ಸ್ಥಳೀಯ ಸುದ್ದಿಗಳು

ರಾಮ ಮಂದಿರದ ಕನಸು ನನಸಾಗಿದೆ, ಮುಂದಿನ ಗುರಿ ಕೃಷ್ಣ ಮಂದಿರ ನಿರ್ಮಾಣ

ಸುದ್ದಿಲೈವ್/ಶಿವಮೊಗ್ಗ

ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟವನ್ನೇ ನಡೆಸಿದ್ದರು. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕ ಕರ ಸೇವಕರು ಜೀವ ತ್ಯಾಗ‌ಮಾಡಿದ್ದಾರೆ ಎಂದು ಪುತ್ತಿಗೆ ಮಠದ ದಿವಾನ್ ಗೋಪಾಲ ಆಚಾರ್ಯ ತಿಳಿಸಿದರು.

ಅವರು ನಗರದ ಮೈಲಾರ ದೇವಸ್ಥಾನದಲ್ಲಿ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿರುವ ರಾಮ ಮಂದಿರಕ್ಕೆ ಮಂತ್ರಾಕ್ಷತೆ ವಿತರಣೆ ಮಾಡಲು ಇಂದು 291 ಬೂತ್ ಗಳಲ್ಲಿ ಅಕ್ಷತೆಯ ಪಾತ್ರೆಯನ್ನ ಕಾರ್ಯಕರ್ತರಿಗೆ ಹಂಚುವ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ ಮಾತನಾಡಿದರು.

ಕೃಷ್ಣ ಹಾಗೂ ರಾಮ ಬೇರೆ ಬೇರೆ ಅಲ್ಲ. ಹಿಂದೂಗಳು ಒಗ್ಗಟ್ಟಾಗಲು ಶ್ರೇಷ್ಠ ಗ್ರಂಥ ಭವದ್ಗೀತೆ. ಇದರ ಆಂದೋಲನ ಎಲ್ಲಿಯ ವರೆಗೆ ಆಗೊಲ್ಲ ಅಲ್ಲಿಯ ವರೆಗೆ ದೇಶ ಪರಿಪೂರ್ಣವಾಗುವುದಿಲ್ಲ ಎಂದರು.

ಅಶೋಕ್ ಸಿಂಘಾಲ್ ಮತ್ತು ಪುತ್ತಿಗೆ ಶ್ರೀಗಳ ಜೊತೆ ಒಡನಾಟವಿತ್ತು. ಭಗವದ್ಗೀತೆಯನ್ನ ವಿದೇಶಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬಾಯಲ್ಲಿ ಹೇಳಿಸಬಹುದಾಗಿದೆ. ಆದರೆ ಭಾರತದಲ್ಲಿ ಆಕ್ಷೇಪ ಕಂಡುಬರುತ್ತಿದೆ. ಹೀಗಾಗಿ ಶ್ರೀಗಳು ಭಗವದ್ಗೀತ ಕೋಟಿ ಆಂದೋಲನ ಆರಂಭಿಸಿದರು ಎಂದು ವಿವರಿಸಿದರು.

ನಮಗೆ ಮೊಬೈಲ್ ಒತ್ತಲು ಸಮಯವಿದೆ. ಗೀತೆ ಬರೆಯಲು ಸಮಯವಿಲ್ಲದಂತಾಗಿದೆ. ಗೀತೆ ಬರೆಯುವ ವರೆಗೆ ಮೊಬೈಲ್ ಮುಟ್ಟೋಲವೆಂಬ ಸಂಕಲ್ಪ ಮಾಡಬೇಕಿದೆ ಎಂದರು.

ರಾಮ ಮಂದಿರದ ಕನಸು ನನಸಾಗಿದೆ. ಮುಂದೆ ಇರೋದು ಕೃಷ್ಣನ ಯಾತ್ರೆ. ಅದಕ್ಕೆ ಭವದ್ಗೀತೆ ಮೂಲಕ ಕೃಷ್ಣನ ಯಾತ್ರೆಗೆ ಈಗಿನಿಂದಲೇ ಚಾಲನೇ ನೀಡೋಣ ಎಂದರು. ಇದಕ್ಕೂ ಮೊದಲು ರಾಮಮಂದಿರ ನಿರ್ಮಾಣದ ಆಂದೋಲನದಲ್ಲಿ ಭಾಗಿಯಾದವರಿಗೆ ಸನ್ಮಾನಿಸಲಾಯಿತು.

ಇದನ್ನೂ ಓದಿ-https://suddilive.in/archives/5850

Related Articles

Leave a Reply

Your email address will not be published. Required fields are marked *

Back to top button