ಸ್ಥಳೀಯ ಸುದ್ದಿಗಳು

ಗೋಪಾಳದಲ್ಲಿ ಒಂದೇ ದಿನ‌ ಏಳುಜನರಿಗೆ ಹುಚ್ಚು ನಾಯಿದಾಳಿ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗೋಪಾಳದ ಮೋರ್ ಸುತ್ತಮುತ್ತ ಹುಚ್ಚುನಾಯಿಯೊಂದು ಹಾವಳಿವಿಟ್ಟಿದೆ.‌ ಒಂದೇ ದಿನ ಏಳು ಜನರಿಗೆ ಕಚ್ಚಿದ್ದು, ಜೊತೆಗೆ ಇತರೆ ನಾಯಿಗೂ ಕಚ್ಚುವ ಮೂಲಕ ಅವುಗಳಿಗೂ ಹುಚ್ಚು ಹಬ್ಬಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋರ್ ಬಳಿ ಹುಚ್ಚುನಾಯಿಯೊಂದು ನಿನ್ನೆ ಏಳು ಜನರಿಗೆ ಕಚ್ಚಿದೆ. ಎಲ್ಲರೂ ಮೆಗ್ಗಾನ್ ಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಒಂದೇ ದಿನ ಏಳು ಜನರಿಗೆ ಕಚ್ಚಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶಾಲೆ ಮಕ್ಕಳು ಅಡ್ಡಾಡುತ್ತಿರುವುದರಿಂದ ಮಕ್ಕಳಿಗೆ ಕಚ್ಚಿದರೆ ಪರಿಣಾಮ ಏನು ಎಂಬುದರ ಬಗ್ಗೆ ಆತಂಕ ಮೂಡಿಸಿದೆ.

ಸಾರ್ವಜನಕಿರಿಗೆ ಕಚ್ಚಿರುವುದಲ್ಲದೆ ಇತರೆ ನಾಯಿಗಳಿಗಳಿಗೂ ಕಚ್ಚಿ ಹುಚ್ಚನ್ನ ಹಬ್ಬಿಸುತ್ತಿದೆ ಎಂಬುದು ಸ್ಥಳೀಯರು ಆರೋಪವಾಗಿದೆ.
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸುತ್ತಿಲ್ಲೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/5653

Related Articles

Leave a Reply

Your email address will not be published. Required fields are marked *

Back to top button