ರಾಜಕೀಯ ಸುದ್ದಿಗಳು

ಕಾಂಗ್ರೆಸ್ ವಿಲವಿಲ ಒದ್ದಾಡ್ತಾ ಇದೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶ್ರೀಕಾಂತ್ ಪೂಜಾರಿಯ ವಿರುದ್ಧ ಹಾಕಲಾಗಿರುವ 16 ಪ್ರಕರಣದಲ್ಲಿ 15 ಪ್ರಕರಣ ಕುಲಾಸೆ ಆಗಿದ್ದು ಆತನನ್ನ ಗೂಂಡಾ ಎಂದು ಕಾಂಗ್ರೆಸ್ ಬಿಂಬಿಸಲು ಹೊರಟಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ‌, ಶ್ರೀಕಾಂತ್ ಪೂಜಾರಿಯಮೇಲೆ ಒಂದು ಪ್ರಕರಣ ಬಾಕಿ ಇದೆ. ಅದರ ಬಗ್ಗೆ ಎಫ್ಐಆರ್ ಆಗಿಲ್ಲ. ಆತನನ್ನ ಉದ್ದೇಶ ಪೂರಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.

ಇನ್ ಸ್ಪೆಕ್ಟರ್ ರಫೀಕ್ ಬೇಕೂ ಅಂತನೇ ಶ್ರೀಕಾಂತ್ ಪೂಜಾರಿ ವಿರುದ್ಧ ಪ್ರಕರಣ ಹಾಕಿದ್ದಾರೋ ಅಥವಾ ಉದ್ದೇಶ ಪೂರಕವಾಗಿ ಇಡಲಾಗಿದೆಯೋ ಎಂಬ ವಿಷಯ ಬಹಿರಂಗವಾಗಬೇಕಿದೆ. ಕಾಂಗ್ರೆಸ್ ಕಾರ್ಯಕರ್ತರನ್ನೇ ದಿಕ್ಕು ತಪ್ಪಿಸುವ ಕೆಲಸ ಆಗ್ತಾ ಇದೆ ಎಂದು ದೂರಿದರು.

ಶಾಸಕ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೋಟ್ಯಾಂತರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಅವಾಗ ಬಿಜೆಪಿಯಲ್ಲಿದ್ದರು ರಾಮಭಕ್ತರಾಗಿದ್ದರು ಕೊಟ್ರು ಎಂದು ಹೇಳಿದ ಅವರು, ರಾಂಂದಿರ ಟ್ರಸ್ಟ್ ವತಿಯಿಂದ ಮನೆಗೆ ಆಹ್ವಾನ ಬಂದಿದೆ.  ಶ್ರೀಮತಿಯವರ ಹೆಸರಿನಲ್ಲಿ ಬಂದಿದೆ.  ಹೆಚ್ಚಿಗೆ ಆಹ್ವಾನ ಪತ್ರಿಕೆ ಕೊಡಿ ಹಣಕಟ್ತಿವಿ ಎಂದಿದ್ದೀವಿ ನೀವು ಬರೋದು ಬೇಡ ನಿಧಾನವಾಗಿ ಬಂದು ನೋಡ್ಕೊಂಡು ಹೋಗಿ. ಜ.22 ಕ್ಕೆ ಬರೋದು ಬೇಡ ಎಂದಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಮಂತ್ರಾಕ್ಷತೆಗೆ ಡಿಕೆಶಿ, ಸಿದ್ದರಾಮಯ್ಯನವರ ಮಂತ್ರಾಕ್ಷತೆ ಅಂತ ಇರೊಲ್ಲ. ಅಯೋಧ್ಯದಿಂದ ಬಂದ ಮಂತ್ರಾಕ್ಷತೆಗೆ ಬೆಲೆ ಇದೆ ಅಷ್ಟೆ ಎಂದು ದೂರಿದರು. ಕಾಂಗ್ರೆಸ್ ಗೆ ಹೇಗೆ ಕೌಂಟರ್ ಕೊಡಬೇಕು ಎಂಬುದು ವಿಲವಿಲ ಒದ್ದಾಡ್ತಾ ಇದೆ. ಗಲಭೆ‌ಆಗಬೇಕು ಅದರ ಮೂಲಕ ಲೋಕ ಸಭಾ ಚುನಾವಣೆ ಗೆಲ್ಲಬೇಕು ಎಂಬ ಕೆಟ್ಟ ಆಲೋಚನೆ ಇದೆ ಎಂದರು.

ಇದನ್ನೂ ಓದಿ-https://suddilive.in/archives/6218

Related Articles

Leave a Reply

Your email address will not be published. Required fields are marked *

Back to top button