ಕ್ರೈಂ ನ್ಯೂಸ್

ಪತ್ನಿಯನ್ನ ಮಾತನಾಡಿಸಿದ್ದಕ್ಕೆ ರೊಚ್ಚಿಗೆದ್ದ ಪತಿ

ಸುದ್ದಿಲೈವ್/ಸಾಗರ

ತನ್ನ ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪತಿಯೊಬ್ಬ ಮಾರಣಾಂತಿಕವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳಲಮಕ್ಕಿಯಲ್ಲಿ ನಡೆದಿದೆ.

ನೀರಿನ ಘಟಕದಲ್ಲಿ ಗುತ್ತಿಗೆ ಆದರದಲ್ಲಿ ಕೆಲಸ ಮಾಡುತ್ತಿದ್ದ ಯಲಕುಂದಿಯ ನವೀನ್ ಹಾಗೂ ಆತನ ಸ್ನೇಹಿತ ಧರೇಶ್ ಹಲ್ಲೆಗೊಳಗಾದ ವ್ಯಕ್ತಿಗಳಾಗಿದ್ದಾರೆ.
ತನ್ನ ಪತ್ನಿ ಜೊತೆ ನವೀನ್ ಎಂಬಾತ ಮಾತನಾಡುತ್ತಿದ್ದ ಎಂಬ ವಿಚಾರಕ್ಕೆ ಪತಿ ರವಿ ರೊಚ್ಚಿಗೆದ್ದು ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿನ ಮೇಲೆ ದಾಳಿ ಮಾಡಿದ್ದಾನೆ.

ಆರಂಭದಲ್ಲಿ ಕಾರಿನ ಗಾಜು ಒಡೆಯುತ್ತಿರುವ ಶಬ್ದ ಕೇಳಿ ನವೀನ್ ಮನೆಯಿಂದ ಹೊರಗೆ ಬಂದಿದ್ದಾನೆ. ತನ್ನ ಕಾರಿನ ಗಾಜು ಏಕೆ ಒಡೆಯುತ್ತಿರುವೆ ಎಂದು ನವೀನ್ ಕೋಪದಿಂದ ರವಿ ಬಳಿ ಕೇಳಿದ್ದಾನೆ. ಆಗ ರವಿ ಕತ್ತಿಯಿಂದ ನವೀನ್ ಮೇಲೆ ದಾಳಿ ಮಾಡಿದ್ದಾನೆ. ಬಿಡಿಸಲು ಬಂದ ಸ್ನೇಹಿತ ಧರೇಶ್ ಮೇಲೂ ರವಿ ಹಲ್ಲೆ ಮಾಡಿದ್ದಾನೆ.

ಘಟನೆಯಲ್ಲಿ ನವೀನ್ ಬೆರಳು ಕಟ್ ಆಗಿದ್ದು ಎದೆಭಾಗಕ್ಕೆ ತೀವೃತರವಾದ ಗಾಯವಾಗಿದೆ. ನವೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಧರೇಶ್ ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇಟೆ ಠಾಣೆ ಪೊಲೀಸರು ನವೀನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರವಿಕುಮಾರ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ-https://suddilive.in/archives/9344

Related Articles

Leave a Reply

Your email address will not be published. Required fields are marked *

Back to top button