ಬಾಂಬ್ ಬ್ಲಾಸ್ಟ್ ಮಾಡಿದವರಿಗೆ ನಿರ್ಬಂಧವಿಲ್ಲ, ಮುತಾಲಿಕ್ ಗೆ ನಿರ್ಬಂಧ, ಶೀಘ್ರದಲ್ಲಿಯೇ ಶಿವಮೊಗ್ಗ ಚಲೋ ಚಳುವಳಿ-ಶ್ರೀರಾಮ ಸೇನೆ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡಕ್ಕೆ ಹೊರಟಿದ್ದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಗೆ ತಡರಾತ್ರಿ ತಡೆದ ಪೊಲೀಸರು ರಾಗಿಗುಡ್ಡ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಈ ಪ್ರಕ್ರಿಯೆಯ ವಿರುದ್ಧ ಸಿಡಿದಿರುವ ಶ್ರೀರಾಮ ಸೇನೆ ಶೀಘ್ರದಲ್ಲಿಯೇ ಶಿವಮೊಗ್ಗ ಚಲೋ ಚಳುವಳಿ ನಡೆಸುವುದಾಗಿ ಘೋಷಿಸಿದೆ. ಇದರಿಂದ ರಾಗಿಗುಡ್ಡದ ಪ್ರಕರಣ ಮತ್ತೊಂದು ಮಗ್ಗಲು ಪಡೆದುಕೊಂಡಿದೆ.
ಮಾಸ್ತಿಕಟ್ಟೆಯಲ್ಲಿ ಪೊಲೀಸರು ರಾತ್ರಿ 2 ಗಂಟೆಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕರನ್ನು ತಡೆದಿದ್ದು ಈ ಕುರಿತು ಶಿವಮೊಗ್ಗದಲ್ಲಿ ಶ್ರೀರಾಮ ಸೇನೆಯ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಡಳಿತದ ವಿರುದ್ಧ ಗುಡುಗಿದ್ದಾರೆ.
70 ವರ್ಷ ವಯಸ್ಸಿನ ವ್ಯಕ್ತಿಯನ್ನು ರಾತ್ರಿ ವಾಪಸ್ ಕಳುಹಿಸಲಾಗಿದೆ. ಪ್ರಮೋದ್ ಮುತಾಲಿಕ್ ಏನಾದ್ರೂ ದರೋಡೆಕೋರರಾ? ರಾಜ್ಯ ಸರ್ಕಾರದ ಈ ಸವಾಲನ್ನು ಸ್ವೀಕರಿಸಿದ್ದೇವೆ.ಮುಂಬರುವ ದಿನಗಳಲ್ಲಿ ಶಿವಮೊಗ್ಗ ಮತ್ತೆ ಬಂದೇ ಬರುತ್ತೇವೆ ಎಂದು ಸವಾಕು ಎಸೆದಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡ ಏನಾದರೂ ಪಾಕಿಸ್ತಾನದಲ್ಲಿ ಇದೆಯಾ ಎಂದು ಪ್ರಶ್ನಿಸಿದ ಕುಲಕರ್ಣಿ, ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಶ್ರೀರಾಮ ಸೇನೆ ಬಿಡುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮಾಡಿದ್ದೆ ಆಟ ಎಂಬಂತಾಗಿದೆ. ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವವರಿಗೆ ನಿರ್ಬಂಧ ಇಲ್ಲ. ಕೊಲೆ ಮಾಡುವವರಿಗೆ ನಿರ್ಬಂಧ ಇಲ್ಲ. ಹಿಂದುಗಳ ಮನೆ ಮೇಲೆ ಕಲ್ಲು ತೂರುತ್ತಿರುವವರಿಗೆ ನಿರ್ಬಂಧ ಇಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿರುವವರಿಗೆ ನಿಬಂಧ ಇಲ್ಲ
ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯವರಿಗೆ ಮಾತ್ರ ನಿರ್ಬಂಧನಾ?ತಲವಾರು ತೋರಿಸ್ತೀರಾ? ಕಲ್ಲಿನ ಹೆದರಿಕೆ ತೋರಿಸ್ತೀರಾ?ನಿಮ್ಮ ತಲ್ವಾರ್ ಹಾಗೂ ಕಲ್ಲಿನ ಹೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಿಮ್ಮಲ್ಲಿ ಎಷ್ಟು ತಲವಾರ್ ಇದೆ ತೆಗೆದುಕೊಂಡು ಬನ್ನಿ ಉತ್ತರ ಕೊಡಲು ನಮಗೆ ತಾಕತ್ತಿದೆ. ಪ್ರಮೋದ್ ಮುತಾಲಿಕರನ್ನು ತಡೆದು ನಿಲ್ಲಿಸುವಂತಹ ನೀಚ ಕೆಲಸವನ್ನು ಸರ್ಕಾರ ನಿಲ್ಲಿಸಬೇಕು ಎಂದು ಗುಡುಗಿದ್ದಾರೆ.
ಮಧ್ಯರಾತ್ರಿ ಎರಡು ಗಂಟೆ ವೇಳೆ ಪ್ರಮೋದ್ ಮುತಾಲಿಕ್ ರನ್ನು ತಡೆದು ನಿಲ್ಲಿಸಲು ಆಗುತ್ತದೆ. ಪ್ರಚೋದನಕಾರಿ ಕಟೌಟ್ ಗಳನ್ನು ಹಾಕುವ ಸಂದರ್ಭದಲ್ಲಿ ನೀವೇನು ಮಲಗಿದ್ದೀರಾ? ಟಿಪ್ಪು ಸುಲ್ತಾನ್ ಔರಂಗಜೇಬನ ಕಟೌಟ್ ಹಾಕುವಾಗ ಏನು ಮಾಡುತ್ತಿದ್ದೀರಾ? ಪೊಲೀಸರೇ ನಿಮಗೆ ದಮ್ಮು ಇಲ್ಲವಾ? ತಾಕತ್ತು ಇಲ್ಲವಾ? ಕಟೌಟ್ ಹಾಕುವಾಗ ಏನು ಮಾಡಿದ್ದೀರಾ? ಎಂದು ಪೊಲೀಸರನ್ನ ಪ್ರಶ್ನಿಸಿದ್ದಾರೆ.
ಎರಡು ಮೂರು ದಿನಗಳಲ್ಲಿ ಶ್ರೀರಾಮ ಸೇನೆಯಿಂದ ಶಿವಮೊಗ್ಗ ಚಲೋ ನಡೆಯುತ್ತದೆ.ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲ್ ಎಸೆದಿದ್ದಾರೆ. ಆದರೆ ಪ್ರಮೋದ್ ಮುತಾಲಿಕ್ ಗೆ 15 ದಿನಗಳ ಕಾಲ ಶಿವಮೊಗ್ಗ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಶಿವಮೊಗ್ಗ ಚಲೋ ಹೇಗೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಸಿಎಂ ಸಿದ್ದರಾಮಯ್ಯನವರೇ ಮುಸ್ಲಿಮರ ತುಷ್ಟೀಕರಣ ಸಾಕು. ಕಾಶ್ಮೀರದಲ್ಲಿ ಏನು ನಡೆದಿದೆ ನಿಮಗೆ ಗೊತ್ತಿದೆ ಶಿವಮೊಗ್ಗದಲ್ಲಿ ಸಾಕು ನಿಲ್ಲಿಸಿ ಎಂದು ಗುಡುಗಿದ್ದಾರೆ.
ಇದನ್ನೂ ಓದಿ-https://suddilive.in/archives/1450
