ಸ್ಥಳೀಯ ಸುದ್ದಿಗಳು

ಪರಸ್ಪರ ಕಿತ್ತಾಡಿಕೊಳ್ಳದೆ ಮಾತಿನಲ್ಲಿ ಬಗೆರಹರಿಸಿಕೊಂಡು ಕಾನೂನನ್ನ ಗೌರವಿಸಬೇಕು-ಭೂಮರಡ್ಡಿ

ಸುದ್ದಿಲೈವ್/ಹೊಳೆಹೊನ್ನೂರು

ವಿಜ್ಞಾನ ತಂತ್ರಜ್ಞಾನಗಳ ಸದ್ಬಳಕೆಯಿಂದ ಅಪರಾದಗಳ ತಡೆಗೆ ಸಹಕಾರಿ ಪೊಲೀಸ್ ಉಪ ಅಧಿಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಸಮೀಪದ ಆನವೇರಿಯಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಪರಾದ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮೈ ತುಂಭಾ ಆಭರಣ ಹಾಕಿಕೊಳ್ಳುವಾಗ ಎಚ್ಚರ ವಹಿಸಬೇಕು. ಮೊಬೈಲ್ ಉಪಕಾರವು ಹೌದು ಅಪಯಕಾರವು ಹೌದು. ಈತೀಚೇಗೆ ಅಂತಜಾರ್ಲದ ದುರ್ಬಳಕೆ ಹೆಚ್ಚಾಗುತ್ತಿದೆ. ಕಾನೂನು ಮಾತಿನಲ್ಲಿ ಬಗೆಹರಿಸಿಕೊಳ್ಳಬೇಕು. ಕಲಿಕೆ ಬೇಕಾದಷ್ಟು ಮೊಬೈಲ್ ಬಳಕೆಯಾಗಬೇಕು. ಮೊಬೈಲ್ ಬಳಸುವಾಗ ಪಾಲಕರು ಮಕ್ಕಳ ತೀವ್ರ ಮೇಲೆ ನೀಗಾವಹಿಸಬೇಕು. ಬಾಲ್ಯ ವಿವಾಹ ತಡೆಯಲು ಗ್ರಾಮಸ್ಥರ ಸಹಕಾರ ಮುಖ್ಯ. ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಚಿಕ್ಕ ವಯಸಿಗೆ ಮಾನಸಿಕ ಖಿನ್ನತೆ ಕಾಡುತ್ತದೆ ಎಂದರು.‌

ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳನ್ನು ಮರೆತು ಸಂಬಂಧಗಳು ಹಾಳಾಗುತ್ತಿವೆ. ಪರಸ್ಪರ ಪ್ರೀತಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ಹಿರಿಯರಿಗೆ ಗೌರವ ನೀಡುವುದನ್ನು ರೂಡಿಸಬೇಕು. ಮನೆಗಳಲ್ಲಿ ಚಿನ್ನಾಭರಣಗಳ ಮೇಲೆ ನಿಗಾ ವಹಿಸಬೇಕು. ಪರಸ್ಪರ ಕಿತ್ತಾಡಿಕೊಳ್ಳದೆ ಮಾತಿನಲ್ಲಿ ಕಲಹಗಳನ್ನು ಬಗೆಹರಿಸಿಕೊಂಡು ಕಾನೂನಿಗೆ ಗೌರವ ನೀಡಬೇಕು ಎಂದರು.

ಸಂಘದ ಅಧ್ಯಕ್ಷ ನಾಗರಾಜ್, ಗ್ರಾಪಂ ಅಧ್ಯಕ್ಷ ನಟರಾಜಪ್ಪಗೌಡ, ಉಪಾಧ್ಯಕ್ಷೆ ಸುಜಾತ, ವೃತ್ತ ನಿರೀಕ್ಷಕ ಲಕ್ಷ್ಮೀಪತಿ, ಮುಖ್ಯ ಶಿಕ್ಷಕ ನರೇಶಪ್ಪ, ಗ್ರಾಪಂ ಅಭಿವೃದ್ದಿ ಅಧಿಕಾರಿ ಸೈಯದ್ ಸೀಮಾ, ಮುಖ್ಯ ಕಾರ್ಯನಿರ್ವಣಾಧಿಕಾರಿ ಗಜೇಂದ್ರ, ತೇಜಾವತಿ, ರಘುನಾಥ್ ಇತರರಿದ್ದರು.

ಇದನ್ನೂ ಓದಿ-https://suddilive.in/archives/5227

Related Articles

Leave a Reply

Your email address will not be published. Required fields are marked *

Back to top button