ಸ್ಥಳೀಯ ಸುದ್ದಿಗಳು

ಶಂಕರ ಕಣ್ಣಿನ ಆಸ್ಪತ್ರೆಗೆ 16 ನೇ ವರ್ಷದ ಸಂಭ್ರಮ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹರಕೆರದಲ್ಲಿರುವ ಶಂಕರ ಕಣ್ಣಿನ ಆಸ್ಪತ್ರೆಗೆ 16 ನೇ ಸಂಭ್ರಮ. ಈ ಸಂಭ್ರಮಾಚರಣೆಯ ಅಂಗವಾಗಿ 15 ಸಾರ್ವಜನಿಕ ವಲಯದ ನೌಕರರಿಗೆ ಉಚಿತ ನೇತ್ರತಪಾಸಣೆಯನ್ನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೀಷ್ಠಿ ನಡೆಸಿದ ಆಸ್ಪತ್ರೆಯ ಪೋಷಕ ನರೇಂದ್ರ ಭಟ್ ಮಾತನಾಡಿ, ಧನ್ಯವಾದ ಹೇಳಲು ಸಂಭ್ರಮಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. ಸೇವೆಯೊಂದಿಗೆ ಸಂಭ್ರಮಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿಯಲ್ಲಿ ದೊಡ್ಡಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಫೆ.23 ಕ್ಕೆ ಆದಿಚುಂಚನಗಿರಿ ಸ್ವಾಮಿಗಳಾದ ನಿರ್ಮಲಾನಂದ ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದರು.

ನಾಳೆಯಿಂದ ಜಿಲ್ಲಾಧಿಕಾರಿಗಳಿಂದ ಈ ಸಂಭ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಹೊಸ ಸೇವೆಗಳು ಆರಂಭವಾಗಲಿದೆ. ಮಕ್ಕಳ ಕ್ಲೀನಿಕ್ ಅಂಗವಾಗಿ ಹೊಸ ಸೇವೆ ಆರಂಭಿಸಲಾಗುತ್ತಿದೆ. ಬಿ.ಮ್ಯಾಗಜಿನ್ ಸರ್ವೆ ಪ್ರಕಾರ 10 ರಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಉತ್ತಮ ಸೇವೆ ಆಸ್ಪತ್ರೆ ಎಂದು ಕಳೆದ ಮೂರು ವರ್ಷದಿಂದ ಕಾಪಾಡಿಕೊಂಡು ಬಂದಿದೆ ಎಂದರು.

ಸಂಭ್ರಮಾಚರಣೆಯ ಅಂಗವಾಗಿ 15 ಸಾರ್ವಜನಿಕ ವಲಯಗಳಲ್ಲಿ, ಸೇನೆ ಮತ್ತು ಮಾಜಿ ಸೇನಿಕರು, ಸಮಸ್ತ ಪೊಲೀಸ್ ಮತ್ತು ಸಂಚಾರಿ ಪೊಲೀಸ್ ಇಲಾಖೆಗೆ, ವೃದ್ಧಾಶ್ರಮಗಳು, ಸ್ವಾತಂತ್ರ್ಯ ಹೋರಾಟಗಾರರಿಗೆ, ಪಾಲಿಕೆ ಪೌರಕಾರ್ಮಿಕರು, ಆಟೋ ರಿಕ್ಷಾ , ಟ್ಯಾಕ್ಸಿ ಬಸ್ ಮತ್ತು ಲಾರಿ ಚಾಲಕರು.

ಉದ್ಯೋಗಿಗಳ ಅವಬಿತ ಪೋಷಕರು, ಶಿಕ್ಷಕರು, ಜಿಎನ್ ಎಂ, ಎಎನ್ ಎಂ ಮತ್ತು ಆಶಾಕಾರ್ಯಕರ್ತರು. ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಕೆಪಿಟಿಸಿಎಲ್ ಮತ್ತು ಮೆಸ್ಕಾಂ, ಜಿಲ್ಲಾಧಿಕಾರಿಗಳ ಕಚೇರಿಗಳ ಸಿಬ್ಬಂದಿಗಳು, ಹೆಚ್ಚುವರಿ ತಪಾಸಣೆಗಾಗಿ, ಮಾಧ್ಯಮ‌ ಪ್ರತಿನಿಧಿಗಳು ಮತ್ತು ಅವಲಂಭಿತರು. ಶಿಮೂಲ್ ಸದಸ್ಯರು, ಅಂಧರ ಶಾಲೆ ಮತ್ತು ಕಿವುಡ ಮತ್ತು ಮೂಕ ಶಾಲಾ ಮಕ್ಕಳು

ಅಗ್ನಿಶಾಮಕ ನೌಕರರು, ಕೇಂದ್ರ ಕಾರಾಗೃಹ ಸಿಬ್ವಂದಿಗಳು, ಗೃಹರಕ್ಷಕ ಸಿಬ್ಬಂದಿಗಳು, ಫೋಸ್ಟ್ ಆಫೀಸ್, ಬ್ಯಾಂಕ್ ಉದ್ಯೋಗಿಗಳು, ಅಬಕಾರಿ ಮತ್ತು ಔಷಧ ಇಲಾಕೆ‌ನೌಕರರಿಗೆ ಸೇವೆ ಸಲ್ಲಿಸಲಾಗುತ್ತಿದೆ.

ಇದುವರೆಗೂ 6,27,000 ರೋಗಿಗಳನ್ನ ಪರೀಕ್ಷಿಸಲಾಗಿದೆ. 2.5 ಲಕ್ಷ ಫಲಾನುಭಾವಿಗಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆಯನ್ನ ಒದಗಿಸಲಾಗುತ್ತಿದೆ. 1015309 ಮಕ್ಕಳಿಗೆ ತಡೆಗಟ್ಟುವ ಕಣ್ಣಿನ ಆರೈಕೆಯನ್ನ ಒದಗಿಸಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/6072

Related Articles

Leave a Reply

Your email address will not be published. Required fields are marked *

Back to top button