ಡಿಕೆಶಿ ಭೇಟಿಯಾದ ಜಿಲ್ಲಾ ಕಾಂಗ್ರೆಸ್ ನಾಯಕರು-ಬೇಳೂರು ಬಾಯಿಗೆ ಬೀಳುತ್ತಾ ಬ್ರೇಕ್?

ಸುದ್ದಿಲೈವ್/ಬೆಂಗಳೂರು

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಮಧು ಬಂಗಾರಪ್ಪನವರ ಮೇಲೆ ನಿರಂತರ ವಾಗ್ದಾಳಿ ಮಾಡುತ್ತಿದ್ದು ಅವರಿಗೆ ಕಡಿವಾಣ ಹಾಕಲು ಸಚಿವರ ಬೆಂಬಲಿಗರು ಬೆಂಗಳೂರಿನ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ ಅವರನ್ನ ಭೇಟಿ ಮಾಡಿದ್ದಾರೆ.
ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಗದ್ದಲದಿಂದಾಗಿ ಸಚಿವ ಮಧು ಬಂಗಾರಪ್ಪ ವಿರುದ್ದ ಶಾಸಕ ಬೇಳೂರು ಗೋಪಾಲಕೃಷ್ಣ ನಿರಂತರ ವಾಗ್ದಾಳಿ ಹಿನ್ನೆಲೆ..
ಬೇಳೂರಿಗೆ ಮಾತಿಗೆ ಬ್ರೇಕ್ ಹಾಕುವಂತೆ ದೂರು ನೀಡಲು ಮಧುಬಂಗಾರಪ್ಪ ಬಣದ ಮುಖಂಡರು ಮುಂದಾಗಿದ್ದಾರೆ.
ಮಾಜಿ ಎಂಎಲ್‌ಸಿ ಪ್ರಸನ್ನ ಕುಮಾರ್, ಶಿಕಾರಿಪುರ ಕಾಂಗ್ರೆಸ್ ಮುಖಂಡ ನಾಗರಾಜ್‌ಗೌಡ, ಸಚಿವರ ಆಪ್ತ ಜಿಡಿ ಮಂಜುನಾಥ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ರುದ್ರನಗೌಡ್ರು, ಶಾಂತವೀರ್ ನಾಯಕ್, ಕಲಗೋಡ್ ರತ್ನಾಕರ್, ಎನ್ ರಮೇಶ್ ಸೇರಿದಂತೆ ಹಲವರು ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ದೂರು ನೀಡಲು ಆಗಮಿಸಿರುವ ಶಿವಮೊಗ್ಗ ಕಾಂಗ್ರೆಸ್ ಮುಖಂಡರು
ಬೇಳೂರು ಗೋಪಾಲಕೃಷ್ಣ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಮಧು ಬಂಗಾರಪ್ಪ ವಿರುದ್ದ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ
ಹೀಗಾಗಿ ಬೇಳೂರು ವಿರುದ್ದ ಕ್ರಮ ಕೈಗೊಳ್ಳಿ, ಇಲ್ಲವೇ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನ ಕೊಡದಂತೆ ಸೂಚನೆ ನೀಡಿ
ಡಿಕೆಶಿಗೆ ದೂರು ನೀಡಲು ಶಿವಮೊಗ್ಗ ಕಾಂಗ್ರೆಸ್ ಮುಖಂಡರು ದೂರಿದ್ದಾರೆ. ಇದರಿಂದ ಬೇಳೂರಿಗೆ ಶೋಕಾಸ್ ನೋಟೀಸ್ ಜಾರಿ ಮಾಡುವುದಾಗಿ ಭೇಟಿ ನೀಡಿರುವ ನಾಯಕರಿಗೆ ಡಿಕೆಶಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/2800
