ರಾಜ್ಯ ಸುದ್ದಿಗಳು

ಹೊಸ ವರ್ಷದ ಆರಂಭದಲ್ಲಿಯೇ ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್!

ಸುದ್ದಿಲೈವ್/ಶಿವಮೊಗ್ಗ

ಸರ್ಕಾರದ ಮುಂದೆ ಮದ್ಯಪ್ರಿಯರು ಹಲವಾರು ಬೇಡಿಕೆ ಇಟ್ಟಿರುವ ಸಂಗತಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಇದರಲ್ಲಿ ಸತ್ಯವೂ ಇದೆ.‌ ಮದ್ಯಪ್ರಿಯರ ಬೆಡಿಕೆ ಈಡೇರುತ್ತೋ ಇಲ್ಲವೋ ಗೊತ್ತಿಲ್ಲ.‌ಆದರೆ ಅವರ ಜೇಬಿಗಂತು ಪದೇ ಪದೇ ಕೈ ಹಾಕುವ ಕೆಲಸ ನಿರಂತರವಾಗಿ ರಾಜ್ಯದಲ್ಲಿ ನಡೆದಿದೆ.

ಆದರೆ ಈ ಬಾರಿ ಮದ್ಯ ಕಂಪನಿಗಳು ಮತ್ತು ಅಬಕಾರಿ ಇಲಾಖೆ ಮದ್ಯಪ್ರಿಯರಿಗೆ  ಶಾಕ್ ನೀಡಿದೆ. ಇಂದಿನಿಂದಲೇ ಮದ್ಯದ ದರಗಳಲ್ಲಿ ಏರಿಕೆಯಾಗಲಿದೆ. ಕೆಲವು ಬ್ರಾಂಡ್ ದರ 20-30 ರೂಪಾಯಿಗಳಷ್ಟು ಏರಿಕೆ ಕಂಡಿದೆ.

 ಅಬಕಾರಿ ಇಲಾಖೆಯು ಈ ಹಿಂದೆ ಮದ್ಯದ ದರ ಶೇ.17ರಷ್ಟು ಹೆಚ್ಚಿಸಿತ್ತು. ಈಗ ಮತ್ತೊಮ್ಮೆ ಮೂರು ಬ್ರಾಂಡ್​ಗಳ ದರದಲ್ಲಿ ಹೆಚ್ಚಳ ಮಾಡಿದೆ. ಮದ್ಯ ಕಂಪನಿಗಳು  ಪ್ರತಿ ಕ್ವಾರ್ಟರ್​​​ಗೆ 20-30 ರೂ. ಏರಿಸಿದೆ. ಅಬಕಾರಿ ಇಲಾಖೆ, ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.  ಕಂಪನಿಗಳು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ನೆಪ ಹೇಳುತ್ತಿದೆ.

ಯಾವ ಮದ್ಯ..? ಎಷ್ಟು ಏರಿಕೆ..?

ಬ್ರಾಂಡ್- 1 (180 ML) ಈಗಿನ ದರ 90 ರೂಪಾಯಿ. ಜನವರಿ 2 ರಿಂದ ಪರಿಷ್ಕ್ರತ ದರ  111 ರೂಪಾಯಿ.

ಬ್ರಾಂಡ್ – 2 (180 ML) ಈಗಿನ ದರ 110 ರೂ. ಪರಿಷ್ಕ್ರತ ದರ 145 ರೂ.

 ಬ್ರಾಂಡ್ – 3 (180 ML) ಈಗಿನ ದರ 90 ರೂ. ಪರಿಷ್ಕ್ರತ ದರ 111 ರೂ.

ಹೊಸವರ್ಷಕ್ಕೆ ಕ್ವಾಟ್ರು ಬಾಟೆಲ್ ಗಳ ಮಾರಾಟ ಕಮ್ಮಿ ಬಿಯರ್ ನಲ್ಲಿ ಹೆಚ್ಚಳ

ಹೊಸವರ್ಷದ‌ ಸಂಭ್ರಮದಲ್ಲಿ ಮದ್ಯ ಮಾರಾಟ ಭರದಿಂದ ಸಾಗುತ್ತವೆ. ಸರ್ಕಾರಕ್ಕೆ ಕೋಟ್ಯಾಂತರ ಲಾಭ ತಂದುಕೊಡುತ್ತವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ಎಂಎಲ್ ಗಳಲ್ಲಿ ಮಾರಾಟವಾಗುವ ಮದ್ಯಗಳ ಮಾರಾಟದಲ್ಲಿ ತಗ್ಗಿವೆ. 2022 ನೇ ಇಸವಿಗೆ ಹೋಲಿಸಿಕೊಂಡರೆ ಎಂ ಎಲ್ ಗಳಲ್ಲಿ ಮಾರಾಟವಾಗುವ ಮತ್ತು ಬಿಯರ್ ಮಾರಾಟ ಕೊಂಚ ತಗ್ಗಿದೆ.

2022 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಅಬಕಾರಿ ಇಲಾಖೆ  ಜಿಲ್ಲೆಯಲ್ಲಿ 1,92,027 ರೂ ಮದ್ಯ ಮಾರಾಟ ಮಾಡಿತ್ತು. ಆದರೆ 2023 ನೇ ಸಾಲಿನಲ್ಲಿ 2,2047ರೂ. ಮದ್ಯ ಮಾರಾಟದ ಗುರಿ ಹೊಂದಲಾಗಿತ್ತು. ಆದರೆ ಸಂಗ್ರಹವಾಗಿದ್ದು 1,88,813 ರೂ. ಸಂಗ್ರಹವಾಗಿದೆ. 2022 ನೇ ಸಾಲಿನಲ್ಲಿ ಮದ್ಯ ಮಾರಾಟಕ್ಕೂ 2023 ನೇ ಸಾಲಿನಲ್ಲಿ ಮಾರಾಟವಾದ ಮದ್ಯಕ್ಕೂ ಹೋಲಿಸಿಕೊಂಡರೆ ಶೇ.2 ರಷ್ಟು ಮದ್ಯ ಮಾರಾಟ ತಗ್ಗಿದೆ.

ಮದ್ಯ ಮಾರಾಟ ಕೊಂಚ ತಗ್ಗಿದ್ದಕ್ಕೆ  ನಿಖರ ಮಾಹಿತಿ ಇಲ್ಲ. ಆದರೂ ಮದ್ಯದ ಮೇಲಿನ ನಿರಂತರ ತೆರಿಗೆ ಹೆಚ್ಚಳವೂ ಸಹ ಆದಾಯ ಹೆಚ್ಚಳಕ್ಕೆ ಹೊಡೆತಬಿದ್ದರಬಹುದು ಎಂದು ಅಂದಾಜಿಸಲಾಗುತ್ತಿದೆ.‌

ಇದನ್ನೂ ಓದಿ-https://suddilive.in/archives/6046

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373