ಸ್ಥಳೀಯ ಸುದ್ದಿಗಳು

ಕಾಡಾ ಸಭೆಗೆ ಮಾಧ್ಯಮಗಳಿಗೆ ಇಲ್ಲ ಪ್ರವೇಶ

ಸುದ್ದಿಲೈವ್/ಶಿವಮೊಗ್ಗ

ಭದ್ರ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರದಲ್ಲಿ ಅಧಿಕಾರಿಗಳ ಜೊತೆ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಗೆ ಮಾಧ್ಯಮಗಳನ್ನ ಹೊರಗಿಟ್ಟು ಸಭೆ ನಡೆಸಲಾಗಿದೆ. ಕಾಡಾದಲ್ಲಿ ಇಂದು ಭದ್ರ ಜಲಾಶಯದಿಂದ ನೀರು ಬಿಡುವ ಬಗ್ಗೆ ಸಭೆ ನಡೆಯಬೇಕಿತ್ತು. ಸಭೆಗೆ ಪತ್ರಕರ್ತರನ್ನ ಹೊರಗಿಡಲಾಗಿದೆ.

ಮೆಗ್ಗಾನ್ ನಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಹಾಗೂ ಇಂದು ನಡೆಯುತ್ತಿರುವ ಕಾಡಾ ಸಭೆಯಲ್ಲಿ  ಪತ್ರಕರ್ತರನ್ನ ಹೊರಗಿಟ್ಟು ಸಭೆ ನಡೆಸಲಾಗುತ್ತಿದೆ. ಮಾಧ್ಯಮಗಳು ಏನೇನೋ ಸುದ್ದಿ ಮಾಡ್ತಾವೆ ಬೆಂಕಿ ಹತ್ತುವುದಾದರೆ ಮಾಧ್ಯಗಳು ಇವರ ಸುದ್ದಿಗಳನ್ನ ಹಾಕುವುದಕ್ಕೆ ಇಲ್ಲ ಎಂದು ನೆನಪಿಸಬೇಕಿದೆ.

ಸಭೆ ನಡೆಯುವ ಮುನ್ನಾ ಸಚಿವ ಮಧು ಬಂಗಾರಪ್ಪನವರಿಗೆ ಮಾಧ್ಯಮಗಳು ಒಳಗೆ ಬಿಡಿ ಎಂದು ಕೋರಲಾಗಿತ್ತು. ನೀರು ಬಿಡುವ ವಿಷಯದಲ್ಲಿ ಬೇರೆ ರೀತಿಯಾಗುತ್ತೆ ಎಂಬ ಸಬೂಬು ಹೇಳಿ ಹೊರಗಡೆ ಇರಲು ಸೂಚಿಸಿದರು. ಈ ಮೊದಲು ಕಾಡಾ ಸಭೆ ನಡೆದಿದ್ದಾಗ ಮೀಡಿಯಾಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿ ಪತ್ರಕರ್ತರನ್ನ ತಡೆಯಲಾಗಿದೆ.

ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಪತ್ರಿಕೆಯವರು ಬರಲಿ, ಗೊಂದಲ ಮೂಡಿದಾಗ ಪತ್ರಕರ್ತರನ್ನ ಅದುಮಿಡುವ ಕೆಲಸ ಎಲ್ಲಾ ಪಕ್ಷದವರು ಇದ್ದಾಗಲೂ ನಡೆದುಕೊಂಡು ಬಂದಿದೆ. ಪತ್ರಕರ್ತರನ್ನ ತಡೆಗಟ್ಟುವ ಮೂಲಕ ಸಮಸ್ಯೆಯನ್ನ ತಿಳಿಗೊಳ್ಳಲಿದೆ ಎಂಬ ಭ್ರಮೆಯಲ್ಲಿದ್ದವರು ಸ್ವಲ್ಪ ಎಚ್ಚೆತ್ತುಕೊಳ್ಳೊದು ಒಳ್ಳೆಯದು. 12 ಜಿಲ್ಲೆಗಳಿಗೆ ಬೇಕಾದ ಭದ್ರ ನೀರು ಹರಿಸುವ ಬಗ್ಗೆ ರೈತರು ಏನು ಮಾಹಿತಿ ಹೊರಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆಗೆ ಪತ್ರಕರ್ತರನ್ನ ಹೊರಗಿಟ್ಟು ಸಭೆ ನಡೆಸಲಾಗಿದೆ.

ಇದನ್ನೂ ಓದಿ-https://suddilive.in/archives/6274

Related Articles

Leave a Reply

Your email address will not be published. Required fields are marked *

Back to top button