ಪರಿಹಾರದ ಮಾತನಾಡದೆ ವಾಪಾಸಾದ್ರಾ ಬಿಜೆಪಿ ನಾಯಕರು?

ಸುದ್ದಿಲೈವ್/ಶಿವಮೊಗ್ಗ

ಕೇವಲ ಮತಬ್ಯಾಂಕ್ ಗಾಗಿ ಬಿಜೆಪಿಯ ಸತ್ಯಶೋಧನ ಸಮಿತಿಯ ಹೆಸರಿನಲ್ಲಿ ಇಂದು ರಾಗಿಗುಡ್ಡಕ್ಕೆ ಭೇಟಿ ಕೊಟ್ಟಿರುವ ಅನುಮಾನ ವ್ಯಕ್ತವಾಗಿದೆ.
ಹಿಂದೂಗಳ ರಕ್ಷಕರು ಎನ್ನು ಬಿಜೆಪಿಗರು ಏಳೆಂಟು ಹಾನಿಗೊಳಗಾದ ಮನೆಗಳಿಗೆ ಭೇಟಿ ಕೊಟ್ಟರೂ ಮುಸ್ಲೀಂ ಗಲಭೆಕೋರರಿಂದ ಯಾವ ರಕ್ಷಣೆ ಮತ್ತು ಹಾನಿಉಂಟಾದ ಮನೆಗಳಿಗೆ ಒಂದು ನಯಾ ಪೈಸೆಯ ಕಾಸನ್ಬೂ ನೀಡದೆ ವಾಪಾಸ್ ಆಗಿರುವುದು ಅಚ್ಚರಿ ಮೂಡಿಸಿದೆ.
ಈದ್ ಮೆರವಣಿಗೆಯ ವೇಳೆ ಮನೆಗೆ ನುಗ್ಗಿ ದಾಂಧಲೆ ಮಾಡಲಾಗಿದೆ. ಬಹಳ ನಿರೀಕ್ಷೆಯಲ್ಲಿದ್ದ ಹಾನಿಗೊಳಗಾದ ಮನೆಯ ಮಾಲೀಕರಿಗೆ ಸತ್ಯಶೋಧನ ಸಮಿತಿ ಒಂದು ರೂಪಾಯಿಯನ್ನೂ ಘೋಷಿಸದೆ ತೆರಳಿರುವುದು ಬಹುತೇಕರಲ್ಲಿ ನಿರಾಶೆ ಮೂಡಿಸಿದೆ.
ಹಿಂದೂ ಭದ್ರ ಕೋಟೆಯಲ್ಲಿ ಸದಾ ಗೆದ್ದು ಬರುತ್ತಿರುವ ಬಿಜೆಪಿಗರಿಂದ ಹಾನಿಗೊಳಗಾದ ಮನೆಯ ಮಾಲೀಕರು ಪರಿ ಪರಿಯಾಗಿ ವಿವರಣೆ ನೀಡಿದ್ದಾರೆ. ಯಾವ ಪರಿಹಾರವನ್ನೂ ಘೋಷಿಸದ ನಾಯಕರಿಂದ ನಿರಾಶೆ ಮೂಡಿದೆ. ಹರ್ಷನ ಕೊಲೆಯಾದಾಗ ಹಣದ ಹೊಳೆಯೇ ಹರಿದು ಬಂದಿತ್ತು. ಆದರೆ ರಾಗಿಗುಡ್ಡದ ಹಿಂದೂ ಮನೆಗಳಿಗೆ ಯಾವ ಪರಿಹಾರವೂ ಘೋಷಣೆಯಾಗಿಲ್ಲ.
ರಾಜ್ಯ ಸರ್ಕಾರ ಪರಿಹಾರ ಘೋಷಿಸುವ ಬಗ್ಗೆ ಅನುಮಾನವಿದೆ. ಆದರೆ ಹಿಂದೂ ರಕ್ಷಕರು ಎನ್ನುವ ಹಾಗೂ ಭುಜತಟ್ಟಿ ಧೈರ್ಯ ತುಂಬುವ ಬಿಜೆಪಿ ಮುಖಂಡರೂ ತುಟಿ ಬಿಚ್ಚದೆ ಇರುವುದು ಅಚ್ಚರಿ ಮೂಡಿಸಿದೆ. ಸತ್ಯಶೋಧನಾ ಸಮಿತಿ ಎಂದರೆ ಸತ್ಯಾಂಶ ತಿಳಿದು ವಾಪಾಸಾಗುವುದು ಎನಿಸುತ್ತದೆ ಬಹುಶಃ ಪರಿಹಾರ ಘೋಷಿಸಲ್ಲ ಎನಿಸುತ್ತದೆ.
ಇದನ್ನೂ ಓದಿ-https://suddilive.in/archives/582
