿದ್ದರೆ ಹೊರಗಡೆ ಶಿವಮೊಗ್ಗ ಜಿಲ್ಲಾ ರೈತರು ಆದಷ್ಟು‌ಬೇಗ ನಾಲೆಗಳಿಗೆ ನೀರು ಬಿಟ್ಟು ರೈತರ ಸಮಸ್ಯ ಬಗೆಹರಿಸಬೇಕೆಂದು ರಸ್ತೆ ತಡೆಗೂ ಮುಂದಾಹಿದ್ದ ದೃಶ್ಯಗಳು ಲಭ್ಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button