ಕ್ರೈಂ ನ್ಯೂಸ್

ಬಹಿರ್ದೆಸೆ ಮುಗಿಸಿಕೊಂಡು ಬರುತ್ತಿದ್ದ ಕೂಲಿಕಾರ್ಮಿಕನನ್ನ ರಾಬರಿ ಮಾಡಿದ ಮೂವರು ಅಪರಿಚಿತರು

ಸುದ್ದಿಲೈವ್/ಶಿವಮೊಗ್ಗ

ತುಂಗ ಹಳೇ ಸೇತುವೆ ಬಳಿ ಬಹಿರ್ದೆಸೆ ಮುಗಿಸಿಕೊಂಡು ಬರುತ್ತಿದ್ದ ಕೂಲಿಕಾರ್ಮಿಕನ ಕೈ ಹಿಡಿದ ಮೂವರು ಅಪರಿಚಿತ ಯುವಕರು ಹಣ ಮತ್ತು ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ಕೂಡ್ಲಿ ಬಳಿಯ ಅಬ್ಬರಘಟ್ಟೆ ಗ್ರಾಮದಿಂದ ರಘು ಎನ್ನುವ ಗಾರೆ ಕೆಲಸ ಮಾಡುವಾತ ತನ್ನ ಅಣ್ಣನಿಗೆ 15 ಸಾವಿರ ರೂ. ಹಣ ನಿಡಬೇಕಿತ್ತು. ತನ್ನ ಬಳಿಯಿದ್ದ 12 ಸಾವಿರ ರೂ.ಗೆ ಮೂರು ಸಾವಿರ ರೂ. ಹಣ ಕಡಿಮೆ ಬಿದ್ದಿದ್ದರಿಂದ. ಈ ಮೂರು ಸಾವಿರ ರೂ.ಗಳನ್ನ ಹೊಂದಿಸಿಕೊಳ್ಳಲು ಶಿವಮೊಗ್ಗದಲ್ಲಿರುವ ಮೇಸ್ತ್ರಿ ಬಳಿಗೆ ಬರಬೇಕಿತ್ತು. ಬಸ್ ನಲ್ಲಿ ಬಂದ ರಘು ಹೊಳೆಹೊನ್ನೂರು ವೃತ್ತದ ಬಳಿ ಇಳಿದಿರುತ್ತಾನೆ.

ಬಸ್ ನಲ್ಲಿ ಹೊಳೆ ಬಸ್ ನಿಲ್ದಾಣದ ಬಳಿ ಇಳಿದು ಬಹಿರ್ದೆಸೆಗಾಗಿ ತುಂಗ ನದಿಯ ಹಳೆಯ ಬ್ರಿಡ್ಜ್ ಕೆಳಗೆ ತೆರಳಿದ್ದನು. ಬಹಿರ್ದೆಸೆ ಮುಗಿಸಿಕೊಂಡು‌ ವಾಪಾಸ್ ರಸ್ತೆ ಕಡೆಗೆ ಬರುವ ವೇಳೆ ಮೂವರು ಅಪರಿಚಿತ ಯುವಕರು ಚಾಕು ತೋರಿಸಿ ಆತನ ಕೈಯನ್ನ ಲಾಕ್ ಮಾಡಿಕೊಂಡಿದ್ದಾರೆ.

ಓರ್ವ ಆತನ ಪ್ಯಾಂಟ್ ಜೇಬಿನಲ್ಲಿದ್ದ 12 ಸಾವಿರ ರೂ. ಹಣವನ್ನ ಮತ್ತು 18 ಸಾವಿರ ರೂ.‌ಮೌಲ್ಯದ ಮೊಬೈಲ್ ನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಮೂವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅಂಡರ್ ಬ್ರಿಡ್ಜ್ ಬಳಿ ರಾಬರಿಯಾಗಿತ್ತು.

ಹೊನ್ನಾಳಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಬಳಿ ರೈಲಿಗಾಗಿ ಬಂದಿದ್ದ ಯುವಕರನ್ನ ಬೈಕ್ ನಲ್ಲಿ ಬಂದಿದ್ದ ಮೂವರು ಅಪರಿಚಿತರು ಹರಿತವಾದ ಆಯೂಧ ತೋರಿಸಿ ಹಣ ಮೊಬೈಲ್ ರಾಬರಿ ಮಾಡಿದ್ದರು. ರಾಬರಿ ಮಾಡಿದವರಲ್ಲಿ 20-25 ವರ್ಷದ ಯುವಕರಿದ್ದರು. ಅದರ ಬೆನ್ನಹಿಂದೆಯೇ ಕೂಲಿ ಕಾರ್ಮಿಕನ ಬಳಿ ಹಣ ಕೊತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/10206

Related Articles

Leave a Reply

Your email address will not be published. Required fields are marked *

Back to top button