ಮಲೆನಾಡಿಲ್ಲಿ ಸಂಭ್ರಮದ ಭೂಮಿ ಹುಣ್ಣಿಮೆ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ ಜೋರಾಗಿದೆ. ಸಡಗರ- ಸಂಭ್ರಮದಿಂದ ರೈತ ಸಮೂದಾಯ ಹಬ್ಬವನ್ನ ಆಚರಿಸುತ್ತಿದೆ.
ಈ ಸಮಯದಲ್ಲಿ ಬೆಳೆ ಬಂದು, ಭೂತಾಯಿ ಮೈತುಂಬಿಕೊಂಡಿರುತ್ತಾಳೆ ಎಂಬ ನಂಬಿಕೆ ಹಿನ್ನೆಲೆ ಭೂಮಿ ಪೂಜೆ ಆಚರಿಸಲಾಗುತ್ತಿದೆ. ಭೂತಾಯಿಗೆ ಸೀಮಂತದ ರೀತಿ ಸಿಂಗರಿಸಿ, ಪೂಜೆ ಸಲ್ಲಿಸಲಾಗುತ್ತದೆ.
ಬರವಿದ್ದರೂ ಶಿವಮೊಗ್ಗದ ವಿವಿಧೆಡೆ ಭೂಮಿ ಹುಣ್ಣಿಮೆಯನ್ನ ರೈತರು ಆಚರಿಸಿದ್ದಾರೆ. ವಿವಿಧ ರೀತಿ ತಿಂಡಿ- ತಿನಿಸು ತಯಾರಿಸಿ ಭೂತಾಯಿಗೆ ಅರ್ಪಿಸಲಾಗುತ್ತಿದೆ
ಮಲೆನಾಡಿನ ಈಡಿಗ- ದೀವರ ಸಮುದಾಯದಲ್ಲಿ ಭೂಮಿ ಹುಣ್ಣಿಮೆ ವಿಭಿನ್ನ ಆಚರಿಸಲಾಗುತ್ತಿದೆ. ಭೂಮಣಿ ಬುಟ್ಟಿ ತಯಾರಿಸಿ ಚಿತ್ತಾರ ಬರೆದು, ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ ನಡೆಯುತ್ತಿದೆ.
ಚಿತ್ತಾರದ ಬುಟ್ಟಿಯಲ್ಲೇ ಹೊಲ-ಗದ್ದೆಗೆ ತಯಾರಿಸಿದ ಅಡುಗೆ ಕೊಂಡೊಯ್ದು ಹಬ್ಬ ಆಚರಣೆ.ಶಿವಮೊಗ್ಗ ತಾಲೂಕಿನ ಪುರದಾಳು, ಶೆಟ್ಟಿಹಳ್ಳಿ, ಮಲೆಶಂಕರ ಭಾಗದಲ್ಲಿ ರೈತ ಸಮುದಾಯದಿಂದ ಹಬ್ಬ ಆಚರಣೆ ನಡೆಯುತ್ತಿದೆ.
ಹೊಲ-ಗದ್ದೆಗೆ ರಾತ್ರಿಯೀಡಿ ಮನೆಯಲ್ಲಿ ತಯಾರಿಸಿದ ಭೋಜನ ಸಮರ್ಪಿಸಿದ ರೈತರು, ನಂತರ ಹೊಲದಲ್ಲೇ ಸಾಮೂಹಿಕವಾಗಿ ಕುಟುಂಬಗಳು.ರಾತ್ರಿ ಊಟಮಾಡಿದ್ದಾರೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಣೆ ನಡೆದಿದೆ.
ಇದನ್ನೂ ಓದಿ-https://suddilive.in/archives/1972
