ಹಿತ್ತಾಳೆ ಕಿವಿ ಆಗದಿರಲಿ ನಮ್ಮ ಜಿಲ್ಲಾಉಸ್ತುವಾರಿ ಸಚಿವರು!

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಇನ್ ಸ್ಪೆಕ್ಟರ್ ಅಥವಾ ಪಿಎಸ್ ಐಗಳು ಬರ್ತಾ ಇಲ್ಲಾ ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೋರ್ವ ಪೊಲೀಸ್ ಪಿಎಸ್ಐಗಳನ್ನ ಎತ್ತಂಗಡಿ ಮಾಡುವ ಸಂಚು ನಡೆಯುತ್ತಿರುವುದು ತಿಳಿದು ಬಂದಿದೆ.
ಶಿರಾಳಕೊಪ್ಪದ ಪಿಎಸ್ಐ ಮಂಜುನಾಥ್ ಕುರಿಯವರನ್ನ ಎತ್ತಂಗಡಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ವರ್ಗಾವಣೆ ಕಾನೂನು ಬದ್ಧವಾಗಿದ್ದರೆ ಅದಕ್ಕೆ ತಲೆಬಾಗ ಬಹುದಿತ್ತು. ಆದರೆ ಓರ್ವ ಕಾಂಗ್ರೆಸ್ ನಾಯಕರ ಮೂಲಕ ರೌಡಿ ಶೀಟರ್ ಗಳು, ಮನೆಹಾಳರು ಅಖಾಡಕ್ಕೆ ಇಳಿದಿರುವುದು ಈ ಸುದ್ದಿಗೆ ಬಲ ತುಂಬಿದೆ.
ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ತೊಂದರೆ ಕೊಡುವ ಸಚಿವರಲ್ಲ ಎಂಬ ಮಾತುಕೇಳಿ ಬರುತ್ತಿದೆ. ಒಬ್ಬ ಅಧಿಕಾರಿಯನ್ನ ಯಾವನೋ ರೌಡಿಶೀಟರ್ ಗಳ ಹೇಳಿಕೆ ಮೂಲಕ ವರ್ಗಾವಣೆಗೆ ಒಂದು ಬಣ ನಿಲ್ಲುತ್ತೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಮಾತು ಮತ್ತೊಂದಿಲ್ಲ. ಈ ವರ್ಗಾವಣೆ ಒಂದೇ ವೇಳೆ ನಡೆದೇ ಹೋದರೆ ಕಾನೂನು ಸುವ್ಯವಸ್ಥೆ ಮತ್ತು ಇಲಾಖೆ ರೌಡಿ ಶೀಟರ್ ಕೈಬೆರಳಿನಲ್ಲಿದೆ ಎಂಬ ಸಂದೇಶ ಸ್ಪಷ್ಟಗೊಳ್ಳುತ್ತದೆ.
ಹೋಗಲಿ ಒಬ್ಬ ಅಧಿಕಾರಿಯನ್ನ ಜಿಲ್ಲಾ ಉಸ್ತುವಾರಿಗಳು ಜನಾಭಿಪ್ರಾಯವನ್ನ ಸಂಗ್ರಹಿಸಿ ವರ್ಗಾವಣೆ ಮಾಡಿದಲ್ಲಿ ಅವರ ನಿಲುವನ್ನ ಸ್ವಾಗತಿಸೋಣ, ಶಿರಾಳಕೊಪ್ಪ 10 ಗಂಟೆಯ ನಂತರ ಸ್ಥಗಿತಗೊಳ್ಳುತ್ತದೆ. ಕಾರಣ ಪಿಎಸ್ಐ ಅವರ ಖಡಕ್ ವಾರ್ನಿಂಗ್ ಗಳು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗುತ್ತದೆ.
ಮಂಜುನಾಥ್ ಕುರಿ ಪಿಎಸ್ಐ ಆಗಿ ಶಿರಾಳಕೊಪ್ಪದಲ್ಲಿ ಇದ್ದು1 ವರ್ಷ ಕಳೆದಿದೆ. ಒಂದು ವರ್ಷದಲ್ಲಿ ಠಾಣೆ ವ್ಯಾಪ್ತಿ ತಿಳಿಯುವುದೇ ಕಷ್ಟ ಅಷ್ಟರಲ್ಲಿ ಎತ್ತಂಗಡಿ ನಡೆದರೆ ಮತ್ತೊಂದು ತಪ್ಪು ಸಂದೇಶ ರವಾನೆಯಾಗುವುದರಲ್ಲಿ ಎರಡು ಮಾತಿಲ್ಲ. ಜಾನೂನು ಸುವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆದರೆ ಅಲ್ಲಿ ಅರಾಜಕತೆಯೇ ತಾಂಡವಾಡುತ್ತದೆ ವಿನಃ ಬೇರೆ ಏನೂ ಇಲ್ಲ.
ಹಾಗಂತ ಪೊಲೀಸ್ ಅವರ ಬಕೆಟ್ ವೆಬ್ ಪೋರ್ಟಲ್ ಎಂದು ಪರಿಗಣಿಸುವುದಾದರೆ ಆಯ್ಕೆ ನಿಮ್ಮದು ನಮ್ಮ ಅಭ್ಯಂತರವಿಲ್ಲ. ಆದರೆ ರೌಡಿಶೀಟರ್ ಅಥವಾ ಕಾನೂನು ಬಾಹಿರದವರ ಮಾತಿಗೆ ಸರ್ಕಾರದ ಮಣಿಯುವುದಾದರೆ ಹಿನ್ನಡೆ ಸರ್ಕಾರಕ್ಕೆ. ರಾಗಿಗುಡ್ಡದ ವಿಚಾರದಲ್ಲಿ ಓರ್ವ ಅಧಿಕಾರಿಯನ್ನ ಅಮಾನತ್ತು ಪಡಿಸಿ ಒಂದು ಸಂದೇಶ ರವಾನೆ ಆಗಿದೆ. ಮತ್ತೊಂದು ಸಙದೇಶ ರವಾನಿಸುವುದಾದರೆ ಅಭ್ಯಂತರವೇನಿಲ್ಲ.
ಇದನ್ನೂ ಓದಿ-https://suddilive.in/archives/3332
