ಮನೆಯಲ್ಲೇ ಕಾಡು ಕೋಣದ ಮಾಂಸ ಪತ್ತೆ-ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣ

ಸುದ್ದಿಲೈವ್/ಶಿವಮೊಗ್ಗ

ಮನೆಯಲ್ಲೇ ಕಾಟಿ (ಕಾಡುಕೋಣ)ದ ಮಾಂಸ ಪತ್ತೆಯಾಗಿದ್ದು ಸಾಗರದ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದಾರೆ.
ಮನೆಯಲ್ಲೇ ಕಾಡುಕೋಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವನ್ಯಜೀವಿಗಳ ಟ್ರೋಫಿಗಳನ್ನ ಬೆನ್ನತ್ತಿರುವ ಅರಣ್ಯ ಇಲಾಖೆಯ ಕಾನೂನು ಕಾಯ್ದೆಯ ಬಗ್ಗೆ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ರಾಜಾರೋಷವಾಗಿ ಮಲೆನಾಡಿನಲ್ಲಿ ವನ್ಯಜೀವಿಗಳ ಮಾಂಸ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.
ಕಾಡುಕೋಣವನ್ನ ಭೇಟೆಯಾಡಿದ್ದೆಲ್ಲಿ? ಅಥವಾ ಈತ ಕಾಡುಕೋಣದ ಮಾಂಸವನ್ನ ಖರೀದಿಸಿದ್ದನಾ? ಖರೀದಿಸಿದ್ದರೆ ಎಲ್ಲಿ ಮಾರಾಟ ಮಾಡಲಾಗುತ್ತದೆ. ಎಂಬುದರ ಬಗ್ಗೆ ಅರಣ್ಯ ಇಲಾಖೆ ಜಾಡು ಹಿಡಿಯಬೇಕಿದೆ. ಇಲಾಖೆಯ ನಿರ್ಲಕ್ಷತೆಯಿಂದಲೇ ಈ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬಂದಿವೆ ಎಂಬ ಅನುಮಾನವೂ ಕಾಡಲಾರಂಭಿಸಿದೆ. ಇಲ್ಲೂ ಸಹ ಆರೋಪಿಗಳ ಹೆಸರು ಹೇಳಲು ಇಲಾಖೆ ಹಿಂದೇಟು ಹಾಕುತ್ತಿದೆ.
ಈದ್ ಮಿಲಾದ್ ಹಬ್ಬದ ದಿನದಂದು ಹೊಸನಗರ ತಾಲೂಕಿನಲ್ಲೊಂದು ಕಾಡುಕೋಣದ ಭೇಟೆಯಾಡಲಾಗಿತ್ತು. ಆ ಪ್ರಕರಣ ಮಾಧ್ಯಮಗಳಿಗೆ ತಲುಪದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿತ್ತು. ವಿದೇಶಿ ಬಂದೂಕು ಬಳಸಿಭೇಟಿಯಾಡಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ಇಲಾಖೆಯ ಅಧಿಕಾರಿಗಳೆ ಮಾಧ್ಯಮಕ್ಕೆ ಹೇಳದೆ ಪ್ರಕರಣವನ್ನ ಸಾರ್ವಜನಿಕರ ಮಾಹಿತಿ ಕೊಡಲು ಹಿಂದೇಟು ಹಾಕಲಾಗಿದೆ. ಆರೋಪಿಯನ್ನ ಬಂಧಿಸದೆ ಇರುವ ಶಂಕೆಯೂ ಹೊರಬಿದ್ದಿದೆ.
ಈ ಪ್ರಕರಣದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದ್ದರೆ ಜನರಿಗೆ ಜಾಗೃತಿ ಮೂಡುತ್ತಿತ್ತು. ಆದರೆ ಇಲಾಖೆ ಪ್ರಕಟಣೆನ್ನೇ ಹೊರಡಿಸದಿರುವುದು ಹಲವು ಶಂಕೆಗೆ ಎಡೆ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಈ ಪ್ರಕರಣ ಪತ್ತೆಯಾಗಿದೆ. ಹುಲಿ ಉಗುರು ಬೆನ್ನತ್ತಿರುವ ಇಲಾಖೆಗೆ ಮಲೆನಾಡಿನಲ್ಲಿ ನಡೆಯುತ್ತಿರುವ ವನ್ಯಜೀವಿಗಳ ಮಾಂಸದ ದಂಧೆಯನ್ನ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದನ್ನ ಓದಿ-https://suddilive.in/archives/2155
