ಕುತೂಹಲಕ್ಕೆ ಕಾರಣವಾದ ಕೆಪಿಸಿಸಿ ವಕ್ತಾರರ ಹೇಳಿಕೆ!

ಸುದ್ದಿಲೈವ್/ಶಿವಮೊಗ್ಗ

ಭಷ್ಠಾಚಾರದ ಬಗ್ಗೆ ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಅಯನೂರು ಮಂಜುನಾಥ್ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಅದೇ ಪಕ್ಷದಲ್ಲಿ ಎಂಎಲ್ ಸಿ ಆಗಿದ್ದ ಆಯನೂರು ಮಂಜುನಾಥ್ ಆಗ ಬಿಜೆಪಿಯ ಭ್ರಷ್ಠಾಚಾರದ ಬಗ್ಗೆ ತುಟಿಬಿಚ್ಚದೆ, ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದು ಬಾಯಿ ಬಿಚ್ಚುತ್ತಿರುವುದು ಕುತೂಹಲ ಮೂಡಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ 1000 ಕೋಟಿ ಸಾಲ ಮಾಡಿದ್ದನ್ನು ಕಾಂಗ್ರೆಸ್ ತೀರಿಸಬೇಕಿದೆ. ಕಾಮಗಾರಿಗಳ ಟೆಂಡರ್ ವೇಳೆ ತಮ್ಮೆಲ್ಲ ಪಾಲನ್ನು ಬಿಜೆಪಿ ನಾಯಕರು ತೆಗೆದುಕೊಂಡಿದ್ದಾರೆ. ಈಗ ಬಿಲ್ ಪಾವತಿ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರ ಬಳಿ ಬಿಜೆಪಿ ಎಷ್ಟು ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರೆ ಒಳ್ಳೆಯದು.ಭ್ರಷ್ಟಾಚಾರಿ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ 50 ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಶಾಸಕರು ಛೀ.. ಥೂ.. ಎಂದು ಈ ನಾಯಕರನ್ನು ಹೊರಗೆ ಕಳುಹಿಸುತ್ತಿದ್ದಾರೆ. ಬಿಜೆಪಿ ಜೆಡಿಎಸ್ ತಮ್ಮಲ್ಲಿರುವ ಭ್ರಷ್ಟಾಚಾರದ ಹಣವನ್ನು ಇಟ್ಟುಕೊಂಡು ಈ ಸರ್ಕಾರ ಮೂರು ತಿಂಗಳು ಇರುವುದಿಲ್ಲ ಎಂದು ಹೇಳುತ್ತಿದ್ದಾರೆ.ಈ ಭ್ರಷ್ಟಾಚಾರದ ಹಣವನ್ನು ಕೇಂದ್ರ ಸರ್ಕಾರದಿಂದ ತಂದಿದ್ದಿರೋ ಅಥವಾ ತಾವೇ ಇಟ್ಟುಕೊಂಡಿದ್ದೋ ಸ್ಪಷ್ಟಪಡಿಸಬೇಕೆಂದು ತಿಗೇಟು ನೀಡಿದ್ದಾರೆ.
ಬಿಎಸ್ ವೈ ಸಿಎಂ ಆಗಿದ್ದಾಗ ಅವರನ್ನು ಬ್ಲಾಕ್ ಮೇಲ್ ಮಾಡಿ ಮುಜುಗರವನ್ನುಂಟು ಮಾಡಿದವರು ಇಂದು ಸರ್ಕಾರ ಬೀಳಿಸುವ ಯತ್ನ ನಡೆಸಿದ್ದಾರೆ. ಈಶ್ವರಪ್ಪನವರ ಮೇಲೆ 40% ಆಪಾದನೆ ಇತ್ತು. ಮಾಧ್ಯಮದ ಮುಂದೆ ಈಶ್ವರಪ್ಪ ಕಾಂಗ್ರೆಸ್ ನವರು ನಮಗಿಂತ ಡಬಲ್ ತಿನ್ನುತ್ತಿದ್ದಾರೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಮೊದಲು ಈಶ್ವರಪ್ಪನವರನ್ನು ಬಂಧಿಸಿ ಅವರು ನಡೆಸಿದ ಭ್ರಷ್ಟಾಚಾರ ಎಷ್ಟು ಎಂಬುದು ಬಯಲಿಗೆ ಎಳೆಯ ಬೇಕಿದೆ ಎಂದು ಆಗ್ರಹಿಸಿದರು. ಆದರೆ ಭ್ರಷ್ಠಾಚಾರವನ್ನ ಬಯಲಿಗೆಳೆಯಲು ಅವರದ್ದೇ ಸರ್ಕಾರ ಇದ್ದರೂ ಈ ರೀತಿಯ ಆಗ್ರಹಿಸಿರುವುದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ
ಬಿಜೆಪಿಯವರು ತಮ್ಮ ಕಪ್ಪು ಹಣದಿಂದ ಕಾಂಗ್ರೆಸ್ ಸರ್ಕಾರ ಮುಟ್ಟುವ ಕೆಲಸ ಏನಿದೆ ಅದನ್ನ ಮೊದಲು ನಿಲ್ಲಿಸಲಿ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರದ ಬಗ್ಗೆನೂ ಪ್ರಸ್ತಾಪಿಸಿದ ಆಯನೂರು ಮಂಜುನಾಥ್, ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿಯವರ ಆಂತರಿಕ ವಿಚಾರವಾಗಿದೆ. ಐ ಎನ್ ಡಿ ಐಎ ಒಕ್ಕೂಟಕ್ಕೆ ಅವರು ಬಂದರೆ ಸ್ವಾಗತ ಎಂದರು.
ಇದನ್ನೂ ಓದಿ-https://suddilive.in/archives/1471
