ಇಂದು ಸಹ ವಿಮಾನ ಹಾರಾಟ ರದ್ದು

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ಇಂಡಿಗೋ ವಿಮಾನ ಹಾರಟ ಆರಂಭವಾಗಿ ಎರಡು ತಿಂಗಳು ಕಳೆದಿದೆ. ಎರಡು ತಿಂಗಳಲ್ಲಿ ಹಲವು ಬಾರಿ ವಿಮಾನ ಹಾರಾಟ ತಡವಾಗಿ ಸಂಚರಿಸಿದೆ. ಇಂದು ಸಹ ಇದರ ಹಾರಾಟ ತಡವಾಗಿದೆ.
ಬೆಂಗಳೂರಿನಿಂದ 9-50 ಕ್ಕೆ ಕೆಂಪೇಗೌಡ ವಿಮಾನನಿಲ್ದಾಣದಿಂದ ಹಾರಾಟ ಆರಂಭಿಸಿದರು ಸಹ ಶಿವಮೊಗ್ಗಕ್ಕೆ 11-05 ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 11-20 ಕ್ಕೆ ಲ್ಯಾಂಡ್ ಆಗಿದೆ. 11-30 ಕ್ಕೆ ಶಿವಮೊಗ್ಗದಿಂದ ಪುನಃ ಬೆಂಗಳೂರಿಗೆ ಹೊರಡಬೇಲಿದ್ದ 7731 ಕ್ರಮ ಸಂಖ್ಯೆಯ ಇಂಡಿಗೋ ಫ್ಲೈಟ್ 1-15 ಆದರೂ ಹಾರಾಡದೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉಳಿದಿದೆ.
ಅಧಿಕಾರಿಗಳ ಪ್ರಕಾರ ವಿಮಾನದ ತಾಂತ್ರಿಕ ದೋಷದಿಂದ ವಿಮಾನ ಹಾರಾಟ ತಡವಾಗಿದೆ ಎನ್ನಲಾಗಿತ್ತು. ಈ ರೀತಿಯ ಹಲವಾರು ಬಾರಿ ತಡ ವಿಮಾನ ಪ್ರಯಾಣದ ಬಿಸಿ ಈಗಾಗಲೇ ಪ್ರಯಾಣಿಕರಿಗೆ ಮುಟ್ಟಿದೆ. ಇಂದು ಮತ್ತೊಮ್ಮೆ ತಟ್ಟಿದೆ.
ವಿಮಾನ ಹಾರಾಟ ತಡವಾದ ಕಾರಣ ಇಂದು ಬೆಂಗಳೂರಿಗೆ ಹಾರಬೇಕಿದ್ದ ವಿಮಾನ ಹಾರಾಟ ರದ್ದಾಗಿದೆ. 60 ಜನ ಇಂದು ಇಂಡಿಗೋ ವಿಮಾನದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರು ವಾಪಾಸ್ ಆಗಿದ್ದಾರೆ.
ಇದನ್ನೂ ಓದಿ-https://suddilive.in/archives/2238
