ರಾಜ್ಯ ಸುದ್ದಿಗಳು

ಷಡಾಕ್ಷರಿಗೆ ತಾತ್ಕಾಲಿಕ ರಿಲೀಫ್

ಸುದ್ದಿಲೈವ್/ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿಗೆ ಕೊಂಚ ರಿಲೀಫ್ ಸಿಕ್ಕಿದೆ. ರಾಜ್ಯ ಆಡಳಿತ ನ್ಯಾಯ ಮಂಡಳಿ (KSAT) ಅವರ ಅರ್ಜಿಯನ್ನ ಮರುಪರಿಶೀಲಿಸುವಂತೆ ಸೂಚಿಸಿದೆ.  ನಾಲ್ಕು ವಾರದೊಳಗೆ ಮರು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.

ಲೆಕ್ಕಪತ್ರ ಅಧೀಕ್ಷಕ ವೃಂದದ ಸಿ.ಎಸ್.ಷಡಾಕ್ಷರಿ ಅವರನ್ನು ಶಿವಮೊಗ್ಗದ ಸ್ಥಳೀಯ ಲೆಕ್ಕಪರಿಶೋಧನೆ ವೃತ್ತದ ಜಂಟಿ ನಿರ್ದೇಶಕರ ಸ್ಥಾನದಿಂದ ಕೋಲಾರದಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯ ಲೆಕ್ಕಪತ್ರ ಅಧೀಕ್ಷಕ ಹುದ್ದೆಗೆ ವರ್ಗಾಯಿಸಲಾಗಿತ್ತು.

ಈ ಸಂಬಂಧ 2023ರ ನವೆಂಬರ್ 8ರಂದು ಸರ್ಕಾರ ಆದೇಶ ಹೊರಡಿಸಿತ್ತು. ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಸಿ.ಎಸ್.ಷಡಾಕ್ಷರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಸ್ಎಟಿಯ ನ್ಯಾಯಾಂಗ ಸದಸ್ಯ ಟಿ.ನಾರಾಯಣಸ್ವಾಮಿ ಈ ಆದೇಶ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಜಗದೀಶ್ ರವರ ದೂರಿನ ಆಧಾರದಲ್ಲಿ ವರ್ಗಾವಣೆ ಮಾಡಲಾಗಿದೆ. ಇದು ದುರುದ್ದೇಶ ಮತ್ತು ರಾಜಕೀಯ ಪ್ರೇರಿತ ದೂರು. ಅದನ್ನು ಪರಿಗಣಿಸಿ ವರ್ಗಾವಣೆ ಮಾಡಿರುವುದು ಕಾನೂನು ಬಾಹಿರ ಎಂದು ಸಿ.ಎಸ್.ಷಡಾಕ್ಷರಿ ಕಎಸ್ಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ ಸರ್ಕಾರ 2013ರಲ್ಲಿ ಹೊರಡಿಸಿರುವ ಆದೇಶ (ವರ್ಗಾವಣೆ ಮಾರ್ಗಸೂಚಿ) ಅನುಗಣವಾಗಿ ವರ್ಗಾವಣೆಯಾಗಿಲ್ಲ ಎಂದು ಉಲ್ಲೇಖಿಸಿದೆ.

ಇದು ರಾಜಕೀಯವಾಗಿ ಸಚಿವ ಮಧು ಬಂಗಾರಪ್ಪರಿಗೆ ಹಿನ್ನಡೆ ಯಾಗಿದೆ. ಕೆಲ ಅಧಿಕಾರಿಗಳನ್ನ ವರ್ಗಾವಣೆ ಮಾಡದಂತೆ ಸಿಎಂ ಸಿದ್ದರಾಮಯ್ಯರಿಗೆ ಕರೆ ಮಾಡಿದ್ದರು.‌ ಅನೇಕ ವರ್ಷದಿಂದ ಇಲ್ಲೇ ಇದ್ದವರನ್ನ ತೆಗೆಸಿದ್ದೇನೆ ಎಂದು‌ಮೊನ್ನೆ ಪತ್ರಕರ್ತರ ಜೊತೆ ಮಾತನಾಡಿದ ವೇಳೆ ಉಲ್ಲೇಖಿಸಿದ್ದರು.

ಇದನ್ನೂ ಓದಿ-https://suddilive.in/archives/6265

Related Articles

Leave a Reply

Your email address will not be published. Required fields are marked *

Back to top button