ರಾಜ್ಯ ಸುದ್ದಿಗಳು

ವಿಸಿ ನೇಮಕಾತಿಗೆ ರಾಜ್ಯಪಲರಿಗೆ ಕಳುಹಿಸಲಾಗಿದೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿ ಖಾಲಿ ಇರುವ ವಿಸಿ ನೇಮಕಕ್ಕೆ ರಾಜ್ಯಪಾಲರಿಗೆ ಮನವಿ ಕಳುಹಿಸಿದ್ದೇವೆ ಎಂದು ಉನ್ಬತ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದರು.‌

ಮಾಧ್ಯಮಗಳಿಗೆ ಮಾತನಾಡಿದ ಅವರು ವಿಶ್ವ ವಿದ್ಯಾಲಯಗಳಲ್ಲಿ ಈ ಹಿಂದೆ ಕೆಎಎಸ್ ಐಎಎಸ್ ಅಧಿಕಾರಿ‌ ನೇಮಕ ಮಾಡುತ್ತಿದ್ದರು. ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರೊಫೆಸರ್ ಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದರು.

ಈಗ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡ್ತೇವೆ. ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ ಹಗರಣ ವಿಚಾರ ವಿವಿಯ ಆಂತರಿಕ‌ ವಿಚಾರವಾಗಿದೆ.ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದರು.

ಅತಿಥಿ ಉಪನ್ಯಾಸಕರ ಪ್ರತಿಭಟನೆಯನ್ನ ಅತಿಥಿ ಉಪನ್ಯಾಸಕರ ಸಮಸ್ಯೆ 20 ವರ್ಷದಿಂದ ಇರುವ ಸಮಸ್ಯೆಯಾಗಿದೆ. ಎಲ್ಲರೂ ಖಾಯಂಯಾತಿ ಮಾಡಿ ಅಂತಾರೆ. ಉಮಾದೇವಿ ಪ್ರಕರಣದ ನಂತರ ಖಾಯಮಾತಿ ಮಾಡಲು ಬರಲ್ಲ ಎಂದು ಸ್ಪಷ್ಟಪಡಿಸಿದರು.

ಬಹಳ ಜವಾಬ್ದಾರಿಯುತವಾಗಿ ಹಿಂದಿನ ಸರಕಾರ ಮಾಡದ ಕೆಲಸ ಮಾಡಿದ್ದೇವೆ. ಹೆಚ್ಚು ಸಂಬಳ‌ ಜೆಚ್ಚಿಸಲಾಗಿದೆ ಕಾನೊನು ತೊಡಕು ಬಹಳ ಇವೆ. ಯಾವುದಾದರೂ ರಾಜ್ಯದಲ್ಲಿ ಈ ರೀತಿ ಮಾಡಿದ್ದರೆ ಮಾಹಿತಿ ಕೊಡಿ ಅಂದಿದ್ದೇನೆಅತಿಥಿ ಉಪನ್ಯಾಸಕರಿಗೆ ನಮ್ಮ ಸರಕಾರ ಬಂದ ನಂತರ ಸೌಲಭ್ಯ ಹೆಚ್ಚು ಮಾಡಿದ್ದೇವೆ ಎಂದರು.

ಇದನ್ನೂ ಓದಿ-https://suddilive.in/archives/6107

Related Articles

Leave a Reply

Your email address will not be published. Required fields are marked *

Back to top button